ಬೆಳಗಾವಿಯಲ್ಲಿ ಎಂ.ಇ.ಎಸ್. ಪುಂಡಾಟಿಕೆಗೆ ಬೀಳಲಿದೆ ಬ್ರೇಕ್, ಇನ್ಮೇಲೆ ಏನಿದ್ದರೂ ಕನ್ನಡಿಗರದ್ದೇ ದರ್ಬಾರ್..

0
233

ಬೆಳಗಾವಿಯಲ್ಲಿ ಪದೇ-ಪದೇ ಕಿರಿಕ್ ಮಾಡುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಪಕ್ಷ ಎಂಇಎಸ್ ಗೆ ಈ ಬಾರಿ ಸಂಕಷ್ಟ ಎದುರಾಗಿದೆ. ಎಂಇಎಸ್ ಪಕ್ಷದ ಉಪಟಳದಿಂದ ಬೇಸತ್ತಿದ್ದ ಬೆಳಗಾವಿ ಜಿಲ್ಲೆಯ ಕನ್ನಡಿಗರಿಗಂತು ಹೊಸ ವರ್ಷದ ಕೊಡುಗೆಯಂತಾಗಿದೆ ಈ ನಿಯಮ, ಏನದು ನೀವೇ ನೋಡಿ.

ಕರ್ನಾಟಕದಲ್ಲಿ ಇದ್ದುಕೊಂಡು ಯಾವಾಗಲು ಮಹಾರಾಷ್ಟ್ರಕ್ಕೆ ಬಹಿರಂಗವಾಗಿ ಬೆಂಬಲ ನೀಡಿ, ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡುತ್ತ ಮತ್ತು ಜಿಲ್ಲೆಯ ಕನ್ನಡಿಗರನ್ನು ಕಾಡುತ್ತಿದ್ದ ಎಂಇಎಸ್ ಪಕ್ಷದ ಆಡಳಿತ ಇನ್ನು ಮುಂದೆ ಅಂತ್ಯವಾಗಲಿದೆ. ಈ ವರ್ಷದಿಂದ ಬೆಳಗಾವಿ ಪಾಲಿಕೆ ಕನ್ನಡಿಗರ ಪಾಲಾಗಲಿದೆ.

ಈ ಬಾರಿಯ ಬೆಳಗಾವಿ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಹಾಗು ಎಸ್-ಟಿ ಗೆ ಮೀಸಲಾಗಿದೆ, ಈ ಕಾರಣದಿಂದ ಮೇಯರ್‌ ಸ್ಥಾನ ಎಸ್‌ಟಿಗೆ ಮತ್ತು ಉಪಮೇಯರ್ ಸ್ಥಾನ ಹಿಂದುಳಿದ ವರ್ಗಕ್ಕೆ ವೊಲಿಯಲಿದೆ. ಇನ್ನು ಎಂಇಎಸ್ ನ ಯಾವ ಒಬ್ಬ ಸದಸ್ಯ ಕೂಡ ಈ ವರ್ಗಕ್ಕೆ ಸೇರಿಲ್ಲ ವಾದರಿಂದ ಈ ಎರಡು ಸ್ಥಾನ ಕನ್ನಡಿಗರಿಗೆ ಖಾಯಂ.

ಇನ್ನು ಇದೆ ಮಾರ್ಚ್ ತಿಂಗಳಲ್ಲಿ ಹಾಲಿ ಮೇಯರ್ ಅವಧಿ ಪೂರ್ಣಗೊಳ್ಳಲಿದೆ ನಂತರ ಕನ್ನಡಿಗರಾದ ಬಸಪ್ಪ ಚಿಕ್ಕಲದಿನ್ನಿ ಹಾಗು ಸಂಜೋತಾ ಗಂಡಗುದರಿ ಈ ಸ್ಥಾನಕ್ಕೆ ಸ್ಪರ್ದಿಸಲಿದ್ದಾರೆ, ಇಬ್ಬರಲ್ಲಿ ಯಾರೊಬ್ಬರು ಗೆದ್ದರು ಅದು ಕನ್ನಡಿಗರಿಗೆ ಸಂದ ಗೆಲುವಾಗಲಿದೆ.

ಬೆಳಗಾವಿ ಪಾಲಿಕೆ ಮೇಯರ್ ಹಾಗು ಉಪಮೇಯರ್ ಸ್ಥಾನದ ಆಕಾಂಕ್ಷಿಗಳು ಇದರ ಬಗ್ಗೆ ಚರ್ಚಿಸಲು ಹಾಗು ಮುಂದಿನ ನಡೆ ಬಗ್ಗೆ ಸಚಿವರಾದ ರಮೇಶ್ ಜಾರಕಿಹೊಳಿಯವರನ್ನು ಭೇಟಿ ಮಾಡಲಿದ್ದಾರಂತೆ. ಒಟ್ಟಾರೆ ಬೆಳಗಾವಿ ಜಿಲ್ಲೆಗೆ ಸ್ವಲ್ಪ ಮಟ್ಟಿಗೆ ಎಂಇಎಸ್ ಕಾಟದಿಂದ ವಿಮುಕ್ತಿ ದೊರಕಿದಂತಾಗಿದೆ.

LEAVE A REPLY

Please enter your comment!
Please enter your name here