ಅಷ್ಟಿಲ್ದೆ ಹೇಳ್ತಿದ್ರ ನಮ್ಮ ಹಿರಿಯರು ವಾರಕ್ಕೊಂದ್ಸಲೇ ಅಭ್ಯಂಗ ಮಾಡ್ಕೋಬೇಕೆಂದು…

0
491

ಅಭ್ಯಂಗದಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತಾ..

ಅಭ್ಯಂಗನ ಎಂದರೇನು?

ಅಭ್ಯಂಗನ ಎಂದರೆ ಈಡಿ ಶರೀರಕ್ಕೆ ಎಣ್ಣೆಯನ್ನು ಲೇಪಿಸುವುದು. ತಲೆಗೆ ಎಣ್ಣೆ ಲೇಪಿಸಿದರೆ ಶಿರೋಭ್ಯಂಗನ,ಪಾದಗಳಿಗೆ ಲೇಪಿಸಿದ್ದಲ್ಲಿ ಪಾದಾಭ್ಯಂಗನ ಎಂದು ಕರೆಯುವರು. ಶರೀರಕ್ಕೆ ಎಣ್ಣೆಯನ್ನು ಲೇಪಿಸುವುದಕ್ಕೆ ಶರೀರಾಭ್ಯಂಗನ ಎಂದು ಕರೆಯುತ್ತಾರೆ. ಅಭ್ಯಂಗನಕ್ಕೇ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬಳಸುವುದು ತುಂಬಾ ಶ್ರೇಷ್ಠ. ಆಯಾ ಪ್ರದೇಶಗಳ ಹವಾಮಾನಕ್ಕನುಗುಣವಾಗಿ ಅಭ್ಯಂಗನಕ್ಕೇ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಲವು ಪ್ರದೇಶಗಳಲ್ಲಿ ಕೊಬ್ಬರಿ ಎಣ್ಣೆ, ಹರಳೆಣ್ಣೆ, ತೆಂಗಿನಕಾಯಿಯ ಎಣ್ಣೆಯಿಂದಲೂ ಅಭ್ಯಂಗನ ಮಾಡುತ್ತಾರೆ.

ದೇಹಕ್ಕೆ ಪ್ರತಿದಿನ ಎಣ್ಣೆಯನ್ನು ಲೇಪಿಸುವುದರಿಂದ ಎಣ್ಣೆಯಲ್ಲಿರುವ ಜಿಡ್ಡಿನ ಅಂಶದ ಸಹಾಯದಿಂದ, ಚರ್ಮಕ್ಕೂ ಹಾಗು ಚರ್ಮವನ್ನು ಆಶ್ರಯಿಸಿರುವ ನಾಡಿಗಳಿಗೂ ಬಲ ದೊರಕುವುದು. ಸೂರ್ಯ ರಶ್ಮಿಯ ಸಹಕಾರದಿಂದ ಚರ್ಮವು ವಿಟಮಿನ್ ಡಿ ಎಂಬ ಜೀವಸತ್ವವನ್ನು ತಯಾರಿಸುವ ಶಕ್ತಿಯನ್ನು ಹೊಂದಿರುವುದರಿಂದ ಅಭ್ಯಂಗನ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವವರಿಗೆ ಪೂರಕ ಚಿಕಿತ್ಸೆಯಾಗಿದೆ.

ಪ್ರತಿನಿತ್ಯ ಅಭ್ಯಂಗನ ಮಾಡುವುದರಿಂದ ದೇಹಕ್ಕೆ ಬೇಗ ಮುಪ್ಪು ಆರೈಸುವುದಿಲ್ಲ. ಅದೇ ರೀತಿ ಚರ್ಮ ಮೃದುವಾಗಿ, ನುಣುಪಾಗಿ ಇಡಲೂ ಮಸಾಜ್ ಗಿಂತ ಉತ್ತಮ ಚಿಕಿತ್ಸೆ ಇಲ್ಲ.ಅಭ್ಯಂಗನವು ದೇಹದ ಅತಿಯಾದ ವಾತವನ್ನು ಶಮನಗೊಳಿಸುವುದು, ನೇತ್ರ ರೋಗಗಳನ್ನು ದೂರ ಮಾಡುವುದು, ಕಣ್ಣುಗಳನ್ನು ತಂಪಾಗಿರಿಸುವುದು. ದೇಹಕ್ಕೆ ಶಕ್ತಿ, ಚರ್ಮಕ್ಕೆ ಕಾಂತಿ, ಅಂಗಾಂಗಗಳ ಬಲ ವರ್ಧನೆಯಾಗುವುದು. ಸುಖ ನಿದ್ದೆಯನ್ನು ಕರುಣಿಸುವುದು.

ಪ್ರತಿನಿತ್ಯ ಕೂದ್ಲಿಗೆ ಮತ್ತು ತಲೆಗೆ ಎಣ್ಣೆ ಹಚ್ಚುವುದರಿಂದ ತಲೆನೋವು ದೂರವಾಗುವುದು ಮತ್ತು ಕೂದಲು ಸೊಂಪಾಗಿ ಬೆಳೆಯುವುದು. ಕೂದಲು ಉದುರುವುದು, ಅಕಾಲಿಕ ನೆರೆಯಾಗುವುದನ್ನು ತಡೆಯಬಹುದು. ತಲೆಯು ತಂಪಾಗಿ ತಲೆ ನೋವು, ತಲೆ ಭಾರ, ಕಣ್ಣುಭಾರದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ದೇಹಕ್ಕೆ ಸಂಪೂರ್ಣವಾಗಿಯೋ ಎಣ್ಣೆಯನ್ನು ಹಚ್ಚಿ ಮೃಧುವಾಗಿ ಉಜ್ಜುವುದಕ್ಕೆ ಮಸಾಜ್ ಎನ್ನುತ್ತಾರೆ. ಇದರಿಂದ ಶರೀರವು ಮೃಧುವಾಗಿ, ಶಕ್ತಿವಂತವಾಗಿ ಇರುವುದು. ಕಫ ವಾತಗಳು ವೃದ್ಧಿಯಾಗುವುದಿಲ್ಲ. ಚರ್ಮವು ನುಣುಪಾಗಿ ಕಾಂತಿಯುತವಾಗಿ ಇರುವುದು. ವಯಸ್ಸು ಜಾಸ್ತಿಯಾದರೂ ಮುಪ್ಪಿನ ಲಕ್ಷಣಗಳು ಗೋಚರಿಸುವುದಿಲ್ಲ.

ಮನುಷ್ಯನ ಅರೋಗ್ಯ ಸಕ್ರಮವಾಗಿ ಇರಲು ಅಭ್ಯಂಜನ ಸ್ನಾನ ತುಂಬಾ ಮುಖ್ಯ.ದೇಹದ ಕಾಂತಿಯನ್ನು ಹೆಚ್ಚಿಸುವ ಇಂತಹ ಸ್ನಾನವನ್ನು ದೂರ ಮಾಡಿಕೊಳ್ಳಬೇಡಿ..

LEAVE A REPLY

Please enter your comment!
Please enter your name here