ತಿನ್ನಲು ತುಂಬಾ ರುಚಿಕರವಾದ ಹಾಗೂ ಸುಲಭವಾಗಿ ಮಾಡಬಹುದಾದ ಟೊಮೆಟೊ ದೋಸೆ ಮಾಡುವ ವಿಧಾನ..!!

0
563

ದೋಸೆಯಲ್ಲೂ ನೂರಾರು ತರದ ದೋಸೆಗಳನ್ನು ಮಾಡಬಹುದು, ಆದ್ದರಿಂದ ದೋಸೆ ಪ್ರಿಯರಿಗೆ ದೋಸೆ ತಿನ್ನಲು ಯಾವತ್ತೂ ಬೇಜಾರಾಗುವುದಿಲ್ಲ. ದೋಸೆಯಲ್ಲಿ ಎಷ್ಟು ವೆರೈಟಿ ದೋಸೆಗಳಿರುತ್ತವೆ ಅವು ನಿಮ್ಮ ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಒಂದಾದ ಟೊಮೆಟೊ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಾಗೆ ಸುಲಭವಾಗಿ ಕೂಡ ಮಾಡಬಹುದು..ಇಂದೇ ಟ್ರೈ ಮಾಡಿ..

ಬೇಕಾಗುವ ಸಾಮಾಗ್ರಿಗಳು.

 • ದೋಸೆ ಹಿಟ್ಟು 2 ಕಪ್
 • ಟೊಮೆಟೊ 2
 • ಹಸಿ ಮೆಣಸಿನಕಾಯಿ 3
 • ಜೀರಿಗೆ 1 ಚಮಚ
 • ಹಸಿ ಶುಂಠಿ
 • ರುಚಿಗೆ ತಕ್ಕಷ್ಟು ಉಪ್ಪು
 • ಎಣ್ಣೆ

ತಯಾರಿಸುವ ವಿಧಾನ

 • ಮೊದಲು ದೋಸೆ ಹಿಟ್ಟು ರೆಡಿ ಮಾಡಿ (1 ಗ್ಲಾಸ್ ಅಕ್ಕಿ ಮತ್ತು 1/4 ಗ್ಲಾಸ್ ಗಿಂತ ಸ್ವಲ್ಪ ಕಡಿಮೆ ಉದ್ದಿನ ಬೇಳೆಯನ್ನು ನೀರಿನಲ್ಲಿ 4-5 ಗಂಟೆಗಳ ನೆನೆ ಹಾಕಿ ನಂತರ ರುಬ್ಬಿ 8-9 ಗಂಟೆಗಳ ಕಾಲ ಇಡಿ(ರಾತ್ರಿ ರುಬ್ಬಿಟ್ಟರೆ ಬೆಳಗ್ಗೆ ದೋಸೆಗೆ ಹಿಟ್ಟು ರೆಡಿಯಾಗುವುದು).
 • ಅಕ್ಕಿ, ಅವಲಕ್ಕಿ . ತೊಳೆದು ನೀರಿನಲ್ಲಿ ನೆನೆಸಿ ಉದ್ದಿನ ಬೇಳೆ, ಕಡಲೇ ಬೇಳೆ ಒಟ್ಟಿಗೆ ತೊಳೆದು, ನೆನೆಸಿಡಿ. 2 ಗಂಟೆಯ ನಂತರ ಬೇಳೆ ನುಣ್ಣಗೆ ರುಬ್ಬಿ, ನಂತರ ಅಕ್ಕಿಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಸೇರಿಸಿ, ಉಪ್ಪು ಸೇರಿಸಿ, ಚೆನ್ನಾಗಿ ಕಲೆಸಿ ಮುಚ್ಚಿಡಿ. ಹಿಟ್ಟನ್ನು ರಾತ್ರಿ ಪೂರ್ತಿ ಹಾಗೆ ಮುಚ್ಚಿಡಿ (ಏಳರಿಂದ ಎಂಟು ಗಂಟೆ ರುಬ್ಬಿದ ಹಿಟ್ಟನ್ನು ಮುಚ್ಚಿಡಿ). ಹೀಗೆ ದೋಸೆ ಹಿಟ್ಟುನ್ನು ರೆಡಿ ಮಾಡಿಕೊಂಡು ಇಡಿ.
 • ಬೆಳಗ್ಗೆ ದೋಸೆ ಮಾಡುವ ಅರ್ಧ ಗಂಟೆ ಮೊದಲು ಟೊಮೆಟೊ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಹಾಕಿ ಗಟ್ಟಿಯಾಗಿ ರುಬ್ಬಿ, ಅದನ್ನು ದೋಸೆ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಕಲಸಿ.
 • ಕಾದ ಹೆಂಚಿನ ಮೇಲೆ ದೋಸೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಬೇಯಿಸಿ.
 • ಈಗ ಗರಿಗರಿಯಾದ ಮತ್ತು ಬಾಯಿಗೆ ರುಚಿಕರವಾದ ಟೊಮೆಟೊ ದೋಸೆ ಸವಿಯಲು ಸಿದ್ದ.

LEAVE A REPLY

Please enter your comment!
Please enter your name here