ಕಾಲ ಸರ್ಪ ದೋಷವೆಂದರೇನು ಮತ್ತು ಅದರ ನಿವಾರಣೆಯ ಬಗ್ಗೆ ತಿಳಿಯಲು ಇದನ್ನು ತಪ್ಪದೆ ಓದಿ…

0
564

ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಕೇತುಗಳ ನಡುವೆ ಸೂರ್ಯ, ಚಂದ್ರ, ಗುರು, ಅಂಗಾರಕ,ಶುಕ್ರ, ಭುದ, ಶನಿ ಇದ್ದಲ್ಲಿ ಈ ಏಳು ಗ್ರಹಗಳ ಮೇಲೆಯೂ ರಾಹು ಕೇತುಗಳ ಅಧಿಪತ್ಯವಿರುತ್ತದೆ. ಇದನ್ನೇ ಕಾಲಸರ್ಪಯೋಗವೆನ್ನುತ್ತಾರೆ.. ಕಾಲಸರ್ಪಯೋಗದಲ್ಲಿ ವಿವಿಧ ಯೋಗಗಳಿದ್ದು, ಯಾವ ವ್ಯಕ್ತಿಯ ಜಾತಕದಲ್ಲಿ ಈ ದೋಷವಿರುವಿದೋ ಆ ವ್ಯಕ್ತಿ ಜೀವನ ಪರ್ಯಂತ ಮಾನಸಿಕ, ಆರ್ಥಿಕ, ಶಾರೀರಿಕ , ಸಾಮಾಜಿಕ,ಕೌಟುಂಬಿಕ ತೊಂದರೆಗಳಿಗೆ ಗುರಿಯಾಗುತ್ತಾನೆ.

ಕಾಲಸರ್ಪದೋಷಗಳ ನಿವಾರಣೆ ಹೇಗೆ??

  1. ರಾಮೇಶ್ವರದಲ್ಲಿ ನಾಗಪ್ರತಿಷ್ಠೆ ಮಾಡಿಸಿದ್ದಲ್ಲಿ ಸರ್ಪ ದೋಷನಿವಾರಣೆಯಾಗುವುದು.
  2. ಸರ್ಪಕ್ಷೇತ್ರ ಅಥವಾ ಹುತ್ತಕ್ಕೆ ಏಳು ಮಂಗಳವಾರ ಅಥವಾ ಹದಿನೆಂಟು ಭಾನುವಾರ ದರ್ಶನ ಮಾಡಿ ಎಪ್ಪತ್ತು ಪ್ರದಕ್ಷಿಣೆಗಳನ್ನು ಹಾಕಿ ಹುತ್ತದಲ್ಲಿ ಹಾಲೆರೆದು ಬರಬೇಕು.
  3. ರಾಹು ಕೇತು ಸರ್ಪದೋಷ ಪೂಜೆ ಮಾಡಿಸಿ ಉದ್ದು, ಹುರಳಿ, ಹಲಸಂದೆ ದಾನವಾಗಿ ಕೊಡಬೇಕು.
  4. ರಾಹು ದೇವಾಲಯದಲ್ಲಿ ರಾಹುಕಾಲದ ಸಮಯದಂದು ಅಭಿಷೇಕ ಮಾಡಿಸಬೇಕು.ಕುಜ ಕ್ಷೇತ್ರ ದರ್ಶನ ಮಾಡಿ ಅಭಿಷೇಕ ಮಾಡಿಸಬೇಕು.ಕೇತು ಕ್ಷೇತ್ರದಲ್ಲಿ ಹಸುವಿನ ತುಪ್ಪದಲ್ಲಿ ದೀಪ ಬೆಳಗಿ ಪೂಜಿಸಬೇಕು.
  5. ಗೋಮೇಧಿಕ,ವೈಡೂರ್ಯ ಒಟ್ಟಿಗೆ ಅಥವಾ ಬೇರೆ ಬೇರೆ ಬೆಳ್ಳಿಯ ಉಂಗುರಗಳನ್ನು ಮಾಡಿಸಿ ನಡುಬೆರಳಿಗೆ ಧರಿಸಬೇಕು.
  6. ಬಂಗಾರ ಅಥವಾ ಬೆಳ್ಳಿಯ ನಾಗ ಮೂರ್ತಿಗೆ ಏಕಾದಶ ರುದ್ರಾಭಿಷೇಕ ಮಾಡಿಸಿ, ಆ ಮೂರ್ತಿಯನ್ನು ಬ್ರಾಹ್ಮಣರಿಗೆ ದಾನ ಕೊಡಬೇಕು.
  7. ಪ್ರತಿದಿನ ಸರ್ಪಸೂಕ್ತದಿಂದ ಶಿವಾಲಯದಲ್ಲಿ ಹನ್ನೊಂದು ದಿನ ರುದ್ರಾಭಿಷೇಕ ಮಾಡಿಸಿದರೆ ದೋಷದ ತೀವ್ರತೆ ಇಳಿಮುಖವಾಗುತ್ತದೆ.
  8. ಯಾವುದಾದರೂ ಸುಬ್ರಮಣ್ಯ ಕ್ಷೇತ್ರದಲ್ಲಿ 150 ಪ್ರದಕ್ಷಿಣೆಗಳನ್ನು ಹಾಕಿ ಬೆಳ್ಳಿ ನಾಗ ಪ್ರತಿಮೆಯನ್ನು ದೇವಸ್ಥಾನಕ್ಕೆ ಅರ್ಪಿಸಬೇಕು.

LEAVE A REPLY

Please enter your comment!
Please enter your name here