ದುಬಾರಿ ಹಾಗೂ ಹಾನಿಕಾರಕ ಕೆಮಿಕಲ್-ಗಳಿಂದ ಮಾಡಿದ ಹೇರ್-ಡೈಗಳನ್ನು ಬಿಟ್ಟು ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಈ ಹೇರ್-ಡೈ ಅನ್ನು ಉಪಯೋಗಿಸಿ..

0
680

ಕೂದಲನ್ನು ವಿವಿಧ ರೀತಿಯಿಂದ ವಿನ್ಯಾಸ ಮಾಡಿಕೊಂಡು ಅದಕ್ಕೆ ತಮಗೆ ಇಷ್ಟವಾದ ಬಣ್ಣ ಬಳಿಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಟ್ರೆಂಡ್ ಆಗಿದೆ. ಬಹುತೇಕ ಮಹಿಳೆಯರು ಬ್ಯೂಟಿ ಪಾರ್ಲರ್‌ಗಳಲ್ಲಿ ಗಂಟೆಗಟ್ಟಲೆ ಕಾಲ ವ್ಯಯಿಸಿ ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳುತ್ತಾರೆ. ಇದರಿಂದ ದುಬಾರಿ ಬೆಲೆಯ ರಾಸಾಯನಿಕ ವಸ್ತುಗಳು ಅವರ ಕೂದಲಿಗೆ ಸೇರಿಕೊಳ್ಳುತ್ತವೆ ಹಾಗೂ ಇದಕ್ಕಾಗಿ ಅವರು ತಮಗೆ ಗೊತ್ತಿಲ್ಲದೆಯೇ ಹಣವನ್ನೂ ಪಾವತಿಸುತ್ತಾರೆ. ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವಾರು ಡೈಗಳು ಸಿಗುತ್ತವಾದರೂ ಅದು ಕೂದಲಿಗೆ ಅಷ್ಟು ಸುರಕ್ಷಿತವಲ್ಲ. ಇದರಿಂದ ಕೂದಲು ದುರ್ಬಲಗೊಂಡು ತುಂಡಾಗುತ್ತವೆ. ಇದರ ಬದಲು ಕೂದಲಿಗೆ ನೈಸರ್ಗಿಕ ರೀತಿಯಲ್ಲಿ ಸಿಗುವ ಬಣ್ಣವನ್ನು ಹಚ್ಚಿಕೊಳ್ಳಿ. ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇವು ಚರ್ಮದ ಕಾಂತಿ ಹೆಚ್ಚಿಸಿ, ಸೌಂದರ್ಯವರ್ಧಕಗಳಾಗಿ ಕೆಲಸ ಮಾಡುವುದಲ್ಲದೆ ಯಾವುದೇ ಅಡ್ಡಪರಿಣಾಮಗಳನ್ನೂ ಬೀರುವುದಿಲ್ಲ. ಅಂತಹ ಕೆಲವು ಉತ್ಪನ್ನಗಳು ಇಲ್ಲಿವೆ.

ಆಲೂಗಡ್ಡೆ ಸಿಪ್ಪೆ

ಪ್ರತಿಯೊಂದು ಅಡುಗೆಮನೆಯಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ತರಕಾರಿ ಎಂದರೆ ಆಲೂಗಡ್ಡೆ. ಆಲೂಗಡ್ಡೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದ ಐರನ್‌, ಫೈಬರ್‌ ಮತ್ತು ಫೋಲೆಟ್‌ ಇದೆ. ಈ ಕಾರಣದಿಂದ ನಿಮ್ಮ ಕೂದಲಿನ ಬಣ್ಣವನ್ನು ರಕ್ಷಿಸಲು ಆಲೂಗಡ್ಡೆ ಸಿಪ್ಪೆ ನೈಸರ್ಗಿಕ ವರ್ಣದ್ರವ್ಯವಾಗಿ ಕಾರ್ಯನಿರ್ವಹಿಸುತ್ತವೆ.

ಬಳಸುವ ವಿಧಾನ:

ಆಲೂಗಡ್ಡೆ ಸಿಪ್ಪೆಗೆ ಸುಮಾರು 2 ಕಪ್ ನೀರು ಹಕ್ಕಿ ಸುಮಾರು 10 ನಿಮಿಷಗಳ ಕಾಲ ಕುದಿಸಿ. ನಂತರ ಸಿಪ್ಪೆಯನ್ನು ತೆಗೆದು ನೀರನ್ನು ತಣ್ಣಗಾಗಲು ಬಿಡಿ. ನಂತರ ಆ ನೀರನ್ನು ಕೂದಲಿನ ಬೇರು ಸಮೇತವಾಗಿ ಎಲ್ಲ ಕೂದಲಿಗೆ ನಿಧಾನವಾಗಿ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ 30 ನಿಮಿಷಗಳ ಕಾಲ ಇರಿಸಿಕೊಳ್ಳಿ ನಂತರ ನೀರಿನಿಂದ ತೊಳೆಯಿರಿ.

ಮದರಂಗಿ:

ಮದರಂಗಿ ಎಲೆಗಳು ಕೂದಲಿನ ನ್ಯಾಚುರಲ್‌ ಬಣ್ಣ ನೀಡುವುದರ ಜೊತೆಗೆ, ಶೈನಿ ಹಾಗೂ ಸ್ಮೂತ್‌ ಆಗುವಂತ ಮಾಡುತ್ತದೆ. ಮದರಂಗಿ ಎಲೆಗಳನ್ನು ಒಣಗಿಸಿ ಪುಡಿಮಾಡಿ, ನೀರು, ಮೆಂತೆ, ಚಹಾ ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿಗೆ ಸುಂದರ ಬಣ್ಣ ಬರುತ್ತದೆ.

ಕಾಡು ನಲ್ಲಿಕಾಯಿ:

ಕಾಡು ನಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಕೂದಲು ಬೆಳವಣಿಗೆಗೆ ಬಂದಾಗ ಅದರ ಪುನಶ್ಚೈತನ್ಯ ಗುಣಲಕ್ಷಣಗಳಿಗೆ ಇದು ಹೆಸರುವಾಸಿಯಾಗಿದೆ. ನಲ್ಲಿಕಾಯಿ ನಿಮ್ಮ ಕೂದಲನ್ನು ಬಣ್ಣ ಮಾಡಲು ಇದು ಅತ್ಯುತ್ತಮವಾದ ಅಂಶವಾಗಿದೆ. ಇದು ತುಂಬಾ ಸುರಕ್ಷಿತವಾಗಿದೆ. ಉನ್ನತ ಮಟ್ಟದ ಮೆಲನಿನ್ ಅಂಶದೊಂದಿಗೆ, ನಲ್ಲಿಕಾಯಿಯು ಬೂದುಬಣ್ಣದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ನಿಮ್ಮ ಕೂದಲಿನ ಗಾತ್ರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬಳಸುವ ವಿಧಾನ:

ಸ್ವಲ್ಪ ತೆಂಗಿನ ಎಣ್ಣೆಗೆ ನಲ್ಲಿಕಾಯಿ ಪುಡಿ ಸೇರಿಸಿ ಆ ಮಿಶ್ರಣವನ್ನು ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ 30-40 ನಿಮಿಷಗಳ ಕಾಲ ಅದನ್ನು ನಿಮ್ಮ ಕೂದಲಿಗೆ ಅನ್ವಯಿಸಿ. ತಣ್ಣೀರಿನೊಂದಿಗೆ ಇದನ್ನು ತೊಳೆಯಿರಿ. ಮಿಶ್ರಣದ ಪ್ರಮಾಣವು ನಿಮ್ಮ ಕೂದಲಿನ ಉದ್ದಕ್ಕೂ ಅನುಗುಣವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ಕಾಫಿ:

ಕಾಫಿ ಯಶಸ್ವಿಯಾದ ವರ್ಣದ್ರವ್ಯವಾಗಿದೆ. ಇದರ ನಿಯಮಿತ ಬಳಕೆಯು ನಿಮ್ಮ ಕೂದಲು ಬಣ್ಣಕ್ಕೆ ನೈಸರ್ಗಿಕ ಮತ್ತು ಆರೋಗ್ಯಕರವಾಗಿ ಕಾಣಿಸುವ ಮೂಲಕ ಗಮನಾರ್ಹ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಈ ಮಿಶ್ರಣದಿಂದ ಕೂದಲಿಗೆ ಕಂದು ಬಣ್ಣ ಬರುತ್ತದೆ. ಸ್ವಲ್ಪ ನೀರಿಗೆ ಕಾಫಿ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಇದನ್ನು ಸೋಸಿ ಅದು ಬಿಸಿಯಿರುವಾಗಲೇ ಕೂದಲಿಗೆ ಹಚ್ಚಿಕೊಳ್ಳಿ 30 ನಿಮಿಷಗಳ ಕಾಲ ಇರಿಸಿಕೊಂಡ ನಂತರ ನೀರಿನಿಂದ ತೊಳೆಯಿರಿ.

LEAVE A REPLY

Please enter your comment!
Please enter your name here