ಹೊಸ ಪೀಳಿಗೆಯ ಬ್ರಾಹ್ಮಣರೇ ಅಂತರ್ಜಾತಿ ವಿವಾಹಗಳಲ್ಲಿ ಮುಂದೆ ಇದ್ದಾರೆ, ಜಾತಿ ವ್ಯವಸ್ಥೆ ದಿನೇ ದಿನೇ ನಮ್ಮ ಸಮಾಜದಿಂದ ಮಾಯವಾಗುತ್ತಿದೆಯಾ?

0
429

ಭಾರತದಲ್ಲಿ ಜಾತಿ ವ್ಯವಸ್ಥೆ ಈಗಂತೂ ಹೇರಳವಾಗಿ ಬೆಳೆದಿದೆ. ಕೇವಲ ಉಪಜೀವನಕ್ಕೆ ಮೀಸಲಾಗಿದ್ದ ಜಾತಿ ವ್ಯವಸ್ಥೆ ಈಗ ಎಲ್ಲಡೆ ಹಾಸಿಕೊಕ್ಕಿದೆ. ಇದಕ್ಕೆ ಎಲ್ಲಾ ಜಾತಿಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಇನ್ನು ಈ ಜಾತಿಗಳಲ್ಲಿ ಹಲವು ಜಾತಿಗಳನ್ನು ನಮ್ಮವರು ಮಾಡಿಕೊಂಡು ರಾಜಕೀಯಕ್ಕೆ ಬಳಸಿಕೊಳ್ಳೋದು ಎಲ್ಲರಿಗೆ ಗೊತ್ತೆ ಇದೆ. ಅತಿ ಹೆಚ್ಚು ವಿದ್ಯಾವಂತರು ಹಾಗೂ ಮೇಲ್ಪಂಕ್ತಿಯ ಜನ ಎಂದೇ ಗುರುತಿಸಿಕೊಂಡಿದ್ದ ಬ್ರಾಹ್ಮಣ ಜಾತಿ. ತಮ್ಮ ಧರ್ಮ ಹಾಗೂ ಸಂಪ್ರದಾಯದಿಂದಲೇ ಹೆಸರುವಾಸಿ. ಆದ್ರೆ ಒಂದು ವರದಿಯ ಅನ್ವಯ ಬ್ರಾಹ್ಮಣ ಸಮುದಾಯವೇ ಅತಿ ಹೆಚ್ಚು ಅಂರ್ತಜಾತಿ ವಿವಾಹವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಭಾರತೀಯ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸಮೀಕ್ಷೆಯಂತೆ ಇತ್ತೀಚಿನ ದಿನಗಳಲ್ಲಿ ಅಂತರ್ಜಾತಿ ವಿವಾಹವನ್ನು ಬ್ರಾಹ್ಮಣ ಸಮುದಾಯದಲ್ಲೇ ಹೆಚ್ಚಾಗಿ ಕಾಣಲಾಗುತ್ತದೆ. ಅಲ್ಲದೆ ಶೇಕಡಾ 6 ರಷ್ಟು ಬ್ರಾಹ್ಮಣ ಯುವಕರು ಅಂತರ್ಜಾತಿ ವಿವಾಹವಾದರೆ, ಶೇಕಡಾ 4.7 ರಷ್ಟು ಪರಿಶಿಷ್ಠ ಜಾತಿಯ ಮಂದಿಯನ್ನು ವರಿಸಿ ಜೀವನ ನಡೆಸುತ್ತಿದ್ದಾರೆ. ಇನ್ನು ಒಂದು ಅಚ್ಚರಿಯ ಸಂಗತಿ ತಿಳಿಸಿದ್ರೆ ನೀವು ಸಹ ಬೆಚ್ಚಿ ಬೀಳ್ತೀರಾ.. ಅಂತರ್ಜಾತಿ ವಿವಾಹದಲ್ಲಿ ನಗರವಾಸಿಗಳಿಗಿಂತ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ಈ ವಿವಾಹಗಳನ್ನು ಉತ್ತೇಜಿಸುತ್ತಿದ್ದಾರೆ. ಇನ್ನು ಒಂದು ಸಂಗತಿ ಎಂದ್ರೆ ವಿದ್ಯಾವಂತ ಪೋಷಕರೆ ಇಂತಹ ವಿವಾಹಗಳನ್ನು ಮುಂದೆ ನಿಂತು ಮಾಡಿಸುತ್ತಿದ್ದು, ಇಂತಹ ಕಾರ್ಯಗಳಿಗೆ ಬೆಂಬಲವನ್ನು ನೀಡುತ್ತಿದ್ದಾರೆ.

ಇದಕ್ಕೆಲ್ಲಾ ಏನು ಕಾರಣ ಎಂದು ಹುಡುಕುತ್ತಾ ಹೊರಟರೆ, ಒಂದು ಕಾಲದಲ್ಲಿ ವಧುವಿನ ಮನೆಯವರು, ವರನ ಮನೆಯ ಹಾಗೂ ಅವರ ಆಸ್ತಿಯನ್ನು ನೋಡಿ ಹೆಣ್ಣನ್ನು ಕೊಡುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ನೀವು ಯಾವುದೇ ಮನೆಯಲ್ಲಿ ಕೇಳಿದ್ರೂ ಒಬ್ಬರಿಲ್ಲ ಒಬ್ಬ ಸ್ವಾಫ್ಟ್ ವೇರ್ ಇಂಜಿನಿಯರ್ ಸಿಗುತ್ತಾನೆ. ಹಿಂದಿನ ಕಾಲದಲ್ಲಿ ತಾವು ಪಟ್ಟ ಕಷ್ಟಗಳು ತಮ್ಮ ಮಕ್ಕಳಿಗೆ ಬರಬಾರದು ಎಂದು ಹೆಚ್ಚಾಗಿ ಓದಿಸಿದ್ರು. ಹಣದ ಯೋಚನೆಯನ್ನು ಮಾಡದೆ ಸಾಲ ಮಾಡಿ ಉನ್ನತ ವ್ಯಾಸಂಗ ನೀಡಿಸಿದ್ದಾರೆ. ಆಗ ಹುಡುಗ/ ಹುಡುಗಿ ತನಗಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರನ್ನೆ ನೋಡ್ತಾರೆ. ಇನ್ನು ಆಗ ಆಸ್ತಿಯನ್ನು ನೋಡಿ ಮದುವೆ ಮಾಡುತ್ತಿದ್ದರು. ಆದ್ರೆ ಈಗ ಸಂಬಳವನ್ನು ನೋಡಿ ಮದುವೆ ಮಾಡ್ತಾರೆ. ವರನಿಗೆ ಇಷ್ಟು ಸಂಬಳ ಇರಬೇಕು ಇಲ್ಲ ಸರ್ಕಾರಿ ಕೆಲಸ ಇರಬೇಕೆಂದು ವಧುವಿನವರೇ ಡಿಮ್ಯಾಂಡ್ ಮಾಡ್ತಾರೆ.

ಇನ್ನು ಉನ್ನತ ವ್ಯಾಸಂಗ ಮಾಡುವ ವೇಳೆ ತಮ್ಮ ವಿಚಾರಧಾರೆಗೆ ಹೊಂದಿಕೊಳ್ಳುವ ಬಾಳ ಸಂಗಾತಿಯನ್ನು ಹುಡುಕಿಕೊಳ್ಳುವದ್ರಲ್ಲಿ ಈಗಿನವರು ಸಹ ಮುಂದಿದ್ದಾರೆ. ಅಲ್ಲದೆ ಅಪ್ಪ, ಅಮ್ಮ ಅಂರ್ತಜಾತಿ ವಿವಾಹಕ್ಕೆ ಒಪ್ಪದೆ ಇದ್ರೆ, ಮನೆ ಬಿಟ್ಟಾದ್ರು ಬಂದು ಮದುವೆ ಆಗ್ತಾರೆ. ಹೆಣ್ಣು-ಗಂಡು ಎಂಬ ಬೇಧಭಾವ ಈಗಿಲ್ಲ. ಹಣ.. ಐಶಾರಮಿ ಜೀವನವೇ ಮುಖ್ಯ..ವಯ್ಯಸ್ಸಾದ ತಂದೆ, ತಾಯಿ ಹೇಗಾದ್ರು ನಾನು ಕಣ್ಣು ಮುಚ್ಚಿಕೊಳ್ಳೊದ್ರಲ್ಲಿ ನನ್ನ ಮಕ್ಕಳ ಮದುವೇ ಮಾಡಿದ್ರೆ ಸಾಕಪ್ಪ ಎಂಬ ನಿಲುವಿನಿಂದ ಇಂತಹ ನಿರ್ಧಾರಗಳಿಗೆ ಬಂದಿರುತ್ತಾರೆ.

LEAVE A REPLY

Please enter your comment!
Please enter your name here