ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವವರು ಮರಕತದಲ್ಲಿರೋ ಶ್ರೀ ದುರ್ಗಾಪರಮೇಶ್ವರಿಯನ್ನು ನೋಡಲು ಮರೀಬೇಡಿ…!!

0
1090

ಕುಕ್ಕೆ ಸುಬ್ರಮಣ್ಯದಿಂದ ಸುಳ್ಯದತ್ತ ಹತ್ತು ಕಿಲೋಮೀಟರ್ ದೂರದಲ್ಲಿ ಹಸಿರಿನ ವನರಾಶಿ, ಭೋರ್ಗರೆದು ರಭಸದಿಂದ ಹರಿಯುತ್ತಿರುವ ಕಲ್ಲಾಜೆ ಹೊಳೆಯ ಆರ್ಭಟಗಳ ನಡುವೆಯೇ ನಡುಗಲ್ಲು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.

ಸುಮಾರು ಸಾವಿರ ವರುಷದ ಇತಿಹಾಸ ಹೊಂದಿರವ ಈ ಮಹಾ ದೇಗುಲವು ಮಾರ್ಕಂಡೇಯ ಮುನಿ ವಂಶಸ್ಥರಿಂದ ಸ್ಥಾಪಿಸಲ್ಪಟ್ಟಿದೆ. ನವರತ್ನಗಳಲ್ಲೊಂದಾದ ಮರಕತದ ಕಲ್ಲುಗಳು ಇಲ್ಲಿ ಹೇರಳವಾಗಿದ್ದುದರಿಂದ ಈ ದುರ್ಗಮ್ಮನವರಿಗೆ ಮರಕತದ ದುರ್ಗಾಪರಮೇಶ್ವರಿ ಎಂದು ಕರೆಯುತ್ತಾರೆ. ಕೇರಳ ಹಾಗು ದಕ್ಷಿಣ ಕನ್ನಡ ವಾಸ್ತು ಶಿಲ್ಪವನ್ನು ಹೊಂದಿರುವ ದೇವಸ್ಥಾನದಲ್ಲಿ ಕುಳಿತಿರುವ ಕಪ್ಪುಶಿಲೆಯ ದುರ್ಗಾ ಮಾತೆಯನ್ನು ನೋಡಲು ಎರಡು ಕಣ್ಣುಗಳು ಸಾಲದು.

ಪ್ರತಿನಿತ್ಯ ಬೆಳಿಗ್ಗೆ ೭ರಿಂದ ೧೨.೩೦ ಮತ್ತು ಸಂಜೆ ೪ರಿಂದ ೭ರ ವರೆಗೂ ಭಕ್ತಾಧಿಗಳಿಗೆ ದರ್ಶನವನ್ನು ಕರುಣಿಸುವ ಮಾತೆಯ ಮಂದಿರವು ೨೦೦೪ ನೇ ಇಸವಿಯಲ್ಲಿ ಪುನರುತ್ಥಾನಗೊಂಡಿದೆ. ಸುತ್ತಮುತ್ತಲಿರುವ ಕೇವಲ ೩೦೦ ಮನೆಗಳ ಭಕ್ತ ವೃಂದದ
ಸಹಾಯದಿಂದ ದೇವತಾ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತಾ ಬಂದಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗು ಹಬ್ಬ ಹರಿದಿನಗಳಂದು ಭೋಜನ ಪ್ರಸಾದವಿರುತ್ತದೆ.

ಇತಿಹಾಸ:

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಮಾರ್ಕಂಡೇಯ ಮುನಿ ವಂಶಸ್ಥರಿಂದ ಪ್ರತಿಷ್ಠಾಪನೆಗೊಂಡಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿದೆ. ಬಳಗೋಡಿನ ರತ್ನಾಪುರ ಎಂಬ ತನ್ನ ಮೂಲ ನೆಲೆಯನ್ನು ಪರಿತ್ಯಜಿಸಿ ನೆಲೆಯನ್ನು ಅರಸುತ್ತ ಬಂದಾಗ ತೀರ್ಥ ಸದೃಶವಾದ ‘ಗಯಾ’ ದ ಪಕ್ಕ ನೆಲೆಸಿದಳೆಂದೂ, ಅಲ್ಲೇ ತಪಸ್ಸನ್ನಾಚರಿಸುತ್ತ ಮಾರ್ಕಂಡೇಯ ಮುನಿವಂಶಸ್ಥನಾದ ಮುನಿಯೋರ್ವನಿಗೆ ಅಶರೀರವಾಣಿಯಾಗಿ ಆತನು ವಿಷ್ಣು ಸಾನಿದ್ಯದೊಂದಿಗೆ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದನೆಂದು ಪ್ರತೀತ.

ಕ್ಷೇತ್ರ ವಿಶೇಷ:

ಗಯಾ ದಲ್ಲಿ ಮಕರ ಸಂಕ್ರಮಣ ದಿವಸ ತಿರಥೋದ್ಭವವಾಗುವುದೆಂದೂ, ಅಂದು ಅಲ್ಲಿ ಸ್ನಾನ ಮಾಡಿದರೆ ಸಕಲ ಪಾಪ ಪರಿಹಾರವಾಗಿ ಇಷ್ಟಾರ್ಥ ಸಿದ್ದಿಸುವುದೆಂದು ಜನರ ಅಚಲ ನಂಬಿಕೆ. ತಾತ್ಕಾಲಿಕವಾಗಿ ಪ್ರತಿಷ್ಠಾಪನೆಗೊಂಡು ಲಿಂಗದಲ್ಲಿ ಐಕ್ಯಳಾಗಿ ಚತುರ್ಬಾಹುಗಳಿಂದ ಪ್ರಸನ್ನಳಾಗಿರುವ ಶ್ರೀ ದೇವಿಯು ಕಾತ್ಯಾಯನಿಯೂ ಸಿದ್ಧಿಧಾತ್ರಿ ಎಂದೂ ಪ್ರಸಿದ್ಧ. ದೇವಿ ಸನ್ನಿಧಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಿದಾಗ ವಿವಾಹ ಸಿದ್ಧ, ಸಂತಾನ ಭಾಗ್ಯ, ವಿದ್ಯಾರಾಂಧ, ಅನ್ನಪ್ರಾಶನ ಮತ್ತು ಸಕಲ ಇಷ್ಟಾರ್ಥ ಸಿದ್ದಿಗಳು ಅತಿ ಶೀಘ್ರವೇ ನೆರವೇರುವುದು.

ಮರಕತಕ್ಕೆ ಮಾರ್ಗ:
ಈ ಸನ್ನಿಧಿಯು ಕುಕ್ಕೆ ಸುಬ್ರಮಣ್ಯದಿಂದ ಸುಳ್ಯಕ್ಕೆ ಹೋಗುವ ದಾರಿಯಲ್ಲಿ 8 ಕಿಲೋಮೀಟರ್ ಕ್ರಮಿಸಿದ ಮೇಲೆ ಬಲಕ್ಕೆ ಬಿದಿರಿನ ಕಾತ್ಯಾಯಿನಿ ಮಾಹಾದ್ವಾರವೆಂಬ ಕಮಾನು ಸಿಗುತ್ತದೆ. ಆ ಕಮಾನಿನ ಒಳಗಿನ ಕಚ್ಚಾರಸ್ತೆಯಲ್ಲಿ ಸುಮಾರು ೨ ಕಿಮೀ ಕ್ರಮಿಸಿದಲ್ಲಿ ಮರಕತದ ದುರ್ಗೆಯ ದೇಗುಲ ಸಿಗುತ್ತದೆ. ಸುಬ್ರಮಣ್ಯದಿಂದ ಆಟೋ ಮತ್ತು ಟಾಕ್ಸಿಗಳ ಸೌಲಭ್ಯ ದೊರಕುತ್ತದೆ. ಕುಕ್ಕೆ ಸುಬ್ರಮಣ್ಯವಲ್ಲದೆ ಬಿಸಿಲೆ ನಿಸರ್ಗಧಾಮ, ಪವಿತ್ರ ಕ್ಷೇತ್ರ ಯೇನೆಕಲ್ಲು ಮೊದಲಾದ ರಮಣೀಯ ತಾಣಗಳಿಗೂ ಭೇಟಿ ಕೊಡಬಹುದು.

ದೇವಸ್ಥಾನದ ವಿಳಾಸ:
Shree Durgaparameshwari Temple , Marakatha
Post : Nadugallu , Nalkuru Village
Sullia T.Q – 574218 , South Canara District ,
Karnataka State – INDIA
Phone : [ 08257 ] 282166 , 276216

 

LEAVE A REPLY

Please enter your comment!
Please enter your name here