ಅಂದ ಚಂದದ ಪ್ರೀತಿ ಕೈಕೊಟ್ಟು ನರಳಾಡುವಾಗ ನಿಜವಾದ ಪ್ರೀತಿ ಬಂದು ಕೈಜೋಡಿಸಿದ ಅದ್ಭುತ ಪ್ರೇಮಕಥೆ…!

0
2078

ಒಬ್ಬ ಸುಂದರ ಹುಡುಗ ಅವನದ್ದು ಯಾವಾಗಲು ಸುಂದರವಾಗಿ ಕಾಣುವಂತೆ ರೆಡಿಯಾಗುವುದು ಹೊರಗಡೆ ಸುತ್ತಾಡುವುದು ಅಷ್ಟೇ ಇವನ ಕೆಲಸ. ಇವನು ಇದ್ದ ರೂಮ್ ಪಕ್ಕದ ಮನೆಯಲ್ಲಿ ಒಂದು ಹುಡುಗಿ ಅವಳು ಅಷ್ಟು ಸುಂದರವಾಗಿ ಇರುವುದಿಲ್ಲ.
ಆದ್ರೆ ಆ ಹುಡುಗಿ ಈ ಹುಡುಗನ ಕಂಡ್ರೆ ತುಂಬಾ ಇಷ್ಟಪಡುತಿದ್ದಳು.

ಒಂದು ದಿನ ಈ ಹುಡುಗಿ ಆ ಹುಡುಗನ ರೂಮ್ ಗೆ ಹೋಗಿ ಒಂದು ಚೀಟಿಯಲ್ಲಿನ ಐ ಲವ್ ಯು ಅಂತ ಬರೆದು ಆ ಚೀಟಿಯನ್ನು ಕೊಟ್ಟಳು ಆಗ ಹುಡುಗ ಆ ಚೀಟಿಯನ್ನು ಅವಳ ಮುಖದ ಮೇಲೆ ಎಸೆದು ಅವಳನ್ನು ಬೈಯುತ್ತಾನೆ. ನೀನು ಇರೋದು ನೋಡು ನಾನು ಇರೋದು ನೋಡು ನಿಂಗು ನಂಗು ತುಂಬ ವ್ಯತ್ಯಾಸ ಇದೆ ಸುಮ್ನೆ ಹೋಗು ಅಂತ ಹೀಯಾಳಿಸಿ ಕಳುಹಿಸುತ್ತಾನೆ.

ಆದ್ರೆ ಈ ಹುಡುಗ ಮೊತ್ತಬ್ಬ ಸುಂದರ ಹುಡುಗಿಯೊಂದಿಗೆ ಪ್ರೀತಿ ಮಾಡಲು ಶುರುಮಾಡುತ್ತಾನೆ. ಆದ್ರೂ ಪಕ್ಕದ ಮನೆ ಹುಡುಗಿ ಇವನ ಮೇಲೆ ಇರೋ ಪ್ರೀತಿನ ಕಡಿಮೆ ಮಾಡಿಕೊಂಡಿರುವುದಿಲ್ಲ. ಪ್ರತಿದಿನ ಈ ಹುಡುಗನ್ ನೋಡೋದು ಖುಷಿ ಪಡೋದು ಮಾಡುತ್ತ ಇರುತ್ತೆ.

ಒಂದು ದಿನ ಈ ಹುಡುಗ ಮತ್ತು ಅವನ ಪ್ರೇಯಸಿಯೊಂದಿಗೆ ಹೊರಗಡೆ ಹೋದಾಗ ಪ್ರೇಯಸಿಗೋಸ್ಕರ ಒಂದು ಗಿಫ್ಟ್ ತರಲು ಹೋಗಿರುತ್ತಾನೆ. ಆಗ ಪ್ರೇಯಸಿ ಎದುರುಗಡೆ ಇರುವ ರಸ್ತೆಯಲ್ಲಿ ನಿಂತಿರುತ್ತಾಳೆ. ಆ ಹುಡುಗ ಒಂದು ಗಿಫ್ಟ್ ತೆಗೆದುಕೊಂಡು ಪ್ರೇಯಸಿ ಹತ್ತಿರ ಬರಲು ರಸ್ತೆ ದಾಟುವಾಗ ಒಂದು ವಾಹನ ಬಂದು ಡಿಕ್ಕಿ ಹೊಡೆಯುತ್ತದೆ. ಆಗ ಆ ಹುಡುಗ ಅಲ್ಲೇ ರಸ್ತೆಯಲ್ಲಿ ಬಿದ್ದು ನರಳುತ್ತಾನೆ. ಆದ್ರೆ ಪ್ರೇಯಸಿ ಮಾತ್ರ ಅವನ ಹತ್ತಿರ ಬರದೇ ಅದನ್ನು ನೋಡಿ ಓಡಿಹೋಗುತ್ತಾಳೆ.

ಅದೇ ರಸ್ತೆಯಲ್ಲಿ ಪಕ್ಕದ ಮನೆ ಹುಡುಗಿ ಅಂದ್ರೆ ಇವನನ್ನು ಲವ್ ಮಾಡುವ ಹುಡುಗಿ ಬಂದು ಅದನ್ನು ನೋಡಿ. ತುಂಬಾ ನೋವು ಪಟ್ಟುಕೊಂಡು ಕಷ್ಟಪಟ್ಟು ಆಸ್ಪತ್ರೆಗೆ ಸೇರಿಸುತ್ತಾಳೆ. ಆಗ ಹುಡಗುಗ ಪ್ರಾಣಾಪಾಯದಿಂದ ಬದುಕುಳಿಯುತ್ತಾನೆ. ಅವನಿಗೆ ಹೆಚ್ಚರವಾದ ಮೇಲೆ ಅಲ್ಲೇ ಪಕ್ಕದಲ್ಲಿರುವ ಕನ್ನಡಿ ನೋಡಿಕೊಳ್ಳುತ್ತಾನೆ ಮುಖ ವಿರೂಪಗೊಂಡಿರುತ್ತದೆ. ಅವನ ಮೊದಲ ಸೌಂದರ್ಯ ಹೋಗಿ ಮುಖ ತುಂಬಾ ವಿಚಿತ್ರವಾಗಿ ಕಾಣಿಸುತ್ತೆ. ಅದನ್ನು ನೋಡಿ ಜೋರಾಗಿ ಚೀರಿಕೊಂಡು ಅಳುತ್ತ ಕೂತಿದ್ದ.

ಆಗ ಮಾತ್ರೆ ಮತ್ತು ಹಣ್ಣು ತೆಗೆದುಕೊಂಡ ಆ ಹುಡುಗಿ ಬರುತ್ತಾಳೆ ಆಗ ಆ ಹುಡುಗಿಯನ್ನು ನೋಡಿ ಇವನು ಏನು ಮಾತನಾಡದೆ ಸುಮ್ನೆ ಕೂರುತ್ತಾನೆ. ಆಗ ಹುಡುಗಿ ಮತ್ತದೇ ಒಂದು ಚೀಟಿಯನ್ನು ಅವನಿಗೆ ಕೊಡುತ್ತಾಳೆ. ಅದರಲ್ಲಿ ಐ ಲವ್ ಯು ಅಂತ ಇರುತ್ತೆ. ಅದನ್ನು ನೋಡಿದ ಹುಡುಗ ಆ ಹುಡುಗಿಯನ್ನುತಬ್ಬಿಕೊಂಡು ಜೋರಾಗಿ ಅಳುತ್ತಾನೆ.

ನಾನು ತುಂಬ ಮೋಸ ಹೋಗಿಬಿಟ್ಟೆ ನಿನ್ನ ನಿಜವಾದ ಪ್ರೀತಿಯನ್ನು ನಾನು ತಿರಸ್ಕರಿ ತುಂಬಾ ತಪ್ಪು ಮಾಡಿದೆ ನನ್ನ ಕ್ಷಮಿಸು ಅಂತ ಹೇಳಿ ಆ ಹುಡುಗಿಯ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನೆ.

ನೋಡಿ ಜೀವನದಲ್ಲಿ ನಿಮ್ಮನ ಪ್ರೀತಿ ಮಾಡೋರನ ಹೆಚ್ಚಾಗಿ ಪ್ರೀತಿ ಮಾಡಿ ಯಾವತ್ತು ಅಂದ ಮುಖ್ಯವಲ್ಲ ಪ್ರೀತಿ ಮುಖ್ಯ…

LEAVE A REPLY

Please enter your comment!
Please enter your name here