ಕೆಮಿಕಲ್ ಯುಕ್ತ ಸಾಬೂನನ್ನು ಬಳಸುತ್ತಿದ್ದೀರಾ?? ಮನೆಯಲ್ಲೇ ಸುಲಭವಾಗಿ ನೈಸರ್ಗಿಕವಾಗಿ ಸಾಬೂನು ತಯಾರಿಸಬಹುದು ನೋಡಿ..

0
506

ಪ್ರತಿದಿನ ನಾವುಗಳು ಸಾಬೂನನ್ನು ಬಳಸುವುದು ಸಹಜ.. ಮಾರುಕಟ್ಟೆಯಲ್ಲಿ ಸಿಗುವ ವಿಧವಿಧವಾದ ಬಣ್ಣ ಬಣ್ಣವಾದ ಸಾಬೂನುಗಳು ನಮ್ಮ ಆಯ್ಕೆಯಾಗಿರುತ್ತದೆ.. ಆದರೆ ಇವೆಲ್ಲವೂ ಕೆಮಿಕಲ್ ಮಿಶ್ರಿತವಾಗಿರುತ್ತದೆ.. ಹಾಗಿದ್ದರೆ ಸಾಬೂನು ಬಳಸಲೇ ಬಾರದ?? ಹಾಗೆನಿಲ್ಲ ನಾವು ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಸಾಬೂನನ್ನು ತಯಾರಿಸಿಕೊಳ್ಳಬಹುದು.. ಹೇಗೆ ಎಂದು ಇಲ್ಲಿದೆ ನೋಡಿ.. ಲೋಳೆ ಸರ.. ಅಲೋವೆರಾ ಎಂದು ಕರೆಯುವ ಈ ಅದ್ಬುತ ನೈಸರ್ಗಿಕ ಕಾಂತಿವರ್ಧಕದಿಂದ ಸಾಬೂನನ್ನು ತಯಾರಿಸಬಹುದು..

ಸಾಬೂನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು

 • 100 ಗ್ರಾಂ ಲೋಳೆಸರದ ತಿರುಳು.. (ಲೋಳೆಸರದ ಒಳಗಿನ ಭಾಗ)..
 • 100 ಮಿ.ಲೀ. ಕಾಸ್ಟಿಕ್ ಸೋಡಾ..
 • 750 ಮಿ.ಲೀ.ಆಲೀವ್ ಆಯಿಲ್
 • 250 ಮಿ.ಲೀ. ನೀರು
 • ಎಸ್ಸೆನ್ಸ್ ಆಯಿಲ್.. (ಪರಿಮಳ ಯುಕ್ತ ಎಣ್ಣೆ) ಅಂಗಡಿಗಳಲ್ಲಿ ಸಿಗುವುದು..

ಸಾಬೂನು ಮಾಡುವ ವಿಧಾನ

 • ಮೊದಲು ಶುದ್ಧವಾದ 250 ಮಿ.ಲೀ.ನೀರನ್ನು ಬಿಸಿಮಾಡಿ ಒಂದು ಪ್ಲಾಸ್ಟಿಕ್ ಬೇಸಿನ್ ನಲ್ಲಿ ಹಾಕಿ. ನೀರಿಗೆ ಕ್ಯಾಸ್ಟಿಕ್ ಸೋಡವನ್ನು ಬೆರೆಸಿ ಮಿಶ್ರಣಮಾಡಿ..
 • ಮಿಶ್ರಣ ಆರುವವರೆಗು ಕಾಯಿರಿ..
 • ಲೋಳೆಸರದ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ಜೆಲ್ ರೂಪ ಬರುವ ಹಾಗೆ ಮಾಡಿಕೊಳ್ಳಿ..
 • ಆಲೀವ್ ಆಯಿಲ್ ಅನ್ನು ಬಿಸಿ ಮಾಡಿಕೊಳ್ಳಿ..
 • ಈ ಮುಂಚೆ ಕ್ಯಾಸ್ಟಿಕ್ ಸೋಡಾ ಬೆರೆಸಿದ ನೀರಿಗೆಆಲಿವ್ ಆಯಿಲ್ ಅನ್ನು ಹಾಕಿ..
 • ಮಿಶ್ರಣ ದಪ್ಪ ವಾಗುವವರೆಗೆ ಚೆನ್ನಾಗಿ ಕಲಸಿ..
 • ಈಗ ಲೋಳೆಸರ ವನ್ನು ಹಾಕಿ ಕಲಸಿ..
 • ಸುವಾಸನೆಗಾಗಿ ರೋಸ್ ವಾಟರ್ ಅಥವಾ ಇತರೆ ಯವುದೇ ಪರಿಮಳ ಯುಕ್ತ ಆಯಿಲ್ ಅನ್ನು ಬೆರೆಸಿ..
 • ಈ ಮಿಶ್ರಣವನ್ನು ಒಂದು ಊಟದ ತಟ್ಟೆಗೆ ಹಾಕಿ.. ಒಂದು ದಿನ ತಣ್ಣಗಾಗಲು ಬಿಡಿ..
 • ನಿಮ್ಮ ಆಲೋವೆರಾ ಸೋಪ್ ರೆಡಿಯಾಗಿರುತ್ತದೆ.. ನಿಮಗೆ ಯಾವ ಆಕಾರ ಬೇಕು ಆ ಆಕಾರದಲ್ಲಿ ಸೋಪ್ ಅನ್ನು ಕಟ್ ಮಾಡಿಕೊಳ್ಳಿ..
 • ಇದನ್ನು ಹಾಗೆ ಒಂದು 15 ದಿನ ಗಟ್ಟಿಯಾಗಲು ಬಿಟ್ಟುಬಿಡಿ.. ನಂತರ ಬಳಸಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿಟ್ಟುಕೊಳ್ಳಿ.. ಮುಂದೆ ಉಪಯೋಗಕ್ಕೆ ಬರಬಹುದು..

LEAVE A REPLY

Please enter your comment!
Please enter your name here