ಒಂದು ಹೆಣ್ಣು ಈ ರೀತಿಯೆಲ್ಲಾ ಅಪೇಕ್ಷೆ ಪಡುತ್ತಾಳ..?

0
449

Kannada News | kannada Useful Tips

ಪ್ರಪಂಚದಲ್ಲಿ ಅರ್ಥವಾಗದ ಒಂದು ಜೀವ ವೆಂದರೆ ಅದು ಹೆಣ್ಣು.. ಹೌದು ಇದು ಅಣಕಿಸಿಕೊಳ್ಳುವ ವಿಷಯವಲ್ಲ.. ಅವಳ ಅಂತರಂಗದ ನೋವನ್ನೆಲ್ಲಾ ಸಹಿಸಿಕೊಂಡು ನಗು ಬೀರುವ ಆ ಮಹಾ ತಾಯಿ ಯಾರಿಗೂ ಅರ್ಥವಾಗುವುದೂ ಇಲ್ಲ ಬಿಡಿ..

ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಜೀವನ ಪರಿಪೂರ್ಣಗೊಳಿಸುವ ಆ ಹೆಣ್ಣನ್ನು ಸಂತೋಷವಾಗಿಟ್ಟು ಕೊಳ್ಳುವುದು ಎಲ್ಲರ ಕರ್ತವ್ಯ… ಆದರೆ ಅರ್ಥವಾಗದಿರುವ ಹೆಣ್ಣಿನ ಅಪೇಕ್ಷೆಗಳೇನು ಎಂಬುದು ತಿಳಿಯದೇ ಅವಳನ್ನು ಸಂತೋಷವಾಗಿಟ್ಟುಕೊಳ್ಳುವುದು ಕಷ್ಟವೇ ಸರಿ..

ಇಲ್ಲಿದೆ ನೋಡಿ ಹೆಣ್ಣು ಅಪೇಕ್ಷೆ ಪಡುವ ಕೆಲ ಸಂಗತಿಗಳು.. ಸಾಧ್ಯವಾದರೆ ಪೂರೈಸಿ ಸಂತೋಷ ಪಡಿಸಿ..

ತಾಯಿಯಾಗಿ ಹೆಣ್ಣು ಅಪೇಕ್ಷೆ ಪಡುವ ಸಂಗತಿಗಳು..

  • ತನ್ನ ಮಗ ಅಥವಾ ಮಗಳು ಎಷ್ಟು ದೊಡ್ಡವರಾದರೂ ಕೂಡ.. ಚಿಕ್ಕ ಮಗುವಿನಂತೆ ಕಾಣುವ ತಾಯಿ.. ತಮ್ಮ ಮಕ್ಕಳು ಹೊರ ಹೋಗುವಾಗ ಎಲ್ಲಿಗೆ ಹೋಗುತ್ತಿದ್ದಾರೆ ಎಂದು ತಿಳಿಸಬೇಕು ಎಂದು ಅಪೇಕ್ಷೆ ಪಡುತ್ತಾಳೆ..
  • ಇನ್ನು ತಾನು ಊಟ ಮಾಡದಿದ್ದರೂ ತನ್ನ ಮಕ್ಕಳಿಗೆ ತಿನಿಸಿ ಬೆಳೆಸುವ ತಾಯಿ.. ತನ್ನ ಮಕ್ಕಳು ದೊಡ್ಡವರಾದ ಮೇಲೆ ಮಕ್ಕಳಿಂದ “ಊಟ ಮಾಡಿದೆಯಾ ಅಮ್ಮ” ಎಂಬ ಒಂದು ಮಾತನ್ನು ಅಪೇಕ್ಷೆ ಪಡುತ್ತಾಳೆ..

ಹೆಂಡತಿಯಾಗಿ ಅಪೇಕ್ಷೆ ಪಡುವ ಸಂಗತಿಗಳು..

love-is-great-5
source;framepool.com
  • ಹೆಂಡತಿಯಾಗಿ ಬಂದ ಹೆಣ್ಣು ಮುಖ್ಯವಾಗಿ ತನ್ನ ಗಂಡ ತನ್ನೊಡನೆ ಸತ್ಯವಾಗಿ ಮಾತನಾಡುವುದನ್ನು ಬಯಸುತ್ತಾಳೆ..
  • ಇದು ಕೂಡ ಬಹಳ ಮುಖ್ಯವಾದ ಅಪೇಕ್ಷೆ.. ಯಾರ ಮುಂದೆಯೂ ಬಿಟ್ಟುಕೊಡಬಾರದೆಂದು ಬಯಸುವ ಹೆಣ್ಣು ಪ್ರಪಂಚವೇ ಎದುರಾದರೂ ತನ್ನ ಗಂಡನ ಪರವಾಗಿ ನಿಲ್ಲುವುದು ಬಹಳ ವಿಶೇಷವೆನಿಸಿಕೊಳ್ಳುತ್ತದೆ..

ಮಗಳಾಗಿ ಹೆಣ್ಣಿನ ಅಪೇಕ್ಷೆಗಳು..

  • ತನ್ನ ಅಪ್ಪ ಹೇಗಿದ್ದರೂ ಸರಿ ಮಗಳಿಗೆ ಅವನೊಬ್ಬ ಹೀರೋವಂತೆ ಬಿಂಬಿಸಿಕೊಳ್ಳುತ್ತಾಳೆ.. ಅಂತ ಮಗಳು ತನ್ನ ಅಪ್ಪ ಜನರಿಗೆ ಮೋಸ ಮಾಡದೇ ಹಲವಾರು ಮಂದಿ ಅವನನ್ನು ಹೊಗುಳುವುದನ್ನು ಬಯಸುತ್ತಾಳೆ..
  • ತಾನು ದೊಡ್ಡವಳಾದರೂ ಕೂಡ ಚಿಕ್ಕ ಮಗುವಾಗಿದ್ದಾಗ ಅಪ್ಪ ಕೊಡುತ್ತಿದ್ದ ಅದೇ ಪ್ರೀತಿಯನ್ನು ಮದುವೆಯಾದ ಮೇಲೆಯೂ ಬಯಸುವ ಹೆಣ್ಣು ತನ್ನ ಗಂಡ ಕೂಡ ತನ್ನ ಅಪ್ಪನಂತೆ ಇರಬೇಕೆಂದು ಬಯಸುತ್ತಾಳೆ..

ಇವಿಷ್ಟು ನೋಡಿ ಅತಿ ಮುಖ್ಯವಾದ ಹೆಣ್ಣಿನ ಅಪೇಕ್ಷೆಗಳು ಸಾಧ್ಯವಾದರೆ ಪೂರೈಸಿ ಸಂತೋಷಪಡಿಸಿ..

LEAVE A REPLY

Please enter your comment!
Please enter your name here