ಇಂದು ರಾಷ್ಟ್ರಕ್ಕೆ ಬ್ರಿಟಿಷರಿಂದ ಸ್ವತಂತ್ರ ಕೊಡಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 70 ನೇ ಪುಣ್ಯತಿಥಿ, ಅವರ ಬಗ್ಗೆ ನಿಮಗೆಷ್ಟು ಗೊತ್ತು?

0
514

1. ಇಂದು ತಮ್ಮ ಸತ್ಯ ಮತ್ತು ಅಹಿಂಸೆಯಿಂದಲೇ, ರಾಷ್ಟ್ರಕ್ಕೆ ಬ್ರಿಟಿಷರಿಂದ ಸ್ವತಂತ್ರ ಕೊಡಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 70 ನೇ ಪುಣ್ಯತಿಥಿ.

2. ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು 2 ನೇಯ ಅಕ್ಟೋಬರ್ 1869 ರಂದು ಗುಜುರಾತಿನ ಪೋರ್ಬಂದರ್ನಲ್ಲಿ ಕರಮ್‌ಚಂದ್ ಗಾಂಧಿ ಮತ್ತು ಪುತಲೀಬಾಯಿ ದಂಪತಿಗೆ ಜನಿಸಿದ್ದರು.

3. ಅವರ ತಂದೆ ಕರಮ್‌ಚಂದ್ ಗಾಂಧಿಯವರು, ಬ್ರಿಟಿಷ್‌ ಭಾರತದ ಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದ ದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು.

4. ಗಾಂಧಿಯವರು ಪೋರಬಂದರಿನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ರಾಜ್‌ಕೋಟ್‌ನ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಒಬ್ಬ ಸರಾಸರಿ ಮಟ್ಟದ ವಿದ್ಯಾರ್ಥಿಯಾಗಿ ಪೂರ್ಣಗೊಳಿಸಿದರು.

 

5. ತಮ್ಮ 13 ನೇ ವಯಸ್ಸಿಗೆ ಮೋಹನ್‌ದಾಸ್‌ ಅವರು, 14 ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು.

6. ಮೋಹನ್‌ದಾಸ್ ಮತ್ತು ಕಸ್ತೂರಬಾ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು, ಅವರ ಹೆಸರು ಹರಿಲಾಲ್‌, ಮಣಿಲಾಲ್‌, ರಾಮ್‌ದಾಸ್‌ ಮತ್ತು ದೇವದಾಸ್‌.

7. ಗುಜರಾತ್‌ನ ಭಾವನಗರ್‌ನಲ್ಲಿರುವ ಸಮಲ್‌ದಾಸ್ ಕಾಲೇಜಿಗೆ ಸೇರಿ ನಂತರ ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾದರು.

8. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು.

9. ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯಲ್ಲಿ ತಮ್ಮ ಅನುಯಾಯಿಗಳ ನಾಯಕತ್ವ ವಹಿಸಿದ್ದ ಗಾಂಧಿಯವರು 1930 ರಲ್ಲಿ ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿದರು.

10. ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿದರು. ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ಅಹಿಂಸೆ ಯ ಪರಿಪಾಲಕ ರಾದ ಅವರು ಸತ್ಯವನ್ನೇ ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.

11. ಸ್ವತಂತ್ರವಾದ ಗೃಹ ಸಮುದಾಯವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ಚರಖಾ ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು.

12.ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು.

13. ಗಾಂಧೀಜಿ, ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರು.

14. ಗಾಂಧಿಯವರು ವಿಶ್ವಾದ್ಯಂತ ಮಹಾತ್ಮ ಗಾಂಧಿ ಎಂದೇ ಚಿರಪರಿಚಿತರು, ಮಹಾನ್ ಆತ್ಮ , ಎಂಬ ಗೌರವ ಸೂಚಕ ಪದವನ್ನು ಅವರಿಗೆ ಮೊದಲು ನೀಡಿದ್ದು ರವೀಂದ್ರನಾಥ ಠಾಗೂರರು.

15. ಭಾರತ ದಲ್ಲಿ ಅವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ಗಾಂಧಿ ಜಯಂತಿ ಎಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.

LEAVE A REPLY

Please enter your comment!
Please enter your name here