ಬಾಣಂತಿಯರ ಆರೈಕೆ ಈ ರೀತಿಯಿರಲಿ.. ಎಚ್ಚರಿಕೆ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ..

0
1224

ಮಹಿಳೆಯರ ಜೀವನದಲ್ಲಿ ಒಂದೊಂದು ಘಟ್ಟವೂ ಬಲು ವಿಶೇಷ.. ಅದರಲ್ಲೂ ಋತುಮತಿಯ ಸಮಯ ಮತ್ತು ಬಾಣಂತಿಯ ಸಮಯದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು.. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಒಂದು ಜೀವ ಆದರೆ ಬಾಣಂತಿಯ ಸಮಯದಲ್ಲಿ ತಾಯಿಯ ಜೊತೆ ಮಗುವಿನ ಆರೋಗ್ಯವೂ ಅತಿ ಮುಖ್ಯವಾಗಿರುತ್ತದೆ.. ಹಾಗಿದ್ದರೆ ಬಾಣಂತಿಯ ಆರೈಕೆ ಹೇಗಿರಬೇಕೆಂದು ಇಲ್ಲಿದೆ ನೋಡಿ..

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ

ಮಗುವಿನಷ್ಟೆ ತಾಯಿಯ ಆರೋಗ್ಯವು ಅತಿ ಮುಖ್ಯ ಅದಕ್ಕಾಗಿ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಬೇಕು.. ಈ ಸಮಯದಲ್ಲಿ ಆರೋಗ್ಯ ಕೆಟ್ಟರೆ ಚೇತರಿಸಿಕೊಳ್ಳುವುದು ಬಲು ಕಷ್ಟ.

ಹೊಟ್ಟೆಗೆ ಬಟ್ಟೆಯನ್ನು ಕಟ್ಟಿ.

ಬಾಣಂತಿಯರು ತಪ್ಪದೇ ಹೊಟ್ಟೆಗೆ ಬಟ್ಟೆಯನ್ನು ಕಟ್ಟಿ.. ಮಗುವನ್ನು ಹೆತ್ತಮೇಲೆ ಹಿಗ್ಗಿ ಕೊಂಡಿದ್ದ ಹೊಟ್ಟೆ ಸಣ್ಣ ಆಗಬೇಕೆಂದರೆ ಬಟ್ಟೆ ಕಟ್ಟಬೇಕು.. ಜೊತೆಗೆ ಇದು ಸುಲಭವಾಗಿ ಬ್ಲೀಡ್ ಆಗಲು ಸಹಾಯ ಮಾಡುತ್ತದೆ.. ಈಗ ಬಟ್ಟೆಗೆ ಬದಲಾಗಿ ಸಾಕಷ್ಟು ಬೆಲ್ಟ್ ಗಳು ಬಂದಿವೆ.. ಆದರೆ ಬಹುಪಾಲು ಡಾಕ್ಟರ್ ಗಳು ಬಟ್ಟೆಯನ್ನೇ ಸೂಚಿಸುತ್ತಾರೆ.

ಆಹಾರದ ಮೇಲೆ ನಿಗಾ ಇರಲಿ.

ಹೆರಿಗೆ ಆದ 11 ದಿನಗಳವರೆಗೆ ಆದಷ್ಟು ಕಾರದ ಪದಾರ್ಥಗಳನ್ನು ಅವಾಯ್ಡ್ ಮಾಡಿ ಜೊತೆಗೆ ಬೆಳ್ಳುಳ್ಳಿ ಮೆಣಸು ಮಿಶ್ರಿತ ಆಹಾರವನ್ನು ಹೆಚ್ಚಿಗೆ ಸೇವಿಸಿ.. ಇದರಿಂದ ತಾಯಿಯ ಎದೆ ಹಾಲು ಹೆಚ್ಚುತ್ತದೆ

ವ್ಯಾಯಾಮ ಅಥವಾ ಯೋಗ ಬೇಡ.

ಹೆರಿಗೆ ಆದ 6 ತಿಂಗಳ ವರೆಗೆ ಯಾವುದೇ ರೀತಿಯ ವ್ಯಾಯಾಮವಾಗಲಿ ಅಥವಾ ಯೋಗಾಸನ ಮಾಡುವುದಾಗಲಿ ಬೇಡ.. ಏಕೆಂದರೆ ಹೆರಿಗೆಯಾದಾಗ ಹೆಣ್ಣಿನ ದೇಹ ಹಲವಾರು ಬದಲಾವಣೆಗೊಳಪಟ್ಟಿರುತ್ತದೆ.. ಆದ್ದರಿಂದ ಅದೆಲ್ಲ ಮೊದಲಿನ ರೂಪಕ್ಕೆ ಬರುವವರೆಗೂ ವ್ಯಾಯಾಮದಿಂದ ದೂರವಿರಿ..

ನಿದ್ರೆ ಅತಿ ಮುಖ್ಯ.

ಎಷ್ಟು ಸಾಧ್ಯವೋ ಅಷ್ಟು ನಿದ್ರೆಯನ್ನು ಮಾಡಿ.. ನಿದ್ರೆ ಮಾಡುವುದರಿಂದ ತಾಯಿಯ ಎದೆ ಹಾಲು ಹೆಚ್ಚುವುದರ ಜೊತೆಗೆ.. ಹೆರಿಗೆ ಸಮಯದಲ್ಲಿ ಬದಲಾವಣೆಗೊಳಪಟ್ಟ ದೇಹ ಮೊದಲಿನಂತಾಗಲು ಸಹಾಯವಾಗುತ್ತದೆ..

ಡಯಟ್ ಇಂದ ದೂರವಿರಿ.

ಹೆರಿಗೆಯಾದಾಗ ಪ್ರತಿ ಮಹಿಳೆಯರು ಯೋಚಿಸುವುದು ಇದೇ ರೀತಿಯಾಗಿ.. ದೇಹದ ಸೌಂಧರ್ಯ ಮಾಸುತ್ತದೆ ಎಂದು ಡಯಟ್ ಮಾಡಲು ಶುರು ಮಾಡಿಬಿಡುತ್ತಾರೆ.. ಆದರೆ ಈ ರೀತಿಯಾಗಿ ಮಾಡಿದರೆ ದೀರ್ಘಕಾಲದ ರೋಗಗಳಿಗೆ ತುತ್ತಾಗಬೇಕಾಗುತ್ತದೆ.. ಮಗುವಿಗೆ ಹಾಲು ಬಿಡಿಸುವವರೆಗೂ ಯಾವುದೇ ರೀತಿಯ ಡಯಟ್ ಮಾಡಬೇಡಿ.

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಲಿ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

LEAVE A REPLY

Please enter your comment!
Please enter your name here