104 ಉಪಗ್ರಹಗಳನ್ನು ಉಡಾಯಿಸಿ ವಿಶ್ವ ದಾಖಲೆ ಬರೆದ ಇಸ್ರೋನ ಟೀಮ್-ನ ನಾಯಕ ಈಗ ಇಸ್ರೋ ಅಧ್ಯಕ್ಷ..

0
449

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗಾಗಿ ಹಲವಾರು ಯಶಸ್ವಿ ಯೋಜನೆಗಳನ್ನು ಮಾಡಿದ ವ್ಯಕ್ತಿಯೊಬ್ಬ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಮತ್ತು ಸ್ಪೇಸ್ ಕಮಿಷನ್ ಮತ್ತು ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ISRO ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವಧಿ ಅವಧಿಯು ಜನವರಿ 14 ರಂದು ಮುಕ್ತಾಯವಾಗಲಿದೆ. SCSC ನೀಡಿದ ಸಲಹೆ ಮೇರೆಗೆ ದೇಶದ ಬಾಹ್ಯಾಕಾಶ ಸ್ಥಾಪನಾ ಕೇಂದ್ರದ ಒಂಭತ್ತನೆಯ ಮುಖ್ಯಸ್ಥರಾಗಿ ಡಾ. ಶಿವನ್ ಅವರನ್ನು ಕ್ಯಾಬಿನೆಟ್ ನೇಮಕಾತಿ ಸಮಿತಿ (ACC) ಕಾರ್ಯದರ್ಶಿ ಆಯ್ಕೆ ಮಾಡಿದೆ.

ಇನ್ನು ಡಾ. ಶಿವನ್ ಅವರ ಬಗ್ಗೆ ಹೇಳುವುದಾದರೆ ಇವರು 1982 ರಿಂದ ISRO ದ ಭಾಗವಾಗಿದ್ದಾರೆ ಮತ್ತು ಅವರ ನಿರ್ದೇಶನ ಮತ್ತು ಬೆಂಬಲದ ಅಡಿಯಲ್ಲಿ, ಫೆಬ್ರವರಿ 2016 ರಲ್ಲಿ ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಪ್ರಾರಂಭಿಸಿ ಕಕ್ಷೆಗೆ ತಲುಪಿಸಲು ಸಂಶೋಧನಾ ಸಂಸ್ಥೆಯು ಸಾಧ್ಯವಾಯಿತು. 104 ಉಪಗ್ರಹಗಳನ್ನು ಒಂದೇ ಪ್ರಯತ್ನದಲ್ಲಿ ಉಡಾಯಿಸಿ ಭಾರತದ ಹೆಸರಿನಲ್ಲಿ ವಿಶ್ವ ದಾಖಲೆಯನ್ನುಸ್ಥಾಪಿಸಲು ಮಹತ್ವದ ಪಾತ್ರ ವಹಿಸಿದರು.

ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನೋಟಿಕ್ ಇಂಜಿನಿಯರಿಂಗ್ ಪದವಿ ಪಡೆದ ನಂತರ, ಡಾ. ಶಿವನ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ME ಸ್ನಾತಕೋತ್ತರ ಪದವಿ ಪಡೆದರು ನಂತರ IIT ಬಾಂಬೆಯಿಂದ ಏರೋಸ್ಪೇಸ್ ಇಂಜಿನಿಯರಿಂಗ್-ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಡಾ. ಶಿವನ್ ಅವರನ್ನು ಜೂನ್ 2015 ರಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ನೇಮಕ ಮಾಡಲಾಯಿತು.

ಇನ್ನು ಡಾ. ಶಿವನ್ ಅವರ ನೇತೃತ್ವದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಲವು ಯಶಸ್ವಿ ಯೋಜನೆಗಳನ್ನು ಪೂರ್ಣಗೊಳಿಸಿದೆ, ಅದರಲ್ಲಿ ಪ್ರಮುಖವಾದವು ಚಂದ್ರಯಾನ, ಮಂಗಳಯಾನ ಮತ್ತು ಒಂದೇ ಬಾರಿಯಲ್ಲಿ 104 ಉಪಗ್ರಹಗಳ ಯಶಸ್ವಿ ವಿಶ್ವ ದಾಖಲೆ ಉಡಾವಣೆ. ಇನ್ನು “ಬಾಹ್ಯಾಕಾಶ ತಂತ್ರಜ್ಞಾನದಿಂದ ದೇಶವನ್ನು ಪ್ರಗತಿಯತ್ತ ಕೊಂಡೊಯುವುದೇ ನನ್ನ ಕನಸು” ಎನ್ನುತ್ತಾರೆ ಡಾ. ಶಿವನ್.

LEAVE A REPLY

Please enter your comment!
Please enter your name here