ಇದನ್ನು ಓದಿ ದ್ರಾವಿಡ್ ಕ್ರಿಕೆಟ್-ನಲ್ಲಿ ಅದ್ಭುತ ಸಾಧನೆ ಮಾಡಿದ್ದರೂ ಒಂದು ಚೂರು ಅಹಂಕಾರ ಪಡೋದಿಲ್ಲ ಅಂತ ನಿಮಗೇ ಅರಿವಾಗುತ್ತೆ..

0
358

ಯಾವುದೇ ಹಮ್ಮು ಬಿಮ್ಮಿಲ್ಲದ ದ್ರಾವಿಡ್; ಸರಳ ವ್ಯಕ್ತಿತ್ವದವನೀತ ನಮ್ಮ ಕನ್ನಡಿಗ

ಸೆಲಬ್ರಿಟೀಸ್ ಅಂದ್ರೆ ಅದೇನೋ ಸ್ಪೆಷಲ್ ಅಟ್ರ್ಯಾಕ್ಷನ್.  ಅಭಿಮಾನಿಗಳ ಕೇಂದ್ರ ಬಿಂದು. ಸ್ಲಬ್ರಿಟಿಗಳು ಎಲ್ಲೇ ಹೋದ್ರೂ ಅವರಿಗೆ ಅಂತಾನೆ ವಿಶೇಷ ಆತಿಥ್ಯವಿರುತ್ತೆ. ಸೆಲೆಬ್ರಿಟಿಗಳು, ಸರತಿ ಸಾಲಿನಲ್ಲಿ ನಿಲ್ಲೋದು, ಕಾಯೋದು ಅಂದ್ರೆ ಆಶತಚರ್ಯವೇ ಸರಿ. ಆದ್ರೆ ನಮ್ಮ ‘ಕ್ರಿಕೆಟ್ ಗೋಡೆ’(ದಿ ವಾಲ್) ಖ್ಯಾತಿಯ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗಲ್ಲ. ಅವರು ಸರಳತೆಯ ಮೂರ್ತ ರೂಪ. ಭಾರತದ ಕ್ರಿಕೆಟ್ ಟೀಂಗೆ ದ್ರಾವೀಡ್ ನೀಡಿದ ಕೊಡುಗೆ ಅಪಾರ. ಆದ್ರೆ ರಾಹುಲ್ ದ್ರಾವಿಡ್ ಯಾವತ್ತೂ ತಾವು ಸೆಲಬ್ರಿಟಿ ಎಂಬಂತೆ ತಮ್ಮನ್ನು ತಾವು ಬಿಂಬಿಸಿಕೊಂಡವರಲ್ಲ. ಅದಕ್ಕೆ ಅವರ ಸಾಮಾನ್ಯರಂತೆ ನಡೆದುಕೊಳ್ಳುವ ಪರಿ.

ಹೌದು… ಕನ್ನಡಿಗ ದ್ರಾವಿಡ್, ಎಲ್ಲೇ ಹೋದ್ರು ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಲ್ತಾರೆ. ಇತ್ಚೀಚೆಗೆ ವಿಜ್ಞಾನ ಪ್ರದರ್ಶನವೊಂದಕ್ಕೆ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತು, ಒಳ ಹೋಗಿದ್ದಾರೆ. ಇದರ ಬಗ್ಗೆ ದ್ರಾವಿಡ್ ತಮ್ಮ ನಡೆಯಿಂದ ಮಕ್ಕಳಿಗೆ ಮಾದರಿಯಾಗಿದ್ದಾರೆ. ಇವರ ಈ ನಡೆಯನ್ನು ಸಮಾಜದಲ್ಲಿ ಪ್ರತಿಯೊಬ್ಬರೂ ಅನುಸರಿಸಬೇಕಾದ ನಡವಳಿಕೆ ಬಗ್ಗೆ ಪಾಠ ಎಂದು ಸೌಥ್ ಕೆನರಾ ಟ್ವೀಟರ್ ಪೇಜ್‌ನ ಈ ಪೋಸ್ಟಿಗೆ ಜನರು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಮೂರು ಸಾವಿರಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ಇಷ್ಟೇ ಅಲ್ಲ.. ಅಕ್ಷಯ್ ಎಂಬ ಯುವಕನೊಬ್ಬ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಈತನ ಕೊನೆ ಆಸೆ ದ್ರಾವಿಡ್ ನನ್ನು ನೋಡುವುದು. ಅಕ್ಷಯ್ ಪ್ರಾಣ ಉಳಿಸೋದಕ್ಕಾಗಿ ಆತನ ಸ್ನೇಹಿತರು ಪರದಾಡ್ತಿದ್ರು. ಕೊನೆಗೆ ಈ-ಮೇಲ್ ಮೂಲಕ ದ್ರಾವಿಡ್ ನನ್ನು ಸಂಪರ್ಕಿಸಿದಾಗ ನಮ್ ದ್ರಾವಿಡ್ ಸುಮಾರು ಒಂದು ಗಂಟೆಗಳ ಕಾಲ ಅಕ್ಷಯ್ ಜೊತೆ SKYPE ಮೂಲಕ ಮಾತನಾಡಿದರು.

ರಾಹುಲ್ ಬಿಡುವಿನ ಸಮಯದಲ್ಲಿ ಮನೆಯಲ್ಲಿದ್ದರೆ ಅವರೇ ಸ್ವತಃ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಾರೆ. ಮಕ್ಕಳ ಪ್ಯಾರೆಂಟ್-ಟೀಚರ್ ಮೀಟಿಂಗ್ ಗೆ ಮಿಸ್ ಮಾಡದೇ ಹೋಗುತ್ತಾರೆ ದ್ರಾವಿಡ್. ರಾಹುಲ್ ದ್ರಾವಿಡ್ ಸ್ಲಬ್ರಿಟ್ ಆಗಿದ್ರೂ ಕೊಡ ಸಾರ್ವಜನಿಕ ಸಾರಿಗೆಯನ್ನು ಬಳಸಿ ಸಾಮಾನ್ಯರಂತೆ ಓಡಾಡುತ್ತಾರೆ.

ರಾಹುಲ್ ನ ಸರಳತೆಗೆ ಇವೆಲ್ಲ ಕೆಲವೇ ಕೆಲವು ಉದಾಹರಣೆಗಳು. ಸರಳತೆ ನಮ್ಮೊಳಗೆ ಹಾಸು ಹೊಕ್ಕದಾಗ ಮಾತ್ರ ಆತ ಮನುಷ್ಯನಾಗಲು ಸಾಧ್ಯ ಅನ್ನೋದನ್ನ ನಮ್ ರಾಹುಲ್ ದ್ರಾವಿಡ್ ಪದೇ ಪದೇ ತೋರಿಸಿ ಕೊಡುತ್ತಿದ್ದಾರೆ. ನಿಜಕ್ಕೂ ರಾಹುಲ್ ದ್ರಾವಿಡ್ ಪ್ರತಿಯೊಬ್ಬ ನಾಗರಿಕನಿಗೂ ಮಾದರಿ.

LEAVE A REPLY

Please enter your comment!
Please enter your name here