ಹೊಸ ವರ್ಷದ ಆಚರಣೆಯಾಗಲಿ ಅಥವಾ ಇನ್ಯಾವುದೇ ಸಂಭ್ರಮ ವಾಗಲಿ ಇಲ್ಲಿದೆ ನೋಡಿ ಸೂಪರ್ ಜಾಗಗಳು..

0
414

ಹೊಸ ವರ್ಷದ ಸಂಭ್ರಮವನ್ನು ಬೇರೆ ಜಾಗಗಳಲ್ಲಿ ಹೋಗಿ ಆಚರಿಸಬೇಕೆಂಬುದು ಎಲ್ಲರ ಆಸೆಯಾಗಿರುತ್ತದೆ…. ಅಂತವರಿಗಾಗಿಯೇ ಇಲ್ಲಿ ಒಂದಿಷ್ಟು ಮಾಹಿತಿ ಬೆಸ್ಟ್ ಸ್ಥಳಗಳ ಬಗ್ಗೆ.. ಶೇರ್ ಮಾಡಿಟ್ಟುಕೊಳ್ಳಿ ಉಪಯೋಗವಾಗಬಹುದು..

ಗೋವಾ

ಗೋವಾ ಭಾರತದ ರಾಜ್ಯಗಳಲ್ಲೊಂದು.. ವಿಸ್ತೀರ್ಣದಲ್ಲಿ ಇದು ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ. ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಕೆಲವು ಬೀಚುಗಳು ಗೋವದಲ್ಲಿವೆ. ಕಲಾಂಗೂಟೆ, ಕೋಲ್ವ, ದೋನಾ ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚುಗಳಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

ಗೋಕರ್ಣ

ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ. ಮಹಾಗಣಪತಿ ದೇವಾಲಯ, ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ.ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ.ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ.

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು – ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ.ಇದು ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ

ಮನಾಲಿ

ಮನಾಲಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಇದು ಒಂದು ಸುಂದರ ಗಿರಿಧಾಮ.೧೯೯೦ ಮೀ ಎತ್ತರದಲ್ಲಿರುವ ‘ಮನಾಲಿ’ಯು, ಕುಲುಜಿಲ್ಲೆಯ ಗಡಿಯಲ್ಲಿರುವ ಇನ್ನೊಂದು ಅತ್ಯಂತ ಸುಂದರವಾದ ಪ್ರದೇಶವಿದೆ. ಕುಲುವಿನಿಂದ ಕೇವಲ ೪೫೦ ಕಿ.ಮೀ. ದೂರದಲ್ಲಿದೆ. ಸದಾ ಮಂಜಿನಿಂದ ಅವೃತವಾಗಿರುವ ಪರ್ವತಗಳಿಂದಾಗಿ ಇಲ್ಲಿಯ ಕಣಿವೆಗಳಿಗೆ ‘ಬೆಳ್ಳಿಯ ಕಣಿವೆ’ಗಳು ಎಂಬ ಹೆಸರು ಬಂದಿದೆ. ಬೇಸಗೆಯಲ್ಲೂ ಹಿತವಾದ ಹಾಗೂ ಆಹ್ಲಾದಕರವೆನಿಸುವ ಈ ಪ್ರದೇಶದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೩೦೦೦೦. ಇದು ಭಾರತದ ಒಂದು ಸಾಂಸ್ಕೃತಿಕ(ಸಪ್ತ ಋಷಿಗಳು ನೆಲೆಸಿದ) ನೆಲೆವೀಡು ಎನಿಸಿದೆ. ‘ಮನು ಸ್ಮೃತಿ’ಯನ್ನು ರಚಿಸಿದ ‘ಮನು ನಿಲಯ’ವೇ ಕಾಲಕ್ರಮೇಣ ‘ಮನಾಲಿ’ ಆಯಿತೆಂಬ ಪ್ರತೀತಿಯಿದೆ. ಅದಕ್ಕೆ ಪೂರಕವಾಗಿ ಇಲ್ಲಿ ಮನುವಿನ ಹೆಸರಿಗೆ ಅರ್ಪಿಸಲ್ಪಟ್ಟ ಪುರಾತನ ದೇವಾಲಯವೊಂದಿದೆ. ಮನಾಲಿ ಕಣಿವೆಯನ್ನು ‘ದೇವರ ಕಣಿವೆ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಊಟಿ

ಪಶ್ಚಿಮ ಘಟ್ಟದ ನೀಲಿ ಬೆಟ್ಟಗಳಲ್ಲಿರುವ ಊಟಿಯು ಪ್ರತಿ ವರ್ಷ ಬಹಳ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಊಟಿಗೆ ಬರುವ ಪ್ರವಾಸಿಗರನ್ನು ದಾರಿಯಲ್ಲಿ ಮೇಲೇರುತ್ತಾ ಹೋಗುವ ಪರ್ವತಗಳು, ವ್ಯಾಪಕ ಸರೋವರಗಳು, ದಟ್ಟ ಅರಣ್ಯಗಳು, ವಿಶಾಲವಾಗಿ ಚಾಚಿಕೊಂಡಿರುವ ಹುಲ್ಲುಗಾವಲುಗಳು, ಮೈಲುಗಟ್ಟಲೆ ಇರುವ ಚಹಾ ತೋಟಗಳು ಮತ್ತು ಯೂಕಲಿಪ್ಟಸ್ ಮರಗಳು ಸ್ವಾಗತಿಸುತ್ತವೆ. ಈ ಗಿರಿಧಾಮವು ಚಿತ್ರಸದೃಶ ಪ್ರವಾಸಿ ತಾಣವಾಗಿದೆ. ವಸಾಹತಿನ ದಿನಗಳಲ್ಲಿ ಬ್ರಿಟಿಷರು ಇದನ್ನು ಬೇಸಿಗೆ ಮತ್ತು ವಾರಾಂತ್ಯವನ್ನು ಕಳೆಯುವ ಜನಪ್ರಿಯ ಸ್ಥಳವಾಗಿ ಬಳಸುತ್ತಿದ್ದರು. ನಂತರ ಇದನ್ನು ಬೇಸಿಗೆಯ ಕಾರ್ಯನಿರ್ವಾಹಕ ನಗರವಾಗಿ ಮಾಡಲಾಯಿತು. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 2,286 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಈ ಗಿರಿಧಾಮವು ಅತಿ ಹೆಚ್ಚಿನ ವ್ಯಾಪಾರೀಕರಣ ಹಾಗೂ ವಿವಿಧ ಇತರ ಪರಿಸರ ವಿಜ್ಞಾನದ ಮತ್ತು ಮೂಲಭೂತ ವ್ಯವಸ್ಥೆಗಳ ಸಮಸ್ಯೆಗಳನ್ನು ಎದುರಿಸಿತು. ಊಟಿಯು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಪ್ರವಾಸಗಳನ್ನು ಕೈಗೊಳ್ಳುವ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

LEAVE A REPLY

Please enter your comment!
Please enter your name here