Astrology in kannada | kannada news
ಮೇಷ:
ಮಾರ್ಗಾಯಾಸದಿಂದ ಕಾಲಹರಣವಾದೀತು. ಹಣ ಸದ್ವಿನಿಯೋಗದಿಂದ ಕಾರ್ಯಸಿದ್ಧಿ, ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ನೆಮ್ಮದಿಯ ಜೀವನ ಹತ್ತಿರವಿದೆ.
ವೃಷಭ:
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ, ಆದಾಯ ಉತ್ತಮವಿದ್ದರೂ ಖರ್ಚು ಜಾಸ್ತಿ, ನ್ಯಾಯಾಲಯ ಕೆಲಸ ಕಾರ್ಯಗಳು ಮುನ್ನಡೆಯಲ್ಲಿ ಸಾಗಲಿವೆ.
ಮಿಥುನ:
ಜಲೋತ್ಪನ್ನ ವಸ್ತುಗಳಿಗೆ ಬೇಡಿಕೆ, ವಾಹನ ಖರೀದಿಸುವಾಗ ದುಡುಕದಿರಿ, ವಿದ್ಯಾರ್ಥಿಗಳಿಗೆ ಯಶೋಭಿವೃದ್ಧಿ ಇರುತ್ತದೆ. ವಿವಾಹಕ್ಕೆ ಅನುಕೂಲಕರ ಸಮಯ.
ಕಟಕ:
ಬಂಧು ವರ್ಗದವರಿಂದ ಸಹಾಯ, ಪುಣ್ಯ ಕಾರ್ಯದಿಂದ ನೆಮ್ಮದಿ ತಂದೀತು, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ, ಮನಸ್ಸಿಗೆ ನೆಮ್ಮದಿ ಕಾಣುವಿರಿ.
ಸಿಂಹ:
ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇರಲಿ, ಬ್ಯಾಂಕ್ ಹೋಟೆಲ್, ಭೂ ಖರೀದಿ ವ್ಯವಹಾರಸ್ಥರಿಗೆ ಉತ್ತಮ ಲಾಭ ತಂದು ಕೊಡಲಿದೆ. ಆಗಾಗ ಕಿರಿಕಿರಿಯಿಂದ ಬೇಸರ.
ಕನ್ಯಾ:
ಪ್ರವಾಸದಿಂದ ಸಂತಸ, ಹಣಕಾಸು ವಿಚಾರದಲ್ಲಿ ಜಾಗ್ರತೆ ಮಾಡಿದಷ್ಟು ಉತ್ತಮ, ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ, ಅಲೆದಾಟ ಜಾಸ್ತಿಯಾಗಲಿದೆ.
ತುಲಾ:
ಬಂಧು ವರ್ಗದ ಸಹಕಾರ ಸಂತಸ ತಂದೀತು, ಹಿರಿಯರಿಗೆ ಗೌರವ, ಸನ್ಮಾನ ನಿಮ್ಮ ಸಂಪಾದನೆ ಹೆಚ್ಚಿನ ರೀತಿಯಲ್ಲಿ ವೃದ್ಧಿಯಾಗಲಿದೆ. ಪ್ರೇಮಿಗಳಿಗೆ ಸಂತಸ.
ವೃಶ್ಚಿಕ:
ಸಾಂಸಾರಿಕವಾಗಿ ನೆಮ್ಮದಿ ತರುತ್ತದೆ. ವಿದ್ಯೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಇರುತ್ತದೆ. ಪ್ರಭಾವಿತ ವ್ಯಕ್ತಿಗಳ ಸಹಕಾರದಿಂದ ಕಾರ್ಯಸಿದ್ಧಿ, ಆರೋಗ್ಯ ಭಾಗ್ಯ.
ಧನಸ್ಸು:
ದೇವತಾಕಾರ್ಯಗಳಿಂದ ಖರ್ಚು ತಂದೀತು, ಅತೃಪ್ತಿ ಮನೋಭಾವದಿಂದಾಗಿ ಕಸಿ ವಿಸಿಯಾಗಲಿದೆ, ದಿನಾಂತ್ಯದಲ್ಲಿ ಅನಿರೀಕ್ಷಿತ ಶುಭವಾರ್ತೆ ಕೇಳಿ ಬರಲಿದೆ.
ಮಕರ:
ಅವಿವಾಹಿತರಿಗೆ ಸಂಭ್ರಮದ ಕಾಲ, ಯಂತ್ರ ಸಾಮಗ್ರಿಗಳಿಗೆ ಖರ್ಚು, ಆದರೂ ಕಾರ್ಯಾನುಕೂಲಕ್ಕೆ ಸಾಧಕವಾದೀತು. ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಅಗತ್ಯ.
ಕುಂಭ:
ಸಮಸ್ಯೆಗಳ ಜಂಜಾಟದಿಂದ ಮುಕ್ತರಾಗುವಿರಿ, ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ, ವೃತ್ತಿರಂಗದಲ್ಲಿ ಮುಂಭಡ್ತಿಯ ಸೂಚನೆ.
ಮೀನ:
ಪಿತ್ರಾರ್ಜಿತಕ್ಕಾಗಿ ಸ್ವಲ್ಪ ಕಲಹ, ಆಗಾಗ ಕಾರ್ಯಕ್ಷೇತ್ರದಲ್ಲಿ ಶತ್ರುಭೀತಿ, ನಿಮ್ಮ ತಾಳ್ಮೆ-ಸಹನೆ ಅಗತ್ಯ, ಹೋಟೆಲ್ ವ್ಯಾಪಾರದಲ್ಲಿ ಲಾಭ.
Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!