ನಿತ್ಯ ಭವಿಷ್ಯ: 18 ಫೆಬ್ರವರಿ 2018

0
388

ಮೇಷ:
ಕುಟುಂಬದೊಂದಿಗೆ ದೀರ್ಘ ಪ್ರವಾಸಕ್ಕೆ ಯೋಜನೆ, ಆಕಸ್ಮಿಕ ಕಾರ್ಯ ಜಯದಿಂದ ಸಮಾಧಾನ, ಹೊಸ ವಿಚಾರದಿಂದ ಉಲ್ಲಾಸ.

ವೃಷಭ:
ಎಲ್ಲ ಸನ್ನಿವೇಶ ನಿಮ್ಮಂತೆ ಕೈಗೂಡುವಿಕೆಯಿಂದ ಸಂತಸ. ಮನೆ ಕಟ್ಟುವ ಕೆಲಸಕ್ಕೆ ಹಸಿರು ನಿಶಾನೆ. ಆಪ್ತರಿಂದ ಸಹಾಯ.

ಮಿಥುನ:
ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಸಾಧಾರಣ ಪ್ರಗತಿ, ಸ್ವತಂತ್ರ ವ್ಯಾಪಾರ ವಹಿವಾಟುದಾರರಿಗೆ ಕೊಂಚ ಕಿರಿಕಿರಿ, ಬೇಸರ.

ಕರ್ಕ:
ಹೊಸ ಮನೆ ಗೃಹ ಪ್ರವೇಶಕ್ಕೆ ದಿನ ನಿಗದಿಯಿಂದ ಹಿರಿಯರಿಗೆ ಸಂತಸ. ಸಮಾಜ ಸೇವೆಗಾಗಿ ಅಲೆದಾಟ ಅಧಿಕ ಶ್ರಮ.

ಸಿಂಹ:
ಮಗಳ ಮದುವೆ ವಿಚಾರಕ್ಕೆ ಆರ್ಥಿಕ ಅನುಕೂಲ, ಮೇಲುಸ್ತುವಾರಿ ಕೆಲಸಗಳಿಗೆ ಎಲ್ಲರ ಸಹಕಾರ. ಸುಗಮ ಅಧ್ಯಯನಕ್ಕೆ ಮಿತ್ರನ ಸಹಾಯ.

ಕನ್ಯಾ:
ಮಹತ್ವದ ಕೆಲಸಗಳಿಂದ ಹಿತ ಮಿತ್ರರಿಂದ ಎಲ್ಲ ನೆರವು, ನಾನಾ ಕ್ಷೇತ್ರಗಳಿಂದ ಆರ್ಥಿಕ ಲಾಭ. ವಾಹನ ಚಾಲಕರಿಗೆ ಅಧಿಕ ದುಡಿಮೆ.

ತುಲಾ:
ಮಂಗಲ ಕಾರ್ಯದ ಕುರಿತು ಹಿರಿಯರೊಂದಿಗೆ ಹೆಚ್ಚಿನ ಸಮಾಲೋಚನೆ. ಅನಿರೀಕ್ಷಿತ ಜನರ ನೆರವಿನಿಂದ ಸಂತಸ.

ವೃಶ್ಚಿಕ:
ನಟನಾ ಕಲಾವಿದರಿಗೆ ಉತ್ತಮ ಸದವಕಾಶ, ಕ್ಷೀರೋದ್ಯಮಿಗಳಿಗೆ ಅಧಿಕ ಆದಾಯ ಕುಟುಂಬ ಸದಸ್ಯರೊಂದಿಗೆ ಸುಖ ಭೋಜನ.

ಧನು:
ಪ್ರಾಮಾಣಿಕ ಕಾರ್ಯಗಳಿಗೆ ತಕ್ಕ ಪ್ರತಿಫಲ, ಸರಳ ಸ್ವಭಾವಕ್ಕೆ ಅಧಿಕಾರಿಗಳಿಂದ ಪ್ರಶಂಸೆ, ಕೆಲಸದ ಒತ್ತಡದಿಂದ ಆಯಾಸ.

ಮಕರ:
ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕೆ ಮಡದಿಯೊಂದಿಗೆ ಚರ್ಚೆ. ನಿಧಾನ ಯಶಸ್ಸು ಪುತ್ರಿಗೆ ಉದ್ಯೋಗ ಯೋಗ, ಉಲ್ಲಾಸ.

ಕುಂಭ:
ತಾಂತ್ರಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಶತ ಪ್ರಯತ್ನ ನಿಧಾನ ಯಶಸ್ಸು ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ. ಮನಸ್ಸಿಗೆ ಸಮಾಧಾನ.

ಮೀನ:
ಬೇರೆಯವರು ಏನೇ ಹೇಳಿದರೂ ನಿಮ್ಮ ಕಾರ್ಯದಿಂದ ವಿಮುಖರಾಗದಿರುವುದರಿಂದ ನಿಮ್ಮ ದಾರಿಗೆ ಬೆಳಕು ಒದಗಲಿದೆ.

LEAVE A REPLY

Please enter your comment!
Please enter your name here