ಇಂಗ್ಲಿಷ್ ಮೆಡಿಸಿನ್ ಬಿಟ್ಟಾಕಿ.. ಕೆಮ್ಮು ಶೀತಕ್ಕೆ ಜ್ವರಕ್ಕೆ ಮನೆ ಔಷಧಿ ಸೇವಿಸಿ, ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ನೋಡಿ ರಾಮಬಾಣದಂತಹ ಔಷಧಿಗಳು

0
740

Kannada News | Health tips in kannada

ಮನುಷ್ಯ ಅಂದ ಮೇಲೆ ರೋಗಗಳು ಬರದೇ ಇರಲಾರದು..‌ ಅದರಲ್ಲೂ ಆಗಾಗ ಕಾಡುವ ಕಾಯಿಲೆಗಳೆಂದರೆ ಅವು ಶೀತ ಕೆಮ್ಮು ಗಂಟಲು ನೋವು.. ಇವುಗಳಿಗೆಲ್ಲಾ ಡಾಕ್ಟರ್ ಬಳಿ ಹೋಗುತ್ತಿದ್ದರೆ ತಿಂಗಳಿಗೆರೆಡು ಬಾರಿ ಆಸ್ಪತ್ರೆ ದರ್ಶನ ಮಾಡುತ್ತಿರಬೇಕಾಗಿರುತ್ತದೆ..  ಹದಗೆಟ್ಟಿರುವ ವಾತಾವರಣ.. ಆಧುನಿಕ ಆಹಾರ ಕ್ರಮ ಇತ್ಯಾದಿಗಳ ಫಲವಾಗಿ ಆಗಾಗ ಕಾಯಿಲೆ ಎಂಬ ವರ ಪ್ರಾಪ್ತಿಯಾಗುತ್ತಿರುತ್ತದೆ.. ಇವುಗಳಿಗೆ ಇಂಗ್ಲೀಷ್ ಮೆಡಿಸಿನ್ ತೆಗೆದುಕೊಳ್ಳುವ ಬದಲು ನಮ್ಮ ನಮ್ಮ ಮನೆಗಳಲ್ಲೇ ಇರುವ ಸುಲಭ ಮನೆಮದ್ದುಗಳನ್ನು ಬಳಸುವುದು ಒಳಿತು.. ಜೀರಿಗೆ ಶುಂಠಿ ಬೆಲ್ಲ ಮೆಣಸು ಅರಿಷಿಣ ಜೇನುತುಪ್ಪ ತುಳಸಿ ಇವುಗಳೆಲ್ಲಾ ಔಷಧೀಯ ಗುಣವುಳ್ಳ ಅಡುಗೆ ಮನೆಯಲ್ಲೇ ಸಿಗುವ ವಸ್ತುಗಳು ಸಾಧ್ಯವಾದಷ್ಟು ಇವುಗಳನ್ನೆಲ್ಲಾ ಮನೆಯ ಅಡುಗೆಗಳಲ್ಲಿ ಸಾಧ್ಯವಾದಷ್ಟು ಬಳಸಿದರೆ ಆರೋಗ್ಯ ಹದಗೆಡುವುದು ಸ್ವಲ್ಪ ಕಡಿಮೆಯಾಗುತ್ತದೆ.. ಆದರೂ ಅಪ್ಪಿ ತಪ್ಪಿ ಕೈಕೊಡುವ ಆರೋಗ್ಯವನ್ನು ಸರಿ ಮಾಡಿಕೊಳ್ಳಲು ಈ ಕೆಳಗಿನಂತೆ ಮಾಡಿ..

ಗಂಟಲು ನೋವು

ಗಂಟಲು ನೋವಿಗೆ ಜೇನುತುಪ್ಪ ಒಂದು ರಾಮಬಾಣ.. ನೀರಿಗೆ ಸ್ವಲ್ಪ ತುಳಸಿ ಶುಂಠಿ ಮತ್ತು ಬೆಲ್ಲವನ್ನು ಹಾಕಿ ಕುದಿಸಿ.. ಕೊನೆಯಲ್ಲಿ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಿರಿ.. ಅತ್ಯಂತ ವೇಗವಾಗಿ ಗಂಟಲು ನೋವು ಕಡಿಮೆಯಾಗುವುದು.. ಇದೆಲ್ಲವನ್ನು ಮಾಡಲು ಸಮಯವಿಲ್ಲ ಎನ್ನುವರು ಒಳ್ಳೆಯ ಜೇನುತುಪ್ಪವನ್ನು ಒಂದು ಸ್ಪೂನ್ ತಿಂದರೂ ಕೂಡ ರಿಲೀಫ್ ಸಿಗಲಿದೆ..

ಕೆಮ್ಮು

ಕೆಮ್ಮು ಬಂದರೆ ಒಂದು ಲೋಟ ನೀರಿಗೆ ಜೀರಿಗೆ, ಶುಂಠಿ ಮತ್ತು ಬೆಲ್ಲ ಹಾಕಿ ಅರ್ಧದಷ್ಟಾಗುವವರೆಗೆ ಚೆನ್ನಾಗಿ ಕುದಿಸಿ.. ಅದನ್ನು ದಿನಕ್ಕೆರೆಡು ಬಾರಿ ಕುಡಿಯಿರಿ ಕೆಮ್ಮು ಎರೆಡು ದಿನಗಳಲ್ಲಿ ಕಡಿಮೆಯಾಗುತ್ತದೆ..

ಜ್ವರ

ಸಾಧಾರಣ ಜ್ವರ ಬಂದಿದ್ದರೆ ತುಳಸಿಯನ್ನು ಮತ್ತು ಬೆಲ್ಲವನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಿ ಸ್ವಲ್ಪ ಅರಿಶಿಣ ಸೇರಿಸಿ ದಿನಕ್ಕೆರೆಡು ಬಾರಿ ಕುಡಿಯಿರಿ..

ಪ್ರತಿಯೊಂದು ಕಷಾಯಗಳಲ್ಲೂ ಬೆಲ್ಲ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.. ಆದಷ್ಟೂ ಮನೆಮದ್ದುಗಳನ್ನು ಬಳಸಿ ಆರೋಗ್ಯದಿಂದಿರಿ..

Also Read: ಬೇಸಿಗೆ ಕಾಲ ಬಂದೇ ಬಿಟ್ಟಿತು.. ಆರೋಗ್ಯ ಕಾಪಾಡಿಕೊಳ್ಳಲು ನಮ್ಮದೊಂದಿಷ್ಟು ಸಲಹೆ..

Watch:

LEAVE A REPLY

Please enter your comment!
Please enter your name here