ನಿತ್ಯ ಭವಿಷ್ಯ: ಜನವರಿ 3, 2018

0
495

ಮೇಷ:
ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನದಿಂದ ಲಾಭ. ಕಾಲೋಚಿತ ವರ್ತನೆಯಿಂದ ಜಂಜಾಟ ಪರಿಹಾರ.

ವೃಷಭ:
ಹಿರಿಯ ಅಧಿಕಾರಿ ವರ್ಗದವರಿಗೆ ಮುಂಬಡ್ಡಿಯ ಯೋಗ. ಹೊಸ ವ್ಯಾಪಾರಿಗಳಿಗೆ ಲಾಭದಾಯಕ ಆದಾಯ. ಸಮಾಧಾನ.

ಮಿಥುನ:
ಉದರ ಸಂಬಂಧಿ ದೋಷದಿಂದ ವೈದ್ಯರ ಭೇಟಿ. ಹಣಕಾಸಿನ ವಿಚಾರದಲ್ಲಿ ಕೊಂಚ ಸಂತಾಪ. ಮಿತ್ರರ ಆಗಮನದಿಂದ ಸಂತಸ.

ಕರ್ಕ:
ಲಾಭದಾಯಕ ವ್ಯವಹಾರಗಳಿಗೆ ಹಿತಶತ್ರುಗಳ ಬಾಧೆ. ಷೇರು ವ್ಯವಹಾರಗಳಿಂದ ಹಿನ್ನಡೆ. ಹಿಂದಿನ ರೋಗದಿಂದ ಕಿರಿಕಿರಿ.

ಸಿಂಹ:
ಚಿಂತೆ ಬದಿಗೊತ್ತಿ ಮುಂದುವರಿಯುವಿಕೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಬಲಪ್ರಾಪ್ತಿ. ಆರೋಗ್ಯ ಪ್ರಗತಿಯಿಂದ ಉಲ್ಲಾಸ.

ಕನ್ಯಾ:
ಪುತ್ರ / ಪುತ್ರಿಯ ವೈವಾಹಿಕ ಸಂಬಂಧಕ್ಕಾಗಿ ಅಲೆದಾಟ. ಕೋರ್ಟು ಕಚೇರಿ ಕೆಲಸದವರಿಗೆ ಅಧಿಕ ಖರ್ಚು ಕೊಂಚ ಬೇಸರ.

ತುಲಾ:
ವೃತ್ತಿರಂಗದಲ್ಲಿ ಬರುವ ಸಂಚಾರದಿಂದ ಕಾರ್ಯಾನುಕೂಲ. ರಾಜಕಾರಣಿಗೆ ರಾಜಕೀಯದಲ್ಲಿನ ಭಿನ್ನ ಅಭಿಪ್ರಾಯದಿಂದ ಮನಃಸ್ತಾಪ.

ವೃಶ್ಚಿಕ:
ನಾನಾ ಕಾರ್ಯಗಳಿಗೆ ನಾನಾ ವಿಚಾರಧಾರೆ. ಸರಕಾರಿ ಉದ್ಯೋಗಿಗಳಿಗೆ ಬದಲಾವಣೆ ಸಂಭವ. ಆರ್ಥಿಕ ಸಂಗತಿಯಲ್ಲಿ ಅಡಚಣೆ.

ಧನು:
ವಾಹನ-ಭೂ ಖರೀದಿದಾರರಿಗೆ ಆರ್ಥಿಕ ಅಡಚಣೆ. ಗುರು-ಹಿರಿಯರ ಸಹಾಯದಿಂದ ಸೂಕ್ತ ಮಾರ್ಗದರ್ಶನ. ನಿಧಾನ ಸಮಾಧಾನ.

ಮಕರ:
ವೇಗದ ವಾಹನದಿಂದ ಕೊಂಚ ಏರುಪೇರು ಸಂಭವ. ಸೋದರನಿಗೆ ವಿವಾಹ ಯೋಗ. ಮನೆಯಲ್ಲಿ ಆರ್ಥಿಕ ಜವಾಬ್ದಾರಿ ಹೆಚ್ಚಳ.

ಕುಂಭ:
ನಂಬಿದ ವ್ಯಕ್ತಿ ದೂರವಾಗುವಿಕೆಯಿಂದ ಮನಸ್ಸಿಗೆ ಬೇಸರ. ಸಾಮಾಜಿಕ ಕಾರ್ಯಗಳಿಂದ ದೇಹಾಯಾಸ. ಉದ್ಯೋಗದಿಂದ ತೃಪ್ತಿ.

ಮೀನ:
ಋಣಾತ್ಮಕ ಚಿಂತನೆಯಿಂದ, ಹಿರಿಯರ ಸಹಾಯದಿಂದ ಸೂಕ್ತ ಪರಿಹಾರ. ಅವಿವಾಹಿತರಿಗೆ ಉತ್ತಮ ಕಂಕಣ ಯೋಗ.

LEAVE A REPLY

Please enter your comment!
Please enter your name here