ಅಡುಗೆ ಮನೆಯಲ್ಲೇ ಆರೋಗ್ಯ.. ಸಾಮಾನ್ಯವಾಗಿ ಕಾಡುವ ಜ್ವರ ಕೆಮ್ಮು ನೆಗಡಿ ಗಂತಲು ನೋವು ಗ್ಯಾಸ್ಟ್ರಿಕ್ ಖಾಯಿಲೆಗಳಿಗೆ ಮನೆಯಲ್ಲೇ ಮದ್ದು..

0
1068

ಅಡುಗೆ ಮನೆಯಲ್ಲೇ ಆರೋಗ್ಯ.. ಸಾಮಾನ್ಯವಾಗಿ ಕಾಡುವ ಜ್ವರ ಕೆಮ್ಮು ನೆಗಡಿ ಗಂತಲು ನೋವು ಗ್ಯಾಸ್ಟ್ರಿಕ್ ಖಾಯಿಲೆಗಳಿಗೆ ಮನೆಯಲ್ಲೇ ಮದ್ದು..

ಮನುಷ್ಯ ಎಂದ ಮೇಲೆ ಖಾಯಿಲೆ ಬಂದೇ ಬರುತ್ತದೆ…ಆದರೇ ಬಂದ ರೋಗಕ್ಕೆಲ್ಲಾ ಆಸ್ಪತ್ರೆಯ ಮೆಟ್ಟಿಲು ತುಳಿಯಲು ಆಗುತ್ತದೆಯೇ??? ನಮ್ಮ ಹಿರಿಯರು ಸೂಚಿಸಿರುವ ಕೆಲವು ಮನೆ ಮದ್ದುಗಳು ಇಂತಹ ಸಂಧರ್ಭದಲ್ಲಿ ಉಪಯೋಗಕ್ಕೆ ಬರುತ್ತವೆ.. ಅದರಲ್ಲಿ ಕೆಲವು ನಿಮಗಾಗಿ ಕೊಟ್ಟಿದ್ದೇವೆ ನೋಡಿ‌. ಶೇರ್ ಮಾಡಿ ಇಟ್ಟುಕೊಳ್ಳಿ.. ಉಪಯೋಗಕ್ಕೆ ಬರಬಹುದು..

1.ಜ್ವರ
ಸಾಮಾನ್ಯವಾಗಿ ಹವಾಗುಣ ಬದಲಾದಾಗ ಬಹುತೇಕರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ.. ಈ ರೀತಿಯ ಜ್ವರಕ್ಕೆ ಕೊತ್ತಂಬರಿ ಬೀಜದ ಟೀ ಮಾಡಿ ಕುಡಿಯಿರಿ.. ಕೊತ್ತಂಬರಿ ಬೀಜಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುತ್ತದೆ..

2.ಕೆಮ್ಮು
ಇದು ಯಾವಾಗ ಬರುತ್ತದೋ ಹೇಳಲೂ ಆಗದು.. ಕೆಮ್ಮಿಗೆ ತುಳಸಿ ರಸವನ್ನು ದಿನಕ್ಕೆ ಮೂರು ಬಾರಿ ಕುಡಿಯುತ್ತಾ ಬನ್ನಿ 2 ದಿನದಲ್ಲಿ ಕೆಮ್ಮು ಕಡಿಮೆಯಾಗುವುದು..

3.ಗಂಟಲು ನೋವು.
ಗಂಟಲು ನೋವಿಗೆ ಜೇನು ತುಪ್ಪ ರಾಮಬಾಣ.. ದಿನಕ್ಕೆರೆಡು ಬಾರಿ ಒಂದೊಂದು ಸ್ಪೂನ್ ಜೇನು ತುಪ್ಪ ಸೇವಿಸೆ.. ಅದು ಕೆಲವು ಸೆಕೆಂಡ್ ಗಂಟಲಿನಲ್ಲಿರುವ ಹಾಗೆ ಬಿಡಿ.. 2 ದಿನದಲ್ಲಿ ಗಂಟಲು ನೋವು ಮಾಯವಾಗುವುದು..

4.ಶೀತ, ನೆಗಡಿ
ನೆಗಡಿ ಮತ್ತು ಶೀತವಾದರೆ ಶುಂಠಿ ಯನ್ನು ಜೆಜ್ಜಿ ನಂತರ ಅರಿಶಿನ ದೊಂದಿಗೆ ಹಾಲಿನಲ್ಲಿ ಕುದಿಸಿ ಕುಡಿಯಿರಿ..

5.ಗ್ಯಾಸ್ಟ್ರಿಕ್‌ ತೊಂದರೆ
ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ತೊಂದರೇ ಬಹುತೇಕರಲ್ಲಿ ಕಾಣಿಸಿಕೊಳ್ಳುತ್ತದೆ.. ಇದಕ್ಕೆ ಮನೆ ಮದ್ದು ಕೇವಲ್ ನೀರಷ್ಟೆ.. ಗ್ಯಾಸ್ಟ್ರಿಕ್ ಆದಾಗ ಅದೆಷ್ಟು ಸಾದ್ಯವೋ ಅಷ್ಟು ನೀರನ್ನು ಕುಡಿಯಿರಿ.. ಜೊತೆಗೆ ಜೀರಿಗೆಯನ್ನು ನೆನೆಸಿ ಕುಡಿದರೆ ಒಳ್ಳೆಯದು..

ಶುಭವಾಗಲಿ ಶೇರ್ ಮಾಡಿ..

LEAVE A REPLY

Please enter your comment!
Please enter your name here