ಆಗುಂಬೆ ಹಾಗೂ ಅಕ್ಕ ಪಕ್ಕದ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ.. ಭೂಮಿಯ ಮೇಲಿನ ಸ್ವರ್ಗವದು.. ಒಮ್ಮೆ ಹೋಗಿ ಬನ್ನಿ..

0
359

Kannada News | Karnataka Temple History

ಆಗುಂಬೆ ಒಂದು ಭೂಮಿ ಮೇಲಿರುವ ಸ್ವರ್ಗವೆಂದೇ ಹೇಳಬಹುದು.. ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೇನು ಕಡಿಮೆ ಇಲ್ಲ.. ನಮ್ಮ ನಾಡಿನ ಸುಂದರ ರಮಣೀಯ ಸ್ಥಳಗಳಲ್ಲಿ ಆಗುಂಬೆಯೂ ಒಂದು.. ರಜೆಯ ಮಜವನ್ನು ಅನುಭವಿಸಲು ಇದು ಹೇಳಿ ಮಾಡಿಸಿದ ಜಾಗ.. ಇಲ್ಲಿದೆ ನೋಡಿ ಈ ಸ್ಥಳದ ಪರಿಚಯ..

ಆಗುಂಬೆ

ಆಗುಂಬೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಊರು. ಪಶ್ಚಿಮ ಘಟ್ಟದಲ್ಲಿರುವ ಈ ಊರು ಒಂದು ಪ್ರವಾಸಿ ಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ. ಸಾಯಂಕಾಲದಲ್ಲಿ ಸೂರ್ಯಾಸ್ತದ ದೃಶ್ಯ,ವನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಆಕಾಶ ನಿರ್ಮಲವಾಗಿರುವುದರಿಂದ, ಮುಳುಗುವ ಸೂರ್ಯನ ದೃಶ್ಯ ಅತ್ಯಂತ ಮುದನೀಡುತ್ತದೆ. ಆದರೆ ಮಳೆಯೇ ಮಲೆನಾಡಿನ ಜೀವಾಳ. ಮಳೆಗಾಲದಲ್ಲಿ ಕಾದಿದ್ದು, ಸೂರ್ಯಾಸ್ತವನ್ನು ಕಾಣುವುದೇ ಒಂದು ಸಡಗರದ ಸನ್ನಿವೇಶ. ಇನ್ನು ಶಿವಮೊಗ್ಗದಲ್ಲಿ ಅನೇಕ ಪ್ರವಾಸಿ ತಾಣಗಳನ್ನು ನಾವು ಕಾಣಬಹುದು..‌ ಆಗುಂಬೆಯ ಸಮೀಪವಿರುವ ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ ನೋಡಿ..

ಕವಲೆದುರ್ಗ

ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ಮೋಹಕ ತಾಣ. ತೀರ್ಥಹಳ್ಳಿಯಿಂದ 18 ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ – ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ಈ ದುರ್ಗ ಎದುರಾಗುತ್ತದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರ ತಾಣ.ಇಲ್ಲಿ 9ನೇ ಶತಮಾನದ ಕೋಟೆ ಇದೆ.

ಕುಂದಾದ್ರಿ ಬೆಟ್ಟ

ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ ದೂರದಲ್ಲಿ ಕುಂದಾದ್ರಿಬೆಟ್ಟವಿದೆ. ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹಾಗು ನಡೆದು ಹೋಗಲು ಕಾಲು ದಾರಿ ಕೂಡ ಇದೆ. ಕುಂದಾದ್ರಿ ಬೆಟ್ಟವು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಬೆಟ್ಟದ ಮೇಲೆ ಪಾರ್ಶ್ವನಾಥ ಚೈತ್ಯಾಲಯವಿದೆ. ಇಲ್ಲಿಗೆ ಪ್ರತಿ ವರುಷ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ ಹಾಗು ನೂರಾರು ಚಾರಣಿಗರು ಚಾರಣ ಮಾಡಲು ಬರುತ್ತಾರೆ. ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ. ಎಲ್ಲಿ ನೋಡಿದರಲ್ಲಿ ದಟ್ಟ ಕಾಡು, ತೋಟಗಳು, ಹೊಲ-ಗದ್ದೆಗಳು. ಬೆಟ್ಟಕ್ಕೆ ಬೇಟಿ ನೀಡುವವರು ಊಟ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡು ಬಂದರೆ ಉತ್ತಮ.

ಕುಪ್ಪಳ್ಳಿ

ಕುಪ್ಪಳಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪುರವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಿಡಲಾಗಿದೆ. ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಒಂದು ಪ್ರವಾಸೀ ಸ್ಥಳವಾಗಿಯೂ ರೂಪುಗೊಂಡಿದೆ

ಬರ್ಕಣ ಜಲಪಾತ

ಬರ್ಕಣ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ ಹಾಗು ಒಟ್ಟು ಎತ್ತರ ಸುಮಾರು 850 ಅಡಿಗಳಾಗಿದೆ. ಈ ಜಲಪಾತವು ಭಾರತದಲ್ಲಿ ಹತ್ತು ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಕೇವಲ ಮಳೆಗಾಲದಲ್ಲಿ ಮಾತ್ರ ನೀರು ತುಂಬಿರುತ್ತದೆ.

ಸ್ನೇಹಿತರು ಕುಟುಂಬ ಸಮೇತರಾಗಿ ಒಮ್ಮೆ ತಪ್ಪದೇ ಭೇಟಿ ಕೊಡಿ.. ದೇಶ ಸುತ್ತುವ ಮೊದಲು ನಮ್ಮ ನಾಡನ್ನು ಸುತ್ತಬೇಕಲ್ಲವೇ..

LEAVE A REPLY

Please enter your comment!
Please enter your name here