ಲಂಡನ್ ಲಂಬೋದರನಿಗೆ ಜೋಡಿಯಾಗಲಿದ್ದಾರೆ ಬಿಗ್ ಬಾಸ್ ನ ಶೃತಿ ಪ್ರಕಾಶ್

0
444

Kannada News | Karnataka News

ಬಿಗ್ ಬಾಸ್ ಮುಗಿದ ನಂತರ ಅಲ್ಲಿನ ಸ್ಪರ್ಧಿಗಳು ಕೆಲವರು ಸುದ್ಧಿಯಲ್ಲಿದ್ದರೆ ಇನ್ನು ಕೆಲವರು ತಮ್ಮ ತಮ್ಮ ವಯಕ್ತಿಕ ಜೀವನದಲ್ಲಿ ಬ್ಯುಸಿ ಯಾಗಿಬಿಡುತ್ತಾರೆ..

ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 5 ಸ್ಪರ್ಧಿಗಳ ಪೈಕಿ ಶೃತಿ ಪ್ರಕಾಶ್ ರಾಜ್ಯದ ಹುಡುಗರ ನಿದ್ದೆ ಕೆಡಿಸಿದ್ದು ಗೊತ್ತೇ ಇದೆ..

ಇದೀಗ ಬಿಗ್ ಬಾಸ್ ಶೋ ಮುಗಿದ ಮೇಲೆ ಸಿನಿಮಾ ದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.. ಇದೀಗ ಶೃತಿ ಪ್ರಕಾಶ್ ರವರು ನಾಯಕಿಯಾಗಿ ಅಭಿನಯಿಸುವ ಚಿತ್ರವೊಂದು ಅಫಿಶಿಯಲ್ ಆಗಿ ಫಿಕ್ಸ್ ಆಗಿದೆ..

ಹೌದು ಸಿಂಪಲ್ ಸುನಿ ರವರ ಜೊತೆ ಕೆಲಸ ಮಾಡಿದ್ದ ರಾಜ್ ಸೂರ್ಯ ಎಂಬುವವರ ನಿರ್ದೇಶನದಲ್ಲಿ ತಯಾರಾಗಲಿರುವ “ಲಂಡನ್ ಲಂಬೋದರ” ಚಿತ್ರಕ್ಕೆ ಶೃತಿ ಪ್ರಕಾಶ್ ನಾಯಕಿಯಾಗಿ ಅಭಿನಯಿಸಲಿದ್ದಾರೆ..

ಈಗಾಗಲೇ ಲಂಡನ್ ಗೆ ತೆರಳಿ ಚಿತ್ರೀಕರಣಕ್ಕೆ ಬೇಕಾದ ಲೊಕೇಶನ್ ಗಳನ್ನು ನೋಡಿಕೊಂಡು ಬಂದಿರುವ ಚಿತ್ರತಂಡ ಸದ್ಯದಲ್ಲೇ ಶೂಟಿಂಗ್ ಶುರು ಮಾಡಲಿದೆಯಂತೆ..

ಇನ್ನುಳಿದಂತೆ ಚಿತ್ರದ ಸ್ಟಾರ್ ಕ್ಯಾಸ್ಟ್ ಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತವೆ ಮೂಲಗಳು.. ಈಗಾಗಲೇ ಬಿಗ್ ಬಾಸ್ ಹಾಗೂ ಹಿಂದಿ ಧಾರವಾಹಿಗಳ ಮೂಲಕ ಹೆಸರು ಮಾಡಿರುವ ಶೃತಿ ಪ್ರಕಾಶ್ ಸ್ಯಾಂಡಲ್ವುಡ್ ನ ದೊಡ್ಡ ಪರದೆಯ ಮೇಲೆ ನಾಯಕಿಯಾಗಿ ಮಿಂಚಲಿದ್ದಾರೆ.

Also Read: ಕರ್ನಾಟಕದ ಪ್ರತಿಷ್ಠಿತ ನಗರ ಮಂಗಳೂರು, ಭೂತಾಪಮಾನ ಏರಿಕೆಯಿಂದ ಸಂಪೂರ್ಣವಾಗಿ ಮುಳುಗುತ್ತೆ ಅನ್ನುತ್ತೆ ಹೊಸ ಸಂಶೋಧನೆ!!

LEAVE A REPLY

Please enter your comment!
Please enter your name here