ಕತ್ತಿನ ಸುತ್ತ ಚರ್ಮವು ಕಪ್ಪಾಗಿ ನಿಮ್ಮ ಸೌಂದರ್ಯವನ್ನು ಕುಂಠಿತಗೊಳಿಸುತ್ತಿದಿಯೇ? ವ್ಯಾಯಾಮದ ಜೊತೆಗೆ ಈ ಮನೆಮದ್ದುಗಳನ್ನ ಪಾಲಿಸಿ ಕಲೆಯಿಂದ  ಮುಕ್ತಿ ಹೊಂದಿ..

0
588
 ಸಾಮಾನ್ಯವಾಗಿ ಕತ್ತಿನ  ಹಿಂದೆ ಕಪ್ಪು ಕಲೆಗಳು ಉಂಟಾಗಲು  ಪ್ರಮುಖ ಕಾರಣ ಇನ್ಸುಲಿನ್ ರೆಸಿಸ್ಟೆನ್ಸ್. ಚರ್ಮದ ಬಗ್ಗೆ ಸೂಕ್ತ ಕಾಳಜಿ ವಹಿಸದೇ ಇರುವುದು,  ಸಕ್ಕರೆ ಖಾಯಿಲೆ, ತೂಕದಲ್ಲಿನ ಏರಿಳಿತ ಹಾಗು ಅನಿಯಮಿತ ಆಹಾರ ಪದ್ಧತಿ , ವ್ಯಾಯಾಮ ಮಾಡದೆ ಇರುವುದು ಹೀಗೆ ಹಲವಾರು ಕಾರಣಗಳಿಂದ ಕತ್ತಿನ  ಹಿಂದೆ ಕಪ್ಪಾದ ಕಲೆಗಳು ಆವರಿಸಿಕೊಳ್ಳುತ್ತವೆ. ಇಂತಹ ಕಲೆಗಳು ನೋಡುಗರನ್ನು ಅಸಹ್ಯಗೊಳಿಸುವುದಲ್ಲದೆ ಹಲವಾರು ಸಮಸ್ಯೆಗಳನ್ನೂ ಉಂಟು ಮಾಡುತ್ತವೆ. ಅಷ್ಟೇ ಅಲ್ಲದೆ ನಿಮ್ಮ ತ್ವಚೆಯ ಸೌಂದರ್ಯ  ಮತ್ತು ನಿಮ್ಮ ವಿಶ್ವಾಸವನ್ನು ಕುಂಠಿತಗೊಳಿಸಬಹುದು  ಕೂಡ.
ಇಂತಹ ಕಲೆಗಳಿಗೆ ಮಾರುಕಟ್ಟೆಗಳಲ್ಲಿ, ಮೆಡಿಕಲ್‌ಗಳಲ್ಲಿ ಇಂತಹ ಸಮಸ್ಯೆಗಳಿಗೆ ಹಲವಾರು ಔಷಧಗಳು ಲಭ್ಯ ಇವೆಯಾದರೂ ಅವುಗಳು ದುಬಾರಿ ಹಾಗೂ ರಾಸಾಯನಿಕಯುಕ್ತವಾಗಿರುತ್ತವೆ. ಇದನ್ನು ಅವಾಯ್ಡ್ ಮಾಡಲು, ಮನೆಗಳಲ್ಲೇ ಸಿಗುವ ಹಲವಾರು ಔಷಧಯುಕ್ತ ವಸ್ತುಗಳನ್ನು ಬಳಸಿ  ಇಂತಹ ಕಲೆಗಳಿಗೆ ಮುಕ್ತಿಪಡೆಯಬಹುದು..

1. ನಿಂಬೆ, ಆಲಿವ್ ಆಯಿಲ್ ಮತ್ತು ಹಾಲಿನ ಪುಡಿ ಮಿಶ್ರಣ (DIY Lemon Bleach)

  • ನಿಂಬೆ ರಸ 1/4 ಭಾಗ
  • ಹಾಲಿನ ಪುಡಿಯ 1 ಚಮಚ
  • ಆಲಿವ್ ಆಯಿಲ್ 1 ಚಮಚ
ಆಲಿವ್ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಿ ಇದಕ್ಕೆ 2 ಚಮಚ ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಈ   ಮಿಶ್ರಣವನ್ನು 10 ನಿಮಿಷಗಳ ಕಾಲ ಫ್ರಿಜ್ ನಲ್ಲಿಟ್ಟು  ತಣ್ಣಗಾಗಲು ಬಿಡಿ. ತಣ್ಣನೆಯ ನೀರಿನಲ್ಲಿ ನೆನೆಸಿದ ಹತ್ತಿ ಇಂದ ಮಿಶ್ರಣವನ್ನು ಕಪ್ಪಾದ ಭಾಗದಲ್ಲಿ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಮಸಾಜ್ ಮಾಡಿದ ನಂತರ ಸುಮಾರು 15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಣ್ಣನೆಯ ನೀರಿನಲ್ಲಿ ಕಾಟನ್ ಬಟ್ಟೆಯನ್ನು ಎದ್ದಿ ಅದರಿಂದ ಕುತ್ತಿಗೆಯನ್ನು ಒರೆಸಿಕೊಳ್ಳಿ. ಈ ರೀತಿ ಮಾಡುವುದರಿಂದ ಕುತ್ತಿಗೆಯ ಒರಟುತನವನ್ನು ಮೃದುವಾಗಿ ಕುತ್ತಿಗೆ ಕಪ್ಪು ಕಲೆ ಮಾಯವಾಗುತ್ತದೆ.

2. ನಿಂಬೆ ರಸ

ಇದರಲ್ಲಿ ಸಿಟ್ರಿಕ್ ಆ್ಯಸಿಡ್ ಅಧಿಕವಾಗಿರುವುದರಿಂದ ಇದು ಚರ್ಮದಲ್ಲಿನ ಜಿಡ್ಡಿನ ಅಂಶವನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಮೊಡವೆಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಹಾಗಾಗಿ ನಿಂಬೆ ರಸವನ್ನು ಕುತ್ತಿಗೆಯ ಕಪ್ಪು ಕಲೆಗಳ ಮೇಲೆ ವಾರಕ್ಕೆ ನಾಲ್ಕು ಬಾರಿ ಹಚ್ಚುತ್ತಾ ಬಂದರೆ ಕತ್ತಿನ ಕಪ್ಪು ಕಲೆಗಳು ನಿವಾರಿಸಿ ಶ್ವೇತವರ್ಣದ ತ್ವಚೆಯನ್ನು ಹೊಂದಬಹುದು.

3. ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿಯು ಡೆಡ್ ಸ್ಕಿನ್‌ಗಳನ್ನು ತೆಗೆಯುವಲ್ಲಿ ಸಹಕಾರಿ. ಜಿಡ್ಡಿನ ಅಂಶಗಳನ್ನು ತೆಗೆದು ಕಲೆಗಳನ್ನು ನಿವಾರಿಸಿ ಚರ್ಮವನ್ನು ಕೋಮಲವಾಗಿಸುತ್ತದೆ. ಇದನ್ನು ರೋಸ್ ವಾಟರ್, ಗ್ರೀನ್ ಟೀ, ಸೌತೆಕಾಯಿ ರಸ, ಲಿಂಬೆ ರಸ, ಟೊಮೇಟೊ ರಸ ಅಥವಾ ನೀರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಬಹುದು. 20 ನಿಮಿಷ ನಂತರ ನೀರಿನಿಂದ ತೊಳೆಯಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.

4. ಅಲೋ ವೆರಾ ಜೆಲ್

ಅಲೋ ವೆರಾ ಜೆಲ್ ತೆಗೆದು ಕುತ್ತಿಗೆಗೆ ನೇರವಾಗಿ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ, ಹೀಗೆ ವಾರಕ್ಕೆ 4 ಬಾರಿ ಹಚ್ಚುವುದರಿಂದ ವೇಗದ ಫಲಿತಾಂಶವನ್ನು ಪಡೆಯಬಹುದು. ಅಲೋ ವೆರಾ ಜೆಲ್ ನಲ್ಲಿ ಪಾಲಿಸೆಕರೈಡ್‌ಗಳು ಹೇರಳವಾಗಿವೆ. ಇವುಗಳು ಚರ್ಮದಲ್ಲಿನ ಕಲೆ ಹಾಗೂ ಮೊಡವೆಗಳನ್ನು ನಿವಾರಿಸುವಲ್ಲಿ ಸಹಕಾರಿ.

5. ಟೊಮೇಟೊ ರಸ

ವಿಟಮಿನ್ ಸಿ ಹೆಚ್ಚಾಗಿರುವ ಟೊಮೇಟೊ ರಸವು ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಉಪಯುಕ್ತವಾದದ್ದು. ಕಲೆ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಮೊಡವೆ, ಸನ್‌ಬರ್ನ್‌ಗಳನ್ನು ಹೋಗಲಾಡಿಸಲು ಕೂಡ ಉಪಯುಕ್ತ. ಟೊಮೇಟೊ ರಸವನ್ನು ಕುತ್ತಿಗೆಯ ಕಪ್ಪು ಕಲೆಗಳ ಮೇಲೆ ಹಚ್ಚಿ 10-15 ನಿಮಿಷ ನಂತರ ತಣ್ಣನೆ ನೀರಿನಲ್ಲಿ ತೊಳೆಯಬೇಕು. ಕೆಲವು ವಾರಗಳ ಕಾಲ ಈ ರೀತಿ ಮಾಡುವುದರಿಂದ ಕಲೆಗಳನ್ನು ನಿವಾರಿಸಬಹುದು.

LEAVE A REPLY

Please enter your comment!
Please enter your name here