ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಪರಭಾಷಿಗರ ಅಟ್ಟಹಾಸ..!!!

0
253
ಶಿಲ್ಪಾ ಉತ್ತರ ಕರ್ನಾಟಕದ ಚಿತ್ರದುರ್ಗದವರು ನಿನ್ನೆ ಮನೆಗೆ ಹೋಗುವ ವೇಳೆಗೆ ಉತ್ತರ ಭಾರತದ ಕೆಲ ಯುವಕರು ಶಿಲ್ಪಾಳ ಬಳಿ ಹಿಂದಿಯಲ್ಲಿ ಅಡ್ರೆಸ್​​ ಕೇಳಿದ್ದಾರೆ. ಆದರೇ ಕನ್ನಡ ಬಿಟ್ಟು ಬೇರೆ ಭಾಷೆ ಬಾರದ ಶಿಲ್ಪಾ ಕನ್ನಡದಲ್ಲಿ ಉತ್ತರಿಸಿದ್ದಾಳೆ.  ಆದರೇ ಉತ್ತರ ಭಾರತ ಮೂಲದ ಯುವಕರು ಮತ್ತೆ -ಮತ್ತೆ ಅಡ್ರೆಸ್ ಹಿಂದಿಯಲ್ಲಿಯೇ ​ಕೇಳಿದ್ದಾರೆ. ಆಗಲೂ ಶಿಲ್ಪಾ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಇಷ್ಟಕ್ಕೆ ಸಿಟ್ಟಿಗೆದ್ದ ಯುವಕರು ಶಿಲ್ಪಾ ಮೇಲೆ ಎರಗಿ ಕತ್ತು ಸೀಳಿ ಪರಾರಿಯಾಗಿದ್ದಾರೆ.
 
ಈ ಘಟನೆ ನಡೆದ ತಕ್ಷಣ ಸ್ಥಳೀಯರು ಶಿಲ್ಪಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇತ್ತೀಚಿಗೆ ನಗರದಲ್ಲಿ ಉತ್ತರ ಭಾರತ ಭಾಗದ ಪುಂಡರ ಹಾವಳಿ ಮಿತಿಮೀರಿದ್ದು ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಶಿಲ್ಪಾಳಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡುತ್ತಾರಾ ಕಾದುನೋಡಬೇಕು.
ಮಾಹಿತಿ ಕೃಪೆ: BTV News

LEAVE A REPLY

Please enter your comment!
Please enter your name here