ಈಗಿನ ಕಾಲದಲ್ಲಿ 80 ವರ್ಷ ಬದುಕುವುದೇ ಒಂದು ದೊಡ್ಡ ವಿಚಾರ, ಮಹಾಭಾರತ ಕಾಲದಲ್ಲಿ ನೂರಾರು ವರ್ಷ ಹೇಗೆ ಬದುಕುತ್ತಿದ್ದರು ಗೊತ್ತೇ?

0
352

Kannada News | Health tips in kannada

ಈಗಿನ ಕಾಲದಲ್ಲಿ 80 ವರ್ಷ ಬದುಕಿದರೆ ಅದು ದೊಡ್ಡ ಸಾಧನೆ ಇನ್ನು ಯಾರಾದರೂ 100 ವರ್ಷ ಬದುಕಿದ್ದಾರೆ ಎಂದರೆ ಜನ ಅವರನ್ನು ಆಶ್ಚರ್ಯದಿಂದ ನೋಡುತ್ತಾರೆ. ಈಗ 70 ವರ್ಷ ವಯಸ್ಸಾಯಿತೆಂದರೆ ದಾರಿ ಹತ್ತಿರವಾಯಿತು ಎಂದು ಹೇಳುವ ಪರಿಪಾಟಲಾಗಿದೆ. ಹಾಗಾದರೆ ಮಹಾಭಾರತದ ಕಾಲದಲ್ಲಿ ಹೇಗೆ ನೂರಾರು ವರ್ಷ ಬದುಕುತ್ತಿದ್ದರು ಗೊತ್ತೇ.

ಇಂತಹ ವ್ಯಕ್ತಿಗಳ ಪ್ರಕಾರ ವರ್ಷ ಎಂದರೆ ನಾವು ನೋಡುವ ಕ್ಯಾಲೆಂಡರ್ ನಲ್ಲಿ ಕಾಣುವ ಲೆಕ್ಕಾಚಾರವಲ್ಲ. ಮನುಷ್ಯನಿಗೆ ಎರಡು ಗಡಿಯಾರಗಳಿವೆ, ಒಂದು ದೇಹದ ಹೊರಗಿನ ಗಡಿಯಾರ ಮತ್ತು ದೇಹದ ಒಳಗಿನ ಗಡಿಯಾರ. ಹೊರಗಿನ ಗಡಿಯಾರದ ಸಮಯವನ್ನು ಇಂದಿನ ಸೂರ್ಯೋದಯದಿಂದ ನಾಳಿನ ಸೂರ್ಯೋದಯದವರೆಗೆ ಒಂದು ದಿನ ಅಥವಾ 24 ಘಂಟೆಗಳು ಎಂದು ಕರೆಯುತ್ತೇವೆ.

ದೇಹದ ಒಳಗಿನ ಗಡಿಯಾರ ಸೂರ್ಯೋದಯದಿಂದ-ಸೂರ್ಯೋದಯದವರೆಗೆ ಒಂದು ದಿನದ ಲೆಕ್ಕ ಹಿಡಿಯುವುದಿಲ್ಲ. ಅಲ್ಲಿನ ಘಂಟೆಯೇ, ನಿಮಿಷದ ಮತ್ತು ಕ್ಷಣದ ಮುಳ್ಳುಗಳು ಬೇರೆ. ಅಲ್ಲಿಯ ಸೆಕೆಂಡ್ ಅಥವಾ ಒಂದು ಕ್ಷಣದ ಮುಳ್ಳು ಎಂದರೆ ಅದು ಒಂದು ಉಸಿರು, ಒಂದು ದಿನ ಎಂದರೆ 21,600 ಉಸಿರುಗಳು, ಅಂದರೆ ಇಷ್ಟು ಬಾರಿ ನೀವು ಉಸಿರಾಡಿದಾಗ ಒಂದು ದಿನ ಮುಗಿದಂತೆ.

ಇನ್ನು ಇದನ್ನು ಸರಿಯಾಗಿ ವಿವರಿಸಬೇಕೆಂದರೆ, ನಾವು ಸಾಮಾನ್ಯವಾಗಿ 4 ಸೆಕೆಂಡಿಗೆ 1 ಉಸಿರು, ಒಂದು ನಿಮಿಷಕ್ಕೆ 15 ಉಸಿರು, 1 ಘಂಟೆಗೆ 900 ಉಸಿರು ಹೀಗೆ ನಾವು ಒಂದು ದಿನಕ್ಕೆ 21,600 ಉಸಿರಾಡುತ್ತೇವೆ. ಒಂದು ವೇಳೆ ನಾವು ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ 4 ಸೆಕೆಂಡಿಗೆ ಉಸಿರು ಬಿಡುವ ಬದಲು ನಿಧಾನವಾಗಿ 8 ಸೆಕೆಂಡಿಗೆ ಉಸಿರು ಬಿಡುತ್ತೀರ.

ಆಗ ನೀವು ದಿನಕ್ಕೆ 21,600 ಉಸಿರುಗಳ ಬದಲು 10,800 ಉಸಿರು ಬಿಡುತ್ತೀರ ಅಂದರೆ ಆಗ ಹೊರಗೆ 24 ಘಂಟೆ ಮುಗಿದಾಗ ನಿಮ್ಮ ದೇಹದಲ್ಲಿನ ಘಂಟೆಗೆ ಇನ್ನು 12 ಘಂಟೆಯಾಗಿರುತ್ತದೆ. ಹೊರಗಿನ ಎರಡು ದಿನ ಒಳಗಿನ ಒಂದೇ ದಿನ. ಹೀಗೆ ನಿತ್ಯ ಅಭ್ಯಾಸ ಮಾಡಿ ಒಂದು ಉಸಿರು ಬಿಡಲು 16, 32 ಸೆಕೆಂಡುಗಳು ಅಥವಾ ಒಂದು ನಿಮಿಷಕ್ಕೆ ಒಂದು ಬಾರಿಯಂತೆ ಉಸಿರು ಬಿಡುವ ಹಾಗೆ ಪ್ರಾಣಾಯಾಮ ಮಾಡಿದರೆ ನಿಮ್ಮ ದೇಹದ ಆಯಸ್ಸು ಹೆಚ್ಚುತ್ತದೆ.

ನೀವು 16 ಸೆಕೆಂಡಿಗೆ ಒಂದು ಬಾರಿ ಉಸಿರು ಬಿಟ್ಟರೆ ಹೊರಗಿನ 4 ದಿನ ನಿಮ್ಮ ದೇಹದ ಒಂದು ದಿನ ಇದ್ದಂತೆ ಅಂದರೆ ಪೂರ್ತಿ ವಯಸ್ಸಿನಲ್ಲಿ ಹೊರಗಿನ 400 ವರ್ಷ ನಿಮ್ಮ ದೇಹದ 100 ವರ್ಷ, ಇದೆ ಲೆಕ್ಕದಿಂದ ನಿಮ್ಮ ವಯಸ್ಸು 400 ವರ್ಷವಾಗುತ್ತದೆ. ಇದೆ ಕಾರಣಕ್ಕೆ ಮಹಾಭಾರತದಲ್ಲಿ ಮಹಾ ಬಲಿಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯರು 500 ಅಥವಾ 600 ವಯಸ್ಸು ಬದುಕಿದ್ದು.

ಮನುಷ್ಯನ ಒಂದು ಶ್ವಾಸಕೊಶಕ್ಕೆ 77,76,00,000 (ಎಪ್ಪತೇಳು ಕೋಟಿ ಎಪ್ಪತೇಳು ಲಕ್ಷ) ಉಸಿರಾಡುವ ಸಾಮರ್ಥ್ಯವಿದೆ. ಅಂದರೆ ನೀವು ದಿನಕ್ಕೆ 21,600 ಉಸಿರುಗಳನ್ನು ತೆಗೆದುಕೊಂಡರೆ ನಿಮ್ಮ ಶ್ವಾಸಕೊಶ ಕೇವಲ 100 ವರ್ಷ ಬದುಕುತ್ತದೆ ಅದೇ ನೀವು ಪ್ರಾಣಾಯಾಮದ ಮೂಲಕ ಉಸಿರನ್ನು ನಿಯಂತ್ರಿಸಲು ಕಲಿತರೆ ನೀವು 100 ವರ್ಷದಲ್ಲಿಯೇ 400 ವರ್ಷಗಳಷ್ಟು ಜೀವಿಸಬಹುದಾಗಿದೆ.

ಇನ್ನು ಹಿಮಾಲಯದಲ್ಲಿ ಕೆಲ ಋಷಿಗಳು, ಸಾಧು ಸಂತರು ಮತ್ತು ಯೋಗಿಗಳಿಗೆ 200 ವರ್ಷ ಅಥವಾ 300 ವರ್ಷ ವಯಸ್ಸು ಎಂದೆಲ್ಲ ನೀವು ಕೇಳಿರುತ್ತೀರ. ಅವರ ವಯಸ್ಸಿನ ಗುಟ್ಟು ಇದೆ. ಪ್ರಾಣಾಯಾಮದಿಂದ ಆಯಸ್ಸು ವೃದ್ಧಿಯಾಗುತ್ತದೆ ಎನ್ನುವುದು ಇದೆ ಕಾರಣಕ್ಕೆ.

Also Read: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡಿದ್ದಕ್ಕೆ ಏನಾಗಿದೆ ಗೊತ್ತೇ?

LEAVE A REPLY

Please enter your comment!
Please enter your name here