ಸರ್ಕಾರ ಹಾಗು ವೈದ್ಯರ ಸಮರದಲ್ಲಿ ಅಮಾಯಕ ಜನರ ಸಾವು ಕೇಳುವವರ್ಯಾರು…!

0
497

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿವಾದಗಳು , ಹಗರಣಗಳು , ಮುಷ್ಕರಗಳು ನಡೆಯುತ್ತಲೇ ಬಂದಿವೆ , ಅದ್ಕಕೀಗ ವೈದ್ಯರ ಮುಷ್ಕರ ಹೊಸ ಸೇರ್ಪಡೆ.

ಜನ ವೈದ್ಯರನ್ನು ದೇವರೆನ್ನುತ್ತಾರೆ ಆದರೆ ಕರ್ನಾಟಕದಲ್ಲಿ ಮಾತ್ರ ವೈದ್ಯರ ನಡೆ ಜನ ಕಂಗಲಾಗುವಂತೆ ಮಾಡಿದೆ. ಹೌದು ರಾಜ್ಯದಲ್ಲಿ ವೈದ್ಯರ ಮುಷ್ಕರದಿಂದ ದಿನದಿಂದ ದಿನಕ್ಕೆ ಆಸ್ಪತ್ರೆಯಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿವೆ , ಇದುವರೆಗೆ ೭ ಜನ ಸಾವನ್ನಪ್ಪಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವರೆಗೂ ಮುಷ್ಕರ ಕೈ ಬಿಡಲ್ಲ ಅಂತ ವೈದ್ಯರು ಪಟ್ಟು ಹಿಡಿದಿದ್ದಾರೆ , ಹಾಗೇ ಸರ್ಕಾರನೂ ಒಂದು ನಿರ್ಧಾರಕ್ಕೆ ಬರುತ್ತಿಲ್ಲ , ಸರ್ಕಾರ ಹಾಗೂ ವೈದ್ಯರ ಈ ಮೂರ್ಖತನದಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿವೆ , ಮಂಗಳವಾರ ಮಕ್ಕಳು ಸೇರಿ ೭ ಜನ ಸಾವನ್ನಪ್ಪಿದ್ದಾರೆ. ಗದಗದಲ್ಲಿ ಚಿಕಿತ್ಸೆ ಸಿಗದೇ ಹೆರಿಗೆಯಾದ ಬಾಣಂತಿಯೊಬ್ಬರು ಮಗು ಎತ್ತಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ದೃಶ್ಯ , ಹೀಗೆ ಹೇಳುತ್ತಾ ಹೋದರೆ ಊರಿಗೆ ಒಂದು ಸಮಸ್ಯೆ , ಒಂದೊಂದು ಉದಾಹರಣೆ ಸಿಗುತ್ತವೆ.

ವೈದ್ಯರ ಮುಷ್ಕರದಿಂದ , ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ೩ ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ೧೨ ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ. ಬೆಳಗಾವಿಯ ಅಥಣಿಯಲ್ಲಿ ೧೨ ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ ೨೬ ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆಸಿಗದೆ ಸಾವನ್ನಪ್ಪಿದ್ದಾರೆ. ಸರ್ಕಾರ ದೃಢಪಡಿಸಿದ ಯೋಜನೆಗಳಲ್ಲಿ ಬಡವರಿಗೆ ಚಿಕಿತ್ಸೆ ಕೊಡ್ತಾ ಇದ್ದೀವಿ , ಹಾಗಂತ ಸರ್ಕಾರ ನಮಗೇನಾದರೂ ಉಚಿತವಾಗಿ ನೀರು , ವಿದ್ಯುತ್ ಕೊಡುತ್ತಿದೆಯ , ನಾವು ತೆರಿಗೆ , ವಾಣಿಜ್ಯ ಶುಲ್ಕ ಕಟ್ಟುತ್ತಿದ್ದೇವೆ ಎಂಬುದು ಖಾಸಗಿ ವೈದ್ಯರ ಮಾತು. ಈಗ ಹೊಸ ಕಾಯ್ದೆ ತಂದು ನಮ್ಮ ಮೇಲೆ ಹೊರೆ ಹಾಕುತ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ದೂರಿದರು.

ಕರ್ನಾಟಕ ಸರ್ಕಾರ ಹೊಸತಾಗಿ ಜಾರಿ ತಂದ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಸಮರದಲ್ಲಿ ಅಮಾಯಕ ಜನ ಮೃತಪಡುತ್ತಿದ್ದಾರೆ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಜಿದ್ದಿಗೆ ಬಿದ್ದಿದೆ , ಇದನ್ನು ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಹೋರಾಟ ನಡೆಸುತ್ತಿರುವ ಕಾರಣ ಆಸ್ಪತ್ರೆಯಲ್ಲಿ ಇವರನ್ನೇ ನಂಬಿ ಬಂದ ಜನ ನರಳಾಡುವಂತಾಗಿದೆ.

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ವೈದ್ಯರ ಸಮಸ್ಯೆ ಬಗೆಹರಿಸುತ್ತಾರೆಯೇ ಕಾದು ನೋಡಬೇಕು…!

LEAVE A REPLY

Please enter your comment!
Please enter your name here