ರೈಲ್ವೆ ಟಿಕೆಟ್ ಬುಕ್ ಮಾಡಬೇಕಾದರೆ ಸೀಟ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನಿಮಗೆ ಯಾಕೆ ಕೊಡೋಲ್ಲ ಗೊತ್ತಾ?

0
713

ನೀವು ಜೀವನದಲ್ಲಿ ಒಂದಲ್ಲ ಒಂದು ಬಾರಿ ರೈಲ್ವೆ ಸೀಟ್ ಬುಕ್ ಮಾಡಿರುತ್ತೀರ, ನೀವು ಸಾಮಾನ್ಯವಾಗಿ ಹೆಸರು, ವಿಳಾಸ, ಮೊಬೈಲ್ ನಂಬರನ್ನು ಮತ್ತು ನಿಮ್ಮ ಆಯ್ಕೆಯ ಬರ್ತ್ ಅನ್ನು ನೀಡಿರುತ್ತೀರ ಆದರೆ ನೀವು ಒಂದು ಗಮನಿಸಬೇಕಾದ ವಿಷಯವೇನೆಂದರೆ ಬಸ್ಸಿನ ಹಾಗೆ ರೈಲ್ವೆ ನಿಮಗೆ ಇಷ್ಟವಾದ ಸೀಟ್ ನಂಬರ್ ಅಥವಾ ಇಂತಹುದೇ ಬೋಗಿಯಲ್ಲಿ ಇಂತಹುದೇ ಸೀಟ್ ಆಯ್ಕೆಮಾಡುವ ಸೌಲಭ್ಯವನ್ನು ನೀಡಿಲ್ಲ, ಅರೆ ಹೌದು ಯಾಕೆ ಹಾಗೆ ಅಂತೀರ ಮುಂದೆ ಓದಿ.

ರೈಲುಗಳು ತುಂಬ ವೇಗವಾಗಿ ಚಲಿಸುವಾಗ ಅಥವಾ ಟರ್ನ್ ಮಾಡುವಾಗ ಅದರ ಮೇಲೆ ಬಹಳ ಒತ್ತಡ ವಿರುತ್ತದೆ, ಅದು ತನ್ನ ಸ್ವಂತ ಭಾರ ಮತ್ತು ಲಗೇಜ್ ಹಾಗು ಪ್ರಯಾಣಿಕರ ಭಾರದಿಂದ ಇರುತ್ತದೆ. ರೈಲಿನಲ್ಲಿ ಒಂದು ವೇಳೆ ಎಲ್ಲರು ಮೊದಲು ಹಾಗು ಕೊನೆಯ ಬೋಗಿಗಳು ತುಂಬಿ ಮದ್ಯ ಬೋಗಿಗಳು ಖಾಲಿ ಇವೆ ಎಂದುಕೊಳ್ಳಿ, ರೈಲು ಟರ್ನ್ ತೆಗೆದುಕೊಳ್ಳುವಾಗ ಮದ್ಯೆ ಒತ್ತಡ ಜಾಸ್ತಿಯಾಗಿ ಹಾಲಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

ಅದಕ್ಕೆ ರೈಲ್ವೆ ಮೊದಲು ಮದ್ಯೆಯಿಂದ ಅಂದರೆ ಉದಾಹರಣೆಗೆ S-4, S-5 ಇಂದ ಟಿಕೆಟ್ ಕಾಯ್ದಿರಿಡುತ್ತದೆ ಹಾಗು ಮೊದಲು ಎಲ್ಲ ಬೋಗಿಗಳ ಕೆಳ ಅಥವಾ ಲೋವರ್ ಬರ್ತ್ಗಳನ್ನು ಪೂರ್ತಿಮಾಡುತ್ತದೆ ನಂತರ ಮದ್ಯೆಯ ಹಾಗು ಮೇಲಿನ ಬರ್ತ್ಗಳನ್ನು ಪೂರ್ತಿಮಾಡುತ್ತದೆ, ಎಲ್ಲಕಿಂತ ಕೊನೆಯದಾಗಿ ಬಾಗಿಲಿನ ಬಳಿಯಿರುವ ಸೀಟುಗಳನ್ನು ಪೂರ್ತಿಮಾಡುತ್ತದೆ, ನೀವು ಕೊನೆ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸಿದರೆ ನಿಮಗೆ ಬಾಗಿಲಿನ ಬಳಿ ಸೀಟ್ ಸಿಗುವುದು ಇದೆ ಕಾರಣಕ್ಕೆ.

ಇನ್ನು ರೈಲ್ವೆ ಅಧಿಕಾರಿಗಳು ಹೇಳುವ ಪ್ರಕಾರ ಕೆಲವು ಲೋವರ್ ಅಥವಾ ಕೆಳ ಬರ್ತ್ಗಳನ್ನು ಗರ್ಭಿಣಿಯರಿಗೆ, ವಯಸ್ಸಾದ ಮತ್ತು ದಿವ್ಯಾಂಗ ಪ್ರಯಾಣಿಕರಿಗೆ ಮೀಸಲಾಗಿರುತ್ತವೆಯಂತೆ. ಇನ್ನು ವೈಜ್ಞಾನಿಕವಾಗಿ ರೈಲಿನ ಗುರುತ್ವಾಕರ್ಷಣೆಯನ್ನು ಹೆಚ್ಚಿಸಲು ಮತ್ತು ರೈಲು ಹಳಿಗಳ ಜೊತೆ ಹೆಚ್ಚಿನ ಸಂಪರ್ಕದಲ್ಲಿರಲು ಈ ರೀತಿ ಮಾಡಲಾಗುತ್ತದೆಯಂತೆ.

LEAVE A REPLY

Please enter your comment!
Please enter your name here