ಪ್ರಪಂಚ ಕಂಡ ಮಹಾನ್ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ..

0
605

Kannada News | Karnataka News

 • ಸ್ಟೀಫನ್ ಹಾಕಿಂಗ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ..76 ವಯಸ್ಸಿನ ವಿಜ್ಞಾನ ಲೋಕ ಕಂಡ ಮಾಹಾನ್ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನರಾಗಿದ್ದಾರೆ..
 • 1942 ಜನವರಿ 8 ರಂದು ಸ್ಟೀಫನ್ ಹಾಕಿಂಗ್ ಜನಿಸಿದ್ದರು.. ತಮ್ಮ 21 ನೇ ವಯಸ್ಸಿನಲ್ಲಿಯೇ ಮಾರಕ ರೋಗವಾದ ಅಪಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಖಾಯಿಲೆಗೆ ತುತ್ತಾದರೂ.. ದೇಹಪೂರ್ತಿ ನಿಶಕ್ತವಾಯಿತು..
 • ಕೇವಲ ಒಂದೆರೆಡು ವರ್ಷಗಳ ಕಾಲ ಮಾತ್ರ ಬದುಕುತ್ತಾರೆ ಎಂದು ವೈದ್ಯರು ತಿಳಿಸಿದ್ದರು..

 • ಅದೇ ಸಮಯದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಸಂಶೋಧನೆ ಮಾಡುತ್ತಿದ್ದ ಸ್ಟೀಫನ್ ಹಾಕಿಂಗ್ ರವರಿಗೆ ಖಾಯಿಲೆಯ ಕಾರಣ ಆಸಕ್ತಿ ಕಡಿಮೆಯಾಗುತ್ತಾ ಬಂತು..
 • ಬದುಕುವಷ್ಟು ಕೆಲವೇ ದಿನಗಳಲ್ಲಿ ದುಖಃದಿಂದ ಕೊರಗುವ ಬದಲು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಧೃಡ ನಿರ್ಧಾರ ಮಾಡಿದರು.. ಇವರಿಗೆ ಜೊತೆಯಾಗಿ ತಮ್ಮ ಮಡದಿ ಜೇನ್ ನಿಂತರು..
 • ಜೇನ್ ರವರು ಸ್ಪೂರ್ತಿ ತುಂಬಿದ ರೀತಿ ಸ್ಟೀಫನ್ ರವರು ಸಾಧನೆಯ ಹಾದಿಯನ್ನು ಹಿಡಿಯುವ ಹಾಗೆ ಮಾಡಿತ್ತು.. ಸಾವಿನ ಭಯದಿಂದ ಹೊರಬರುವ ಹಾಗೆ ಮಾಡಿತು..

 • ದಿನೇ ದಿನೇ ಆರೋಗ್ಯ ಹದಗೆಡುತ್ತಲೇ ಬಂತು.. ಆದರೆ ಸಾಧನೆ ಮಾತ್ರ ಶಿಖರಕ್ಕೇರುತ್ತಲೇ ಇತ್ತು..
 • ಅವರ ಜೀವನದ ಕೆಲವು ಘಟ್ಟಗಳು ಇಲ್ಲಿವೆ ನೋಡಿ..
 • 1974 ರಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು..
 • 1982 ರಲ್ಲಿ ಬ್ರಿಟಿಷ್ ಸರ್ಕಾರ “ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್” ನೀಡಿ ಗೌರವಿಸಿತು..
 • ಸ್ಟೀಫನ್ ರವರು ಬರೆದ “ಎ ಬ್ರೀಫ್ ಹಿಸ್ಟರಿ ಆಫ್ ಟೈಮ್” ವಿಜ್ಞಾನ ಗ್ರಂಥಗಳಲ್ಲಿ ಒಂದು ವಿಶೇಷವಾದ ಮೈಲಿಗಲ್ಲಾಯಿತು.. ಪ್ರಪಂಚದ ಜನಪ್ರಿಯ ವಿಜ್ಞಾನದ ಪುಸ್ತಕವಾಗಿ ದಾಖಲಾಯಿತು..

 • ಎರೆಡು ವರ್ಷಗಳಲ್ಲಿ ಸಾವು ಬರುತ್ತದೆಂಬ ಮಾತನ್ನೇ ಮರೆತು ಸಾಧನೆಯಲ್ಲಿ ಮುಳುಗಿ ಹೋದರು.. ಸಾವೂ ಕೂಡ ಈ ಮಹಾನ್ ಸಾಧಕನನ್ನು ಕರೆದುಕೊಂಡು ಹೋಗುವುದು ಅನ್ಯಾಯವೆಂದು ಭಾವಿಸಿರಬೇಕು.. ಅದಕ್ಕಾಗಿಯೇ ಸಂಶೋಧನೆ ಮಾಡುತ್ತಲೇ 76 ವರ್ಷಗಳ ಕಾಲ ಜೀವಿಸಿದರು..
 • ಆದರೆ ದೇಹ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತಾದರೂ.. ಗಾಲಿ ಕುರ್ಚಿಯ ಮೇಲೆ ಕುಳಿತು ಧ್ವನಿಯನ್ನು ಅರ್ಥೈಸಿಕೊಳ್ಳುವ ಕಂಪ್ಯೂಟರ್ ಅನ್ನು ಬಳಸುತ್ತಿದ್ದರು..
 • ನಿಖರತೆ ಹೊಂದಿದ್ದ ಸ್ಟೀಫನ್ ರವರ ಮೆದುಳಿನಿಂದಾಗಿ ಈಗಲೂ ಕೂಡ ಪ್ರಪಂಚದ ವಿಜ್ಞಾನಿಗಳಲ್ಲಿ ಮೊದಲಿಗರಾಗೇ ಉಳಿದರು.. ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದ್ದರು..
 • ಸಾವು ಬಂದೇ ಬಿಟ್ಟಿತು ಎಂದರೂ ಕೂಡ ಸಾವನ್ನೇ ಹೆದರಿಸಿ ಸಾಧನೆಯ ಶಿಖರವೇರಿದ ಸ್ಟೀಫನ್ ರವರಿಗೆ ನಮ್ಮ ಕಡೆಯಿಂದ ನಮನ ಸಲ್ಲಿಸೋಣ..

Also Read: ಭಾರತದ ಯುದ್ಧವಿಮಾನದ ಮೊದಲ ಮಹಿಳಾ ಪೈಲೆಟ್ ಬಗ್ಗೆ ತಿಳಿದುಕೊಳ್ಳಿ, ಪ್ರತಿಯೊಬ್ಬ ಬಾಲಕಿಗೆ ಹಾಗೂ ಯುವತಿಯರಿಗೆ ಈಕೆ ಸ್ಫೂರ್ತಿ..

Kannada News | Karnataka News

LEAVE A REPLY

Please enter your comment!
Please enter your name here