ಉಪೇಂದ್ರ: ನಮ್ಮ ಪಕ್ಷದಲ್ಲಿ ಹಣವಿಲ್ಲ, ಕನಸಿದೆ ಹಾಗು ಕನಸನ್ನು ಸಾಕಾರಗೊಳಿಸುವ ಹುಮ್ಮಸ್ಸಿದೆ!! ಹಣವಿಲ್ಲದೆ ಉಪೇಂದ್ರ ಚುನಾವಣೆ ಗೆಲ್ಲಲು ಸಾಧ್ಯವೇ??

0
333

ನನ್ನ ಬಳಿ ಕಾಸಿಲ್ಲ; ಕನಸಿದೆ -ಉಪೇಂದ್ರ

ಈಗಷ್ಟೇ ಹೊಸ ಪಕ್ಷ ಘೋಷಿಸಿದ ನಟ ಉಪೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಮೋದಿಯೊಬ್ಬರಿಂದ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ ಎಂದು ಉಡುಪಿಯಲ್ಲಿ ನಟ ಕೆಪಿಜೆಪಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ನಾನು ಪ್ರ್ಯಾಕ್ಟಿಕಲ್ ಇಲ್ಲ ಅಂತ ಜನ ನನ್ನನ್ನು ನೋಡಿ ನಗುತ್ತಿದ್ದಾರೆ. ಆದರೆ ರಾಜಕೀಯ ದೃಷ್ಟಿಯಲ್ಲಿ ನೋಡಿದರೆ ನಿಜವಾಗಿಯೂ ನಾನು ಪ್ರ್ಯಾಕ್ಟಿಕಲ್ ಆಗಿ ಇಲ್ಲ. ಎಂಎಲ್ಎ ಸೀಟು ಗೆಲ್ಲಲು 50 ಕೋಟಿ ರೂಪಾಯಿ ಬೇಕು. ನನ್ನ ಬಳಿ ಕಾಸಿಲ್ಲ. ಆದರೆ ಕನಸಿದೆ. ಅದನ್ನು ಈಡೇರಿಸಲು ಜನ ಬೆಂಬಲ ಬೇಕಾಗಿದೆ ಎಂದರು.

ರಾಷ್ಟ್ರೀಯ ಪಕ್ಷಗಳಿಂದ ಬೇಡಿಕೆ ಬಂದಿದೆ. 15 ವರ್ಷದಿಂದ ಆಹ್ವಾನಗಳಿದ್ದರೂ ನಾನು ನನ್ನ ಕನಸನ್ನು ಹೊತ್ತು ಈಗ ಹೊರಟಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ. ಗಂಟೆ ಬಾರಿಸಲು ಜನ ಬೇಕು. 50 ಸಾವಿರ ಜನರ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ ಎಂದು ಉಪೇಂದ್ರ ಹೇಳಿದರು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಜನ ತಮ್ಮ ಆಲೋಚನೆಗಳನ್ನು ಹೇಳಬೇಕಿದೆ ಎಂದು ಮನವಿ ಮಾಡಿದರು.

ಸತ್ಯಕ್ಕೆ ಸಾವಿಲ್ಲ ಸತ್ಯ ಸಾಯೋದೇ ಇಲ್ಲ. ನನಗೆ ಶೀಘ್ರವಾಗಿ ಕೆಲಸ ಆಗಬೇಕಿಲ್ಲ, ನಾನು ಸ್ಮಾರ್ಟಾಗಿ ಕೆಲಸ ಮಾಡುತ್ತೇನೆ. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್ಗೆ ಇತ್ತು. ಅರವಿಂದ ಕೇಜ್ರೀವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಹೇಳಿದರು. ನಮ್ಮ ದೇಶದಲ್ಲಿ ಆರೋಗ್ಯ, ಶಿಕ್ಷಣ ಸರಿಯಾಗಿ ಸಿಕ್ಕಿದ್ದರೆ ಇವತ್ತು ಭ್ರಷ್ಟಾಚಾರ ಎಂಬುವುದು ಇರುತ್ತಿರಲಿಲ್ಲ ಎಂದರು.

LEAVE A REPLY

Please enter your comment!
Please enter your name here