ಸಂಕಟದಲ್ಲಿರುವ ಬಿಗ್ ಬಾಸ್ ರನ್ನರ್-ಅಪ್ ದಿವಾಕರ್-ಗೆ ಸುದೀಪ್ ಮಾಡಿರೋ ಸಹಾಯದ ಬಗ್ಗೆ ಗೊತ್ತಾದ್ರೆ, ಸುದೀಪ್ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತೆ!!

0
573

ಸಲಬ್ರಿಟಿಗಳನ್ನು ಅಭಿಮಾನಿಗಳು ಪ್ರೀತಿಸೋದರ ಜೊತೆಗೆ ಫಾಲೋ ಕೂಡ ಮಾಡ್ತಾರೆ. ತೆರೆ ಮೇಲೆ ಹೀರೋ/ ಹೀರೋಯಿನ್ ಆಗಿ ನಟಿಸಿದ್ದಕ್ಕೆ ಅವರನ್ನ ಅದೆಷ್ಟೋ ಜನ ಮೆಚ್ಚಿಕೊಂಡಿರ್ತಾರೆ. ಇನ್ನು ಇವರೆಲ್ಲಿ ಕೆಲವರು ಮಾತ್ರ ತಮ್ಮ ರಿಯಲ್ ಲೈಫ್ ನಲ್ಲೂ  ಹೀರೋಗಳಾಗುತ್ತಾರೆ.. ಅದರಲ್ಲಿ ಒಬ್ಬರು ನಮ್ಮ ಕಿಚ್ಚಾ ಸುದೀಪ್…

ಹೌದು.. ಸುದೀಪ್ ತಮ್ಮ ರಿಯಲ್ ಲೈಫ್ ನಲ್ಲೂ ಹೀರೋನೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಗ್ ಬಾಸ್ ಮನೆಯಿಂದ ರನ್ನರಪ್ ಆಗಿ ಹೊರ ಬಂದ ದಿವಾಕರ್ ಗೆ ಸುದೀಪ್ ಮಾಡಿದ ಸಹಾಯ.

ಬಿಗ್ ಬಾಸ್ ಮನೆಯಲ್ಲಿ ರನ್ನರಪ್ ಆದ ದಿವಾಕರ್ ಸರಿಯಾಗಿ ಹಣ ಸಿಕ್ಕಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಇಂಥಾ ಸಂದರ್ಭದಲ್ಲಿ ಕಿಚ್ಚಾ ಸುದೀಪ್ ದಿವಾಕರ್ ಗ ಸಹಾಯ ಹಸ್ತ ಚಾಚಿದ್ದಾರೆ. ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದಾರೆ.

ಇದರ ಬಗ್ಗೆ ದಿವಾಕರ್ ಕನ್ನಡದ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮಾಡಿದ ಸಹಾಯವನ್ನು ಹೇಳಿದ್ದಾರೆ. ಇದೇ ವೇಳೆ ಸುದೀಪ್ ದಿವಾಕರ್ ಅವರನ್ನು ಪ್ರೀತಿಯಿಂದ ನಡಸಿಕೊಂಡಿದ್ದು, ಆರ್ಥಿಕವಾಗಿ ನೆರವಾಗಿದ್ದು ತಮಗೆ ತುಂಬಾ ಸಹಾಯವಾಗಿದೆ ಎಂದು ಹೇಳಿದರು. ಅಲಲಲದೇ ಸುದೀಪ್ ನೀಡಿದ ದೊಡ್ಡ ಮೊತ್ತದ ಹಣದಿಂದಲೇ ಮನೆ ನಿರ್ಮಿಸುವ ಬಗ್ಗೆಯೂ ಯೋಚಿಸುತ್ತಿರುವುದಾಗಿ ದಿವಾಕರ್ ತಿಳಿಸಿದ್ದಾರೆ. ಇದರೊಂದಿಗೆ ಮುಂದಿನ ಸಿನಿಮಾದಲ್ಲಿ ದಿವಾಕರ್ ಚಾನ್ಸ್ ಕೊಡುವುದಾಗಿ ಸದೀಪ್ ಹೇಳಿದ್ದಾರಂತೆ.

ಇನ್ನು ಇದ್ಯಾವ ವಿಚಾರವನ್ನು ಸುದೀಪ್ ಬಹಿರಂಗ ಪಡಿಸಲು ಇಚ್ಛಿಸುವುದಿಲ್ಲ  ಅವರಿಗೆ ಪಬ್ಲಿಸಿಟಿ ಅಂದರೆ ಇಷ್ಟವಾಗೊಲ್ಲ ಅಂತ ದಿವಾಕರ್ ಸಂದರ್ಶನದಲ್ಲಿ ಹೇಳಿದ್ದಾರೆ.

Also Read: ಬಿಗ್ ಬಾಸ್ ಗೆದ್ದ ಮೇಲೆ ಚಂದನ್ ಶೆಟ್ಟಿಗೆ ಎಲ್ಲಾ ಕಡೆಯಿಂದ ಭಾರಿ ಆಫರ್-ಗಳು ಬರುತ್ತಿವೆ, ಈಗ ದರ್ಶನ್-ರಿಂದ ಬಂದ ಆಫರ್ ಏನು ಗೊತ್ತಾ?

LEAVE A REPLY

Please enter your comment!
Please enter your name here