IAS ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿತ್ತೇ? ಇತ್ತು ಎಂದು ಗಂಭೀರ ಆರೋಪ ಹೊರಿಸುತ್ತಿದ್ದಾರೆ ತಿವಾರಿ ಕುಟುಂಬ…

0
318

Kannada News | Karnataka News

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿವಾದಗಳು, ಆರೋಪಗಳು ಸುಲಭವಾಗಿ ಬಿಡುವ ಹಾಗೆ ಕಾಣುತಿಲ್ಲ. ನಿತ್ಯ ಒಂದು ಹೊಸ ಆರೋಪ, ಹೊಸ ವಿವಾದ ಕೇಳಿಬರುತ್ತಲೇ ಇವೆ. ಈ ಆರೋಪಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ IAS ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡ.

ಹೌದು, IAS ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡ ಇದೆಯಂತೆ, ಹೀಗೆ ಹೇಳಿಕೆ ನೀಡಿರುವುದು ವಿರೋಧ ಪಕ್ಷದವರು ಅಥವಾ ಸಿಎಂ ಶತ್ರುಗಳಲ್ಲ, ಖುದ್ದು IAS ಅಧಿಕಾರಿ ಅನುರಾಗ್ ತಿವಾರಿ ಅವರ ತಂದೆಯವರಾದ ಬಿಎನ್ ತಿವಾರಿ ಅವರು.

ಮಗನ ಅನುಮಾನಾಸ್ಪದ ಸಾವಿನ ಹಿಂದೆ ಸಿಎಂ ಸಿದ್ದರಾಮಯ್ಯನವರ ಕೈವಾಡದವಿದೆ, ನನ್ನ ಮಗ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇದು ಭ್ರಷ್ಟಾಚಾರ ಮಾಡುವವರಿಗೆ ಇಷ್ಟವಿರಲಿಲ್ಲ, ಅದಕ್ಕಾಗಿ ಪ್ಲಾನ್ ಮಾಡಿ ನನ್ನ ಮಗನನ್ನು ಕೊಂಡಿದ್ದಾರೆ ಅದರಲ್ಲಿ ಸಿಎಂ ಕೈವಾಡವಿದೆ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು IAS ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಒಂದು ವರ್ಷದ ಬಳಿಕ ಬಿಎನ್ ತಿವಾರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. CBI ಅಧಿಕಾರಿಗಳು ಪ್ರಕರಣದಲ್ಲಿನ ನಿಜವಾದ ಆರೋಪಿಗಳನ್ನು ರಕ್ಷಿಸಲು ವಿನಾಕಾರಣ ನಮ್ಮನ್ನು ವಿಚಾರಣೆ ಮಾಡಿ ಕಾಲ ಹರಣ ಮಾಡುತ್ತಿದ್ದಾರೆ ಎಂದು ಅನುರಾಗ್ ತಿವಾರಿ ತಂದೆ ಬಿಎನ್ ತಿವಾರಿ ಹೇಳಿದ್ದಾರೆ.

ಮಗನ ಮೇಲೆ ಕೆಲವು ಫೈಲ್‍ಗಳ ಮೇಲೆ ಸಹಿ ಮಾಡಲು ತೀವ್ರ ಒತ್ತಡವಿತ್ತು, ಅವನ ಸಾವಿನ ಕೆಲ ಸಮಯದ ನಂತರ ಕೆಲವು ದಾಖಲೆಗಳನ್ನು ಕರ್ನಾಟದಲ್ಲಿದ್ದ ಮನೆಯಿಂದ ಕಾಣೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

36 ವರ್ಷದ ಅನುರಾಗ್ ತಿವಾರಿ ರಾಜಧಾನಿ ಬೆಂಗಳೂರಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು ಕಳೆದ ಮೇ 17 ರಂದು ಲಕ್ನೋದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿದ್ದರು.

Also Read: ಲಂಚ ನೀಡದೆ ಕೇವಲ 15 ನಿಮಿಷದಲ್ಲಿಯೇ ಹೇಗೆ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರ ಪಡೆಯಬೇಕು ಅಂತ ಗೊತ್ತೇ?

LEAVE A REPLY

Please enter your comment!
Please enter your name here