ಈ ಕಾರಣಗಳನ್ನು ಓದಿದರೆ ನಿಮಗೇ ಗೊತ್ತಾಗುತ್ತೆ ನಮ್ಮ ಶಂಕ್ರಣ್ಣ ಯಾಕೆ ಇಂದಿಗೂ ಒಬ್ಬ ಸೂಪರ್ ಸ್ಟಾರ್ ಅಂತ..

0
612

Kannada News | Karnataka Achiecers

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ಖ್ಯಾತ ನಟ, ನಿರ್ದೇಶಕ, ಸಂಗೀತ ಸಂಯೋಜಕ, ಬಹುಮುಖ ಪ್ರತಿಭೆ ದಿವಂಗತ ಶಂಕರ್ ನಾಗ್ ಅವರು ತಮ್ಮ ಮನೋಜ್ಞ ಅಭಿನಯದಿಂದ ಕನ್ನಡಿಗರ ಮನೆ ಮಾತಾಗಿದ್ದರು, ಅವರ ಬಗ್ಗೆ ಒಂದಷ್ಟು ವಿಶೇಷ ಮಾಹಿತಿ ಇಲ್ಲಿದೆ ನೋಡಿ.

ನವೆಂಬರ್ 9, 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಊರಿನಲ್ಲಿ ಆನಂದಿ ಮತ್ತು ಸದಾನಂದ ನಾಗರಕಟ್ಟೆ ದಂಪತಿಗಳಿಗೆ 3 ನೇ ಸಂತಾನವಾಗಿ ಶಂಕರ ನಾಗ್ ಅವರು ಜನಿಸಿದರು. ಶಂಕರ್ ನಾಗ್ ಅವರ ಅಕ್ಕನ ಹೆಸರು ಶ್ಯಾಮಲಾ ಮತ್ತು ಅಣ್ಣ ಖ್ಯಾತ ಹಿರಿಯ ನಟ ಅನಂತ್ ನಾಗ್.

ಅವರು B.com ಓದುತ್ತಿದ್ದ ಸಮಯದಲ್ಲಿ, ನಾಟಕ ಮತ್ತು ವೇದಿಕೆಯ ಕಡೆಗೆ ಅವರ ಆಸಕ್ತಿ ಬೆಳೆಯಿತು. ಈ ಆಸಕ್ತಿ ಆಕಾರವನ್ನು ತೆಗೆದುಕೊಂಡಿತು. ಶಂಕರ್ ನಾಗ್ ಮುಂಬೈ ಗೆ ಹೋಗಿ ಅಲ್ಲಿಯ ನಗರದ ವೇಗವನ್ನು ಕಂಡು ಅಚ್ಚರಿಯಾದರೂ. ಬೆಂಗಳೂರಿಗೆ ಬಂದಾಗ, ಎಲ್ಲವೂ ನಿಧಾನಗತಿಯ ಚಲನೆಯಲ್ಲಿ ಚಲಿಸುತ್ತಿವೆ ಎಂದು ಅವರು ಹಂಸಲೇಖ ಅವರಿಗೆ ಹೇಳಿದ್ದರಂತೆ.

ಈ ಮೊದಲು ಹೇಳಿದ ಹಾಗೆ ಅವರು ಕೇವಲ ಒಂದೇ ಕೆಲಸಕ್ಕೆ ಸೀಲಿತವಲ್ಲ, ಅವರೊಬ್ಬ ಬಹುಮುಖ ಪ್ರತಿಭೆ ಸಂಗೀತ ಅಭಿರುಚಿ ಇದ್ದ ಕಾರಣ ತಬಲ, ಕೊಳಲು, ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತ್ತಿದ್ದರು.

ನಟಿಸಿದ ಮೊದಲ ಚಿತ್ರದ ಅಭಿನಯಕ್ಕೆ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಅದಾದ ನಂತರ ಶಂಕರ್ ಅವರು ಮುಟ್ಟಿದೆಲ್ಲಾ ಚಿನ್ನ, 12 ವರ್ಷಗಳಲ್ಲಿ ಸುಮಾರು 90 ಚಿತ್ರಗಳಲ್ಲಿ ನಟಿಸಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.

ಮಿಂಚಿನ ಓಟ ದಿಂದ ಶುರುವಾಗಿ ಜನ್ಮ ಜನ್ಮದ ಅನುಬಂಧ, ಗೀತ, ಆಕ್ಸಿಡೆಂಟ್, ಸೀತಾ ರಾಮು, CBI ಶಂಕರ್, ಒಂದು ಮುತ್ತಿನ ಕಥೆ, ನೋಡಿ ಸ್ವಾಮೀ ನಾವಿರೋದು ಹೀಗೆ, ಟಿವಿ ಯ ಖ್ಯಾತ ಮಾಲ್ಗುಡಿ ಡೇಸ್ ಮತ್ತು ಹೊಸ ತೀರ್ಪು ಸಿನೆಮಾಗಳು ಹೊಸ ಮೈಲಿಗಳನ್ನು ನಿರ್ಮಿಸುವುದರ ಜೊತೆಗೆ ಹಲವಾರು ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

source: thehindu.com

ಒಂದು ಮುತ್ತಿನ ಕಥೆ ಚಿತ್ರದಲ್ಲಿ ದಿವಂಗತ ಡಾ.ರಾಜಕುಮಾರ್ ಅವರ ಜೊತೆ ನೀರಿನೊಳಗೆ ಮೊದಲ ಬಾರಿ ಚಿತ್ರಿಸಿದ ಮೊದಲ ಭಾರತದ ಚಿತ್ರವೆಂಬ ಹೆಗ್ಗಳಿಕೆ ಪಾತ್ರವಾದರು. ಕನ್ನಡದ ಚಿತ್ರರಂಗದ ಇಬ್ಬರು ಮೇರು ನಟರಾದ ಡಾ.ರಾಜ ಮತ್ತು ಶಂಕರನಾಗ್ ಅವರ ಜೋಡಿ ಅದ್ಭುತ. ಇವರ ಇನ್ನೊಂದು ಚಿತ್ರ ಅಪೂರ್ವ ಸಂಗಮ ಇನ್ನಾದರೂ ಜನರ ಬಾಯಲ್ಲಿ ಕೇಳಿಬರುತ್ತಿರುತ್ತದೆ.

ಶಂಕರ್ ಅವರಿಗೆ ಕಾರು ಕಂಡರೆ ಒಂತರ ಪ್ರೀತಿ ಮತ್ತು ಅದಕ್ಕಿಂತ ಹೆಚ್ಚಾಗಿ, ಅವರು ಆ ಕಾರುಗಳ ತಯಾರಿಕೆಯ ಹಿಂದೆ ತಂತ್ರಜ್ಞಾನವನ್ನು ಪ್ರೀತಿಸಿದರು. ಇತರ ನಟ ನಟಿಯರಿಗಿಂತ ಭಿನ್ನವಾಗಿ, ತನ್ನ ಆಸಕ್ತಿಗಳನ್ನು ಕಾಪಾಡಿಕೊಳ್ಳಲು ಒಬ್ಬ ಮ್ಯಾನೇಜರ್ ಅನ್ನು ಇಟ್ಟುಕೊಳ್ಳದೆ ಎಷ್ಟೇ ಬ್ಯುಸಿ ಇದ್ದರು ಕಾರುಗಳನ್ನು ತಾವೇ ನೋಡಿಕೊಳ್ಳುತ್ತಿದ್ದರು.

source: jamuura.com

ಶಂಕರ್ 2-3 ಜೋಡಿ ಜೀನ್ಸ್ ಮತ್ತು 10-12 ಜೋಡಿ ಪೈಜಾಮಾಗಳನ್ನು ಹೊಂದಿದ್ದರು. ಪ್ರತಿ ಭಾನುವಾರ, ಶಂಕರ್ ತನ್ನ ಬಟ್ಟೆಗಳನ್ನು ಬೀರುಗಳಿಂದ ಹೊರಗೆ ಹಾಕಿ ಅವುಗಳನ್ನು ಪರೀಕ್ಷಿಸುತ್ತಿದ್ದರಂತೆ. ಒಬ್ಬ ಸೂಪರ್ ಸ್ಟಾರ್ ಆಗಿದ್ದರು ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರಂತೆ.

Also Read: ಬ್ಯುಟಿಗೆ ಬದಲಾಗಿ 100 ಕೋಟಿ ಆದಾಯ ಇರೋನ್ನ ಮದುವೆ ಆಗೋಕೆ ಏನು ಮಾಡಬೇಕು ಎಂಬ ಚೆಲುವೆ ಪ್ರಶ್ನೆಗೆ ಅಂಬಾನಿ ಕೊಟ್ಟ ಉತ್ತರ ಎಲ್ಲರಿಗೂ ಪಾಠ!

Also Watch:

LEAVE A REPLY

Please enter your comment!
Please enter your name here