ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವರು ಮಾತ್ರೆ ಮದ್ದುಗಳ ಮೊರೆ ಹೋಗೋ ಬದ್ಲು ಇಲ್ಲಿಗೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ …

0
1349

Kannada News | Health tips in kannada

ನನ್ನ ಹೆಸರು ಮಂಜುಳಾ ರಾಮು, ೫೮ ವರ್ಷದವಳು. ಸುಮಾರು ೫ ವರ್ಷಗಳಿಂದ ರಾತ್ರಿ ನಿದ್ದೆ ಇಲ್ಲದೆ ಸುಮ್ಮನೆ ಒದ್ದಾಡುತ್ತಿದ್ದೆ. ಹೋಮಿಯೋಪತಿ ಆಯುರ್ವೇದ ಅಲೋಪತಿ ಚಿಕಿತ್ಸೆಗಳ ಮೊರೆ ಹೋದರು ಕಿಂಚಿತ್ತೂ ಪರಿಹಾರ ಸಿಗಲಿಲ್ಲ. ಮುಟ್ಟಿನ ಏರುಪೇರಿಂದ ಈ ಸಮಸ್ಯೆ ಉಂಟಾಗಿದೆ ಅಂತ ಎಲ್ಲ ವೈದ್ಯರು ಸಮಾಧಾನ ಪಡಿಸಿದರು ಸಹ ನಿದ್ರೆ ಬಾರದೆ ದಿನಚರಿಯೆಲ್ಲ ಏರುಪೇರಾಗುತ್ತಿತ್ತು. ರೆಸ್ಟಿಲ್, ಆಂಕ್ಸಿಟ್ ಟ್ಯಾಬ್ಲೇಟ್ಸ್ ಗಳು ಏನು ಸಹಾಯ ಮಾಡದಿದ್ದಾಗ ಕೊನೆಯದಾಗಿ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಲು ನಿರ್ಧರಿಸಿದೆ.

ನನ್ನ ಮಗಳು ಇಂಟರ್ನೆಟ್ ಜಾಲಾಡಿ ನಮ್ಮ ಮನೆಯ ಸಮೀಪದಲ್ಲಿರುವ ಎಂಆರ್ಆರ್ ನ್ಯೂಲೈಫ್ ಯೋಗ ಮತ್ತು ನ್ಯಾಚುರೋಪತಿ ಕ್ಲಿನಿಕ್ ಗೆ ನನ್ನನ್ನು ಕರೆದೊಯ್ದಳು. ನನ್ನ ಕೆಲ ಸ್ನೇಹಿತರು ಇಲ್ಲಿ ಯೋಗ ಚಿಕಿತ್ಸೆ ಮತ್ತು ಅಕ್ಯುಪಂಕ್ಟುರೆ ಚಿಕಿತ್ಸೆಗಳಿಂದ ಗುಣವಾಗಿದ್ದು ನೋಡಿ ಈ ಕ್ಲಿನಿಕ್ ಮೇಲೆ ಹೆಚ್ಚು ಭರವಸೆ ಮೂಡಿತ್ತು. ಇತರೆ ಕ್ಲಿನಿಕ್ ಗಳಂತೆ ಇಲ್ಲಿ ಹೆಚ್ಚು ಹೊತ್ತು ಕಾಯುವ ಕಷ್ಟವಿರಲಿಲ್ಲ. ಇಲ್ಲಿರುವ ವೈದ್ಯರು ದಿನಕ್ಕೆ ಕಡಿಮೆ ರೋಗಿಗಳಿಗೆ ಅಪ್ಪೋಯಿಂಟ್ಮೆಂಟ್ ಕೊಡುವುದರಿಂದ ಆ ಸಮಯಕ್ಕೆ ಹೋದದ್ದರಿಂದ ಸದರಿಗೆ ಕಾಯುವ ಪರಿತಾಪವಿರಲಿಲ್ಲ. ಮೊದಲಿಗೆ ಸುವಿಸ್ತಾರವಾಗಿ ನನ್ನ ತೊಂದರೆಗಳನ್ನು ಹೇಳತೊಡಗಿದಾಗ, ಅಷ್ಟೇ ತಾಳ್ಮೆಯಿಂದ ಕೇಳಿ ನನ್ನನ್ನು ೧೦ ದಿನಗಳ ಕಾಲ ದಿನಕ್ಕೆ ೧ ಗಂಟೆಯ ಕಾಲ ಬರುವಂತೆ ಹೇಳಿದಾಗ ಇಷ್ಟು ಮಾತ್ರೆ ಮದ್ದುಗಳಿಂದ ಗುಣವಾಗದೆ ಇದ್ದದ್ದು ಇವರ ಮಾತ್ರೆರಹಿತ ಟ್ರೀಟ್ಮೆಂಟ್ ಗಳಿಂದ ಹೇಗೆ ವಾಸಿಯಾಗುತ್ತೆ ಅಂದ್ಕೊಂಡು ಸುಮ್ನೆ ದುಡ್ಡು ಖರ್ಚು ಮಾಡ್ತಿಯಾ ಅಂತ ನನ್ನ ಮಗಳಿಗೆ ಬೈದದ್ದು ಆಯ್ತು. ನನ್ನ ಮಗಳು ಎಫೆಕ್ಟ್ ಆಗ್ದಿದ್ರು ಸೈಡ್ ಎಫೆಕ್ಟ್ ಇರಲ್ಲ ಅಂತ ಕನ್ವಿನ್ಸ್ ಮಾಡಿದ್ಮೇಲೆ ಟ್ರೈ ಮಾಡೇ ಬಿಡೋಣ ಅಂತ ರಿಜಿಸ್ಟ್ರೇಷನ್ ಸಹ ಮಾಡಿಸಿದೆ.

ದಿನ ಸಂಜೆ ೬ ರಿಂದ ೭ ರ ವರೆಗೆ ಅಕ್ಯುಪಂಕರ್, ಯೋಗ ಚಿಕಿತ್ಸೆ ಮತ್ತು ಇನ್ನು ಹಲವು ಪ್ರಕೃತಿ ಚಿಕಿತ್ಸೆಗಳನ್ನು ತೆಗೆದುಕೊಳ್ಳಲಾರಂಭಿಸಿದ ಮೇಲೆ ಆಶ್ಚರ್ಯವೆಂಬಂತೆ 3 ನೇ ದಿನದಿಂದ ನನಗೆ ಒಳ್ಳೆಯ ನಿದ್ರೆ ಬರಲಾರಂಭಿಸಿತು. ಚಿಕಿತ್ಸೆ ನೀಡದ ದಿನವೂ ನನಗೆ ಒಳ್ಳೆಯ ನಿದ್ರೆಯೇ ಬಂದಿದ್ದರಿಂದ ಕಳೆದು ಕೊಂಡಿದ್ದು ಮರಳಿ ಪಡೆದಷ್ಟು ಖುಷಿ ನನಗೆ. ಈಗಾಗಲೇ ಟ್ರೀಟ್ಮೆಂಟ್ ಮುಗಿಸಿ ಮೂರು ತಿಂಗಳುಗಳೇ ಕಳೆದು ಹೋಗಿದೆ. ಪ್ರತಿರಾತ್ರಿಯು ಸುಖ ನಿದ್ದೆ ಈಗಲೂ ಬರುತ್ತಿದೆ. ನಾನು ಗುಣಮುಖವಾದೊಡನೆ ನನ್ನ ತಾಯಿ ಮತ್ತು ಅತ್ತಿಗೆಗೆ ಈ ಚಿಕಿತ್ಸೆ ಕೊಡಿಸಿದೆ. ಅವರು ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿಪಡೆದಿದ್ದಾರೆ. ನನ್ನಂತೆ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತ ಈ ಕ್ಲಿನಿಕ್ ಗೆ ಭೇಟಿ ಕೊಡಿ. ಈ ಚಿಕಿತ್ಸೆಗಳಿಂದ ಎಳ್ಳಷ್ಟೂ ಅಡ್ಡಪರಿಣಾಮಗಳಿಲ್ಲದ ಕಾರಣ ಯಾವುದೇ ವಯಸ್ಸಿನವರು ಈ ಚಿಕಿತ್ಸೆಯಿಂದ ಗುಣಮುಖರಾಗಬಹುದು ಎಂಬುದು ಇಲ್ಲಿನ ಡಾಕ್ಟರ್ ಹೇಳುತ್ತಾರೆ.

ಇವರನ್ನು ಸಂಪರ್ಕಿಸಬಹುದಾದ ವಿಳಾಸ:

ಎಂ. ಆರ್.ಆರ್ ನ್ಯೂಲೈಫ್
#372 /A , ಎರಡನೇ ಮಹಡಿ 50 ಫೀಟ್ ರೋಡ್,
ನಿರ್ಮಲ ಸ್ಟೋರ್ ಬಸ್ ಸ್ಟಾಪ್ ಬಳಿ
ಹನುಮಂತ ನಗರ, ಬೆಂಗಳೂರು
Mob no : 9071904622 , 7907356626 , 8217224840.

Also Read: ಸೌತ್ ಬೆಂಗಳೂರಿನಲ್ಲೊಂದು ತವರು ಮನೆ…ಅಜ್ಜಿಮನೆಯ ಅಭ್ಯಂಗ ಮಿಸ್ ಮಾಡ್ಕೊಳ್ತಾ ಇದ್ರೆ ಹನುಮಂತನಗರದ ಈ ಪ್ರಕೃತಿ ಚಿಕಿತ್ಸಾಲಯಕ್ಕೆ ಖಂಡಿತ ಭೇಟಿ ನೀಡಲೇಬೇಕು..

LEAVE A REPLY

Please enter your comment!
Please enter your name here