ಹೊಸ ಹೆಜ್ಜೆ ; ಹೊಸ ಹಾದಿ
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಗ್ರಾಮೀಣ ಭಾಗದ ಜನರ ಶ್ರಮಕ್ಕೆ ಪ್ರತಿಫಲ ಸಿಗುವ ಸುಗ್ಗಿಯ ಹಿಗ್ಗನ್ನು ತರುವ ಸುಗ್ಗಿ ಹಬ್ಬ.
ಸೂರ್ಯದೇವ ತನ್ನ ಪಥ ಬದಲಿಸುವ ಅಮೃತಘಳಿಗೆ. ಸಂಕ್ರಮಣದ ಈ ದಿನ ಹೊಸತಿನ ಕ್ಷಣ. ಹೊಸ ಆಲೋಚನೆ, ಹೊಸ ಕನಸು, ಹೊಸ ಆಸೆ, ಹೊಸ ಗುರಿ, ಹೊಸ ಕೈಂಕರ್ಯ, ಹೊಸ ನಡೆ, ಹೊಸ ವ್ಯಕ್ತಿತ್ವ , ಹೊಸ ಹೆಜ್ಜೆಗೆ ದೃಢ ಸಂಕಲ್ಪದ ಗೆಜ್ಜೆ ಕಟ್ಟಿ ಮುನ್ನಡೆಯುವ ಸುದಿನ.
ಪರಸ್ಪರ ಎಳ್ಳು ಬೆಲ್ಲ ಹಂಚಿ ಸವಿ ನುಡಿಗಳನ್ನು ಹಾಡಿ. ಸವಿಗನಸುಗಳನ್ನು. ಹಂಚಿಕೊಂಡು ಸೋದರತೆಯ ಭಾವ ಬಿತ್ತಿ ಬದುಕಿನ ಸಮೃದ್ಧತೆ, ಸಂಪನ್ನತೆ ಮತ್ತು ಸಾರ್ಥಕತೆ ಕಡೆಗೆ ದೃಢವಾದ ನಿಶ್ಚಿತ ಹೆಜ್ಜೆಗಳನ್ನು ಇಡುವ ಸುಮಧುರ ದಿನ.
ಈ ದಿನ ಸಮಸ್ತ ಕನ್ನಡಿಗರಿಗೆ, ಸಮಸ್ತ ಮನುಕುಲಕ್ಕೆ ಒಳಿತಾಗಲಿ..ಜಾತಿ, ಮತ, ಧರ್ಮ, ಪಂಥಗಳ ಗೊಜಲುಗಳು, ತಾರತಮ್ಯಗಳು, ಕೀಳರಿಮೆಗಳು ತೊಲಗಿ ನಾವೆಲ್ಲರೂ ಒಂದೇ, ನಾವೆಲ್ಲರೂ ಕನ್ನಡಿಗರು,, ನಾವೆಲ್ಲರೂ ಭಾರತೀಯರು ಎಂಬ ಏಕಾಭಾವ ಸರ್ವರಲ್ಲೂ ಮೂಡಿ ಸರ್ವ ಜನೋ ಸುಖಿನೋ ಭವಂತು ಆಗಲಿ.. ಒಳಿತನ್ನು ಆಡೋಣ, ಒಳಿತನ್ನು ಬಿತ್ತೋಣ, ಒಳಿತಾದ, ವಸ್ತುನಿಷ್ಠವಾದ ಸುದ್ದಿ ಬರಿಯೋಣ, ಒಳಿತಿನ ಮಹಿಮೆಯನ್ನು ಜಗಕೆ ಸಾರೋಣ. .ಅದುವೇ ಸುದ್ದಿ ಕನ್ನಡದ ಪರಮ ಗುರಿ, ಅದುವೇ ಪರಮೋದ್ದೇಶ, ಅದುವೇ ಸುದ್ದಿ ಕನ್ನಡದ ಅಂತರ್ಸತ್ವ… ಜಯ ಕನ್ನಡ, ಜಯ ಕನ್ನಡ, ಜಯಜಯಹೇ ಕನ್ನಡ….

