10 ನಿಮಿಷದಲ್ಲಿ ಮಾಡಬಹುದಾದ ರಾಗಿ ಅಮ್ಲಿ…ಉಪಯೋಗ ಅಪಾರ.. ಕುಡಿದರೆ ರೋಗ ದೂರ..!

0
1249

ರೋಗ್ಯ ಆರೋಗ್ಯ ಆರೋಗ್ಯ ಹೌದು ಈಗ ಆರೋಗ್ಯ ಕಾಪಾಡಿಕೊಳ್ಳಿ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ಸ್ಥಿತಿ ಬಂದಿದೆ.. ಪರಿಸರ ಹಾಳಾಗುತ್ತಿರುವ ಸ್ಪೀಡ್ ನೋಡಿದರೆ ನಾವು ಅದ್ಯಾವಾಗ ಸಾಯುತ್ತೀವೋ ನಮಗೆ ಗೊತ್ತಿಲ್ಲ.. ಅಂತಹದರಲ್ಲಿ ಇರುವಷ್ಟು ದಿನ ಹಾಳು ಮೂಳು ತಿಂದು ಆರೋಗ್ಯ ಕೆಡಿಸಿ ಕೊಳ್ಳುವುದು ಬೇರೆ.. ಅದಕ್ಕಾಗಿಯೇ ಕೆವಲ 10 ನಿಮಿಷದಲ್ಲಿ ಮಡಬಹುದಾದ ಪ್ರೋಟಿನ್ ಕಣಜ ರಾಗಿ ಅಮ್ಲಿಯನ್ನು ಮಾಡುವುದು ಹೇಗೆಂದು ನಿಮ್ಮ ಮುಂದೆ ಇಡುತ್ತಿದ್ದೇವೆ..

ಬೇಕಾಗುವ ಸಾಮಾಗ್ರಿಗಳು.

  • ರಾಗಿ ಹಿಟ್ಟು
  • ನೀರು
  • ಮೊಸರು
  • ಉಪ್ಪು

ಮಾಡುವ ವಿಧಾನ

  • ಪಾತ್ರೆಯಲ್ಲಿ ಎರೆಡು ಟೇಬಲ್ ಗ್ಲಾಸ್ ಅಷ್ಟು ನೀರನ್ನು ಹಾಕಿ..
  • ಅಲ್ಲಿಗೆ ಕೇವಲ ಎರೆಡು ಸ್ಪೂನ್ ಅಷ್ಟು ಮಾತ್ರ ರಾಗಿ ಹಿಟ್ಟನ್ನು ಹಾಕಿ.. (ಹೆಚ್ಚಿಗೆ ಹಾಕಿದರೆ ಗಂಜಿ ಹಾಳಾಗುವುದು)
  • ಸ್ಪೂನ್ ನಲ್ಲಿ ಚನ್ನಾಗಿ ಕದಕಿರಿ.. ಕದಡದಿದ್ದರೆ ಗಂಜಿ ಗನ್ಟಾಗುವುದು..
  • ಚೆನ್ನಾಗಿ ಕುದಿಯುವವರೆಗು ಕಾಯಿರಿ..
  • 10 ನಿಮಿಷ ಕುದಿಸಿ ಗ್ಯಾಸ್ ಆಫ಼್ ಮಾಡಿ..

ಗಂಜಿ ತೆಳ್ಳಗಿದ್ದರೆ ಅದಕ್ಕೆ ಮೊಸರು ಮತ್ತು ಬೇಕಾದಷ್ಟು ಉಪ್ಪನ್ನು ಹಾಕಿ ಕಡಿಯಿರಿ(ಮಿಕ್ಸ್ ಮಾಡಿ)..

ಕುದಿಸಿದ ಮೇಲೆ ಗಂಜಿ ಗಟ್ಟಿಯಾಗಿದ್ದರೆ ಅದಕ್ಕೆ ಮಜ್ಜಿಗೆಯನ್ನು ಹಾಗೂ ಬೇಕಾದಷ್ಟು ಉಪ್ಪನ್ನು ಹಾಕಿ ಕಡಿಯಿರಿ(ಮಿಕ್ಸ್ ಮಾಡಿ).

LEAVE A REPLY

Please enter your comment!
Please enter your name here