ಅಬ್ಬಾ ದಾಳಿಂಬೆಹಣ್ಣು ತಿಂದ್ರೆ ಹಿಂಗೆಲ್ಲ ಆಗುತ್ತಾ.! ಏನು ಅಂತೀರಾ ಇಲ್ಲಿ ನೋಡಿ…

0
1204

ಬಾಯಿಗೆ ರುಚಿ, ಕಾಯಿಲೆಗೆ ರಾಮಬಾಣ-ದಾಳಿಂಬೆ

ಹಣ್ಣುಗಳು ಯಾವುದೇ ಇರಲಿ ಅದು ಆರೋಗ್ಯದ ಭಂಡಾರ. ಸಾಕಷ್ಟು ಔಷಧೀಯ ಹಾಗೂ ಸೌಂದರ್ಯವರ್ಧಕ ಗುಣಗಳನ್ನು ಹೊಂದಿರುವ ಹಣ್ಣುಗಳಲ್ಲಿ ವಿಟಮಿನ್ ಸೇರಿದಂತೆ ಯಥೇಚ್ಛವಾದ ಪೋಷಕಾಂಶಗಳಿರುತ್ತವೆ. ಜೊತೆಗೆ ಹಣ್ಣು ಸೇವಿಸುವುದು ಬಹಳ ಸುಲಭ. ಕೆಲವು ವರ್ಷಕಾಲವೂ ದೊರೆತರೆ ಕೆಲವು ಹಣ್ಣುಗಳು ವರ್ಷದ ಕೆಲವು ಋತುಮಾನದಲ್ಲಷ್ಟೇ ದೊರೆಯುತ್ತದೆ. ದಾಳಿಂಬೆ ವರ್ಷಕಾಲ ದೊರೆತರೂ ಕೆಲವು ಋತುಮಾನದಲ್ಲಿ ಯಥೇಚ್ಛವಾಗಿ ದೊರೆತು ಬೆಲೆಯೂ ಕಡಿಮೆಯಿರುತ್ತದೆ. ಕೆಂಪು ದಾಳಿಂಬೆ ಆರೋಗ್ಯಕ್ಕೆ ಉತ್ತಮ ಹಾಗೂ ದಿವ್ಯೌಷಧ.

1. ಇದು ನೆನೆಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

source: i1.wp.com

2. ವಿಟಿಮಿನ್ ಸಿ, ಫಾಸ್ಪರಸ್ ಇರುವುದರಿಂದ ಮಕ್ಕಳು ಹಾಗೂ ಮಹಿಳೆಯರಿಗೆ ಅತ್ಯುತ್ತಮ.

source: chinawhisper.com

3. ದಾಳಿಂಬೆಗೆ ರಕ್ತದೊತ್ತಡ ಕಡಿಮೆ ಮಾಡುವ ಶಕ್ತಿ ಇದೆ.

source: onlymyhealth.com

4. ದಾಳಿಂಬೆ ಎಲೆ ತಿನ್ನುವುದರಿಂದ ಕೆಮ್ಮು ಕಡಿಮೆಯಾಗುವುದು.

source: superfoods-life.com

5. ಕೊಲೆಸ್ಟ್ರಾಲ್ ಕಡಮೆಗೊಳಿಸುವ ಶಕ್ತಿ ಹೊಂದಿದೆ.

source: static.khoeplus24h.vn

6. ಸಾಕಷ್ಟು ಕಬ್ಬಿಣಾಂಶ ಇರುವುದರಿಂದ ನಿಶ್ಶಕ್ತಿ ಕಡಿಮೆಯಾಗುತ್ತದೆ.

source: speedyremedies.com

7. ರಸ ಸೇವನೆಯಿಂದ ಮುಖದ ಚರ್ಮ ಕಾಂತಿಯುತವಾಗುತ್ತದೆ.

source: topfithealth.com

8. ಹಣ್ಣನ್ನು ಹಾಗೇ ತಿನ್ನುವುದರಿಂದ ಹಲ್ಲುಗಳ ಹೊಳಪು ಹೆಚ್ಚುತ್ತದೆ.

source: foodofy.com

9. ದೇಹಕ್ಕೆ ಚೈತನ್ಯ ದೊರೆಯುವುದರಿಂದ ಆಟೋಟ, ಕೆಲಸದಲ್ಲಿ ಆಸಕ್ತಿ ಹೆಚ್ಚುವುದು.

source: sc01.alicdn.com

10. ರೋಗದಿಂದ ಬೇಗ ಗುಣಮುಕ್ತವನ್ನಾಗಿಸುವ ಶಕ್ತಿ ದಾಳಿಂಬೆಗಿದೆ. ಹೃದಯ, ಯಕೃತ್ತು ಹಾಗೂ ಮೂತ್ರಪಿಂಡಗಳ ಕ್ರಿಯೆಗೆ ಚೈನ್ಯ ತಂದುಕೊಡುತ್ತದೆ. ಜೊತೆಗೆ ಪ್ರಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದೆ.

source: nikkihawkes.com

11. ಊಟಕ್ಕೆ ಮುಂಚೆ ದಾಳಿಂಬೆ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಶರೀರ ಸಂಬಂಧ ರೋಗಗಳು ಗುಣವಾಗುತ್ತವೆ.

source: i0.wp.com

12. ನರದೌರ್ಬಲ್ಯ ನಿವಾರಣೆಯಾಗುತ್ತದೆ. ನರಗಳ ದೌರ್ಬಲ್ಯದಿಂದುಂಟಾದ ತಲೆನೋವಿಗೆ ಇದು ಅತ್ಯುತ್ತಮ. ದೃಷ್ಟಿದೋಷಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.

source: static1.squarespace.com

13. ಬೀಜವನ್ನು ಚೆನ್ನಾಗಿ ಅಗಿದು ನೀರಿನೊಂದಿಗೆ ಕುಡಿಯುವುದರಿಂದ ಆಮಶಂಕೆ, ಅತಿಸಾರ ಹತೋಟಿಗೆ ಬರುತ್ತದೆ.

source: foodsafetynews.com

14. ಎಲ್ಲಕ್ಕೂ ಮಿಗಿಲಾಗಿ ಇದು ತಿನ್ನಲು ಬಹಳ ರುಚಿ. ಬೇರೆ ಹಣ್ಣಿನೊಂದಿಗೆ ಸೇರಿಸಿ ಫ್ರೂಟ್ ಸಲಾಡ್ ಮಾಡಿಯೂ ಸೇವಿಸಬಹುದು.

source: onceuponachef.com

LEAVE A REPLY

Please enter your comment!
Please enter your name here