ಡಿಸೆಂಬರ್ 21 ಕೆಟ್ಟ ದಿನವಂತೆ ಪ್ರಳಯವಾಗುವ ಮುನ್ಸೂಚನೆಯಂತೆ ಇದೆಲ್ಲ ನಿಜಾನಾ ನೀವೇ ನೋಡಿ…

0
273

ಡಿಸೆಂಬರ್ 21, 2017 ಅಂದರೆ ಇವತ್ತು ಅತ್ಯಂತ ಅಪಾಯಕಾರಿ ದಿನವಂತೆ ಯಾವ ಕೆಲಸ ಮಾಡಿದರು, ಹಾನಿಯಾಗುತ್ತದೆ ಅಂತೆ, ಹೊಸ ನಿರ್ಧಾರ ತೆಗೆದುಕೊಂಡರು ಅದೃಷ್ಟ ಕೈಕೊಡುತ್ತಂತೆ, ಇದರ ಪ್ರಭಾವ ಅಥವಾ ನೆರಳು ಮುಂದಿನ ವರ್ಷದವರೆಗೂ ಬೀಳುತ್ತದೆಯಂತೆ ನಿಜಾನಾ, ನೀವೇ ನೋಡಿ.

ಇಂದು ಹಗಲು ಕಡಿಮೆ ಮತ್ತು ರಾತ್ರಿ ಜಾಸ್ತಿ ಇರುತ್ತದೆ, ಇದರಿಂದ ಎಲ್ಲರಿಗು ಶಕ್ತಿ ಕಡಿಮೆ ಇರುತ್ತದೆಯಂತೆ, ಜಾತಕದಲ್ಲಿ ಮಕರದಲ್ಲಿ ಪ್ರವೇಶಿಸಿದರೆ ಲಾಭಕರ, ಆದರೆ ಖಗೋಳ ಪರವಾಗಿ ಸ್ಥೂಲ ಪ್ರಮಾಣದಲ್ಲಿ ಇದು ಅಪಾಯಕಾರಿ ವಿಷಯ, ಪ್ರಳಯಕಾರಕ ಹಲವರು ಹೇಳಿದ್ದಾರೆ, ಅದಲ್ಲದೆ ಇಂದು ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳಬೇಡಿ, ಶುಭ ಕಾರ್ಯಗಳನ್ನು ಮಾಡಬೇಡಿ, ಹೊರಗೆ ಹೋಗಬೇಡಿ ಎಂದು ಸಾಕಷ್ಟು ಅಸ್ಟ್ರಾಲಜಿ ವೆಬ್-ಸೈಟ್ ಗಳು, ಜ್ಯೋತಿಷಿಗಳು ಮತ್ತು ಸುದ್ದಿ ವಾಹಿನಿಗಳು ಹೇಳಿವೆ.

ಇಂದು ವರ್ಷದಲ್ಲೇ ಅತ್ಯಂತ ಕಡಿಮೆ ಹಗಲು ದಾಖಲಾಗುತ್ತಿದೆ, ಆದರೆ ಇದರಲ್ಲಿ ದೊಡ್ಡ ಅಚ್ಚರಿ ಏನು ಇಲ್ಲ ಮತ್ತು ಕೆಲವು ಜ್ಯೋತಿಷಿಗಳು, 350 ವರ್ಷಗಳಲ್ಲಿ ಮೊದಲ ಬಾರಿ ಸೂರ್ಯ, ಶನಿ ಒಂದೇ ರಾಶಿಯಲ್ಲಿ ಬರುತ್ತಿದ್ದಾರೆ ಇದು ಪ್ರಳಯದ ಸಂಕೇತ ಎಂದು ಆತಂಕ ಹರಡಿಸಿದ್ದರು, ಆದರೆ ಇಂತಹ ಆಧುನಿಕ ಯುಗದಲ್ಲಿಯು ಈ ತರಹದ ಕಟ್ಟು ಕಥೆಗಳನ್ನು ನಂಬುವುದು ಎಷ್ಟು ಸರಿ, ಇವೆಲ್ಲ ಜನರನ್ನು ಹೆದರಿಸಲು ಮಾಡುತ್ತಿರುವ ಯೋಜನೆ ಅಷ್ಟೇ, ನಿತ್ಯದ ಕೆಲಸಕ್ಕೂ, ಇದಕ್ಕೂ ಯಾವುದೇ ಸಂಭಂದವಿಲ್ಲ.

ಒಟ್ಟಿನಲ್ಲಿ ದೇವರ ಮೇಲೆ ನಾವು ಮಾಡುವ ಕೆಲಸದ ಮೇಲೆ ನಂಬಿಕೆ ಇಟ್ಟು ಶ್ರದ್ಧಾ, ಭಕ್ತಿಯಿಂದ ಕೆಲಸ ಮಾಡಿದರೆ ಯಾವ ದೋಷವು ಬರುವುದಿಲ್ಲ…!

LEAVE A REPLY

Please enter your comment!
Please enter your name here