ರಾಷ್ತ್ರೀಯ ಬ್ಯಾಂಕಿನ ಈ ಘಟನೆ ನೋಡಿದರೆ ಶಾಕ್ ಆಗೋದಂತು ಗ್ಯಾರಂಟಿ, ಬ್ಯಾಂಕಿನಲ್ಲಿರುವ ನಿಮ್ಮ ಹಣ ಎಷ್ಟು ಸುರಕ್ಷಿತ?

0
412

Kannada News | Karnataka News

ಇತ್ತೀಚಿಗೆ ಜನ ಕೇವಲ ಹಣ ಗಳಿಸುವುದು ಮಾತ್ರವಲ್ಲ, ಕಷ್ಟಪಟ್ಟು ದುಡಿದ ಹಣ ಎಲ್ಲಿ ಹೂಡಿಕೆ ಮಾಡಬೇಕು ಯಾವುದು ಅತ್ಯಂತ ಸುರಕ್ಷಿತ ಎಂದು ಹುಡುಕುವಷ್ಟರಲ್ಲಿ ಸುಸ್ತಾಗಿದ್ದಾರೆ. ಎಲ್ಲರೂ ಸೂಚಿಸುವ ಸಾಮಾನ್ಯ ಸಲಹೆ ಎಂದರೆ ರಾಷ್ಟೀಯ ಬ್ಯಾಂಕುಗಳು. ಆದರೆ, ಈ ಬ್ಯಾಂಕುಗಳ ಬಂಡವಾಳ ಗೊತ್ತಾದರೆ ಬ್ಯಾಂಕಿನ ಕಡೆ ನೀವು ತಲೆಮಾಡಿ ಕೂಡ ಮಲಗುವುದಿಲ್ಲ. ಯಾಕೆ ಅಂತ ತಿಳಿಯೋಕೆ ಮುಂದೆ ಓದಿ.

ಪ್ರಮುಖ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಶನಲ್ ಬ್ಯಾಂಕ್ (PNB) ನಿಯಂತ್ರಕ ದಾಖಲೆಯಲ್ಲಿ, 1.77 ಶತಕೋಟಿ ಡಾಲರ್ ಮೌಲ್ಯದ ಮೋಸದ ಮತ್ತು ಅನಧಿಕೃತ ವಹಿವಾಟುಗಳನ್ನು ಕಂಡು ಬಂದಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ಈ ವಿಷಯವನ್ನು ತಿಳಿಸಲಾಗಿದೆ ಎಂದು PNB ಹೇಳಿದೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್ (PNB) 2014-15 ಮತ್ತು 2016-17ರ ನಡುವೆ 3 ವರ್ಷಗಳಲ್ಲಿ ಒಟ್ಟು 12,778 ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿವೆ ಎಂದು ಸರಕಾರ ಬಿಡುಗಡೆ ಮಾಡಿದ ಡೇಟಾದಲ್ಲಿ ಸೂಚಿಸಲಾಗಿದೆ. ಇನ್ನು ಒಂದೇ ಬ್ಯಾಂಕಿನಲ್ಲಿ ಇಷ್ಟು ಮೊತ್ತದ ವಂಚನೆ ನಡೆದಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.

ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಲ್ಲ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುವಂತೆ ಕೆಲವು ಸೂಚನೆಗಳನ್ನು ಹೊರಡಿಸಿದೆ. ಅವುಗಳ ಬಗ್ಗೆ ವಿವರ ಈ ಕೆಳಗಿನಂತಿದೆ. RBI ಜಾರಿ ಮಾಡಿದ ಈ ನಿಯಮಗಳನ್ನು ಎಂಲ್ತಿಳಿಸಿದ ಎಲ್ಲ ಬ್ಯಾಂಕುಗಳು ಪಾಲಿಸಬೇಕು.

೧. ದುರುಪಯೋಗ ಮತ್ತು ನಂಬಿಕೆಯ ಅಪರಾಧ ಉಲ್ಲಂಘನೆ.
೨. ನಕಲಿ ಉಪಕರಣಗಳ ಮೂಲಕ ಮೋಸದ ಎನ್ಕಶ್ಮೆಂಟ್, ಖಾತೆಯ ಪುಸ್ತಕಗಳ ಕುಶಲ ಅಥವಾ ಕಾಲ್ಪನಿಕ ಖಾತೆಗಳ ಮೂಲಕ ಮತ್ತು ಆಸ್ತಿ ಪರಿವರ್ತನೆ.
೩. ಅನಧಿಕೃತ ಕ್ರೆಡಿಟ್ ಸೌಲಭ್ಯಗಳು ಪ್ರತಿಫಲ ಅಥವಾ ಅನಧಿಕೃತ ತೃಪ್ತಿಗಾಗಿ ವಿಸ್ತರಿಸಿದೆ.
ನಗದು ಕೊರತೆಗಳು.
೪. ಮೋಸ ಮತ್ತು ನಕಲಿ.
೫. ವಿದೇಶಿ ವಿನಿಮಯ ಒಳಗೊಂಡಿರುವ ಮೋಸದ ವ್ಯವಹಾರಗಳು
೬. ಯಾವುದೇ ವಿಧದ ವಂಚನೆ ಮೇಲಿನ ನಿರ್ದಿಷ್ಟ ಅಡಿಯಲ್ಲಿ ಬರುವುದಿಲ್ಲ.

ಇನ್ನು ಬ್ಯಾಂಕುಗಳಿಗೆ ತಮಗಾದ ಮೋಸ ಅಥವಾ ವಂಚನೆ ಪ್ರಕರಣಗಳನ್ನು ದಾಖಲಿಸಲು RBI ಒಂದು ವ್ಯವಸ್ಥೆ ಮಾಡಿದೆ. ಸೆಂಟ್ರಲ್ ಫ್ರಾಡ್ ರಿಜಿಸ್ಟ್ರಿ (CFR) ಗೆ ನಿರ್ದಿಷ್ಟ ರೂಪದಲ್ಲಿ ಎಲೆಕ್ಟ್ರಾನಿಕ್ ಮೂಲಕ ವಂಚನೆಗಳನ್ನು ವರದಿ ಮಾಡಬೇಕಾಗುತ್ತದೆ. CFR ಬ್ಯಾಂಕುಗಳಿಗೆ ಲಭ್ಯವಿರುವ ವೆಬ್ ಆಧಾರಿತ ಮತ್ತು ಸರ್ಚ್ ಮಾಡಬಹುದಾದ ಡೇಟಾಬೇಸ್ ಆಗಿದೆ.

ಇನ್ನು ವಂಚನೆ ಪ್ರಕರಣಗಳನ್ನು ವರದಿ ಮಾಡಲು RBI ಈ ಕೆಳಗಿನ ಮಾರ್ಗದರ್ಶನಗಳನ್ನು ನೀಡಿದೆ. ಕೇವಲ ವಂಚನೆಯಾದ ಅನವನ್ನು ಮರಳಿ ಪಡೆಯಲು ಮಾತ್ರ ಪ್ರಯತ್ನಿಸದೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲೂ ಗಮನ ಹರಿಸಬೇಕು ಎಂದು RBI ಸೂಚಿಸಿದೆ.

ಕೇವಲ 3 ವರ್ಷಗಳಲ್ಲಿ 12000 ಕ್ಕೂ ಹೆಚ್ಚಿನ ವಂಚನೆ ಪ್ರಕರಣಗಳು ದಾಖಲಾಗಿವೆ ಅದರಲ್ಲಿ 4000 ಕ್ಕಿಂತ ಹೆಚ್ಚು ಚೆಕ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ವಂಚನೆಗಳ ಪ್ರಕರಣಗಳು ದಾಖಲಾಗಿರುವುದು ಗಮನಾರ್ಹ ವಿಷಯವಾಗಿದೆ. ಈ ವಿಷಯವನ್ನು ಖುದ್ದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

ಒಟ್ಟಿನಲ್ಲಿ ಇಂತಹ ಪ್ರಕರನಾಗಿಗೆ ಕಡಿವಾಣ ಹಾಕದಿದ್ದರೆ ಜನ ಡಿಜಿಟಲ್ ಪೇಮೆಂಟ್ ಮಾಡಲು ಹಿಂದೇಟು ಹಾಕುವುದಂತೂ ಸತ್ಯ…!!

LEAVE A REPLY

Please enter your comment!
Please enter your name here