ಜಿಯೋ ಹಾಗು ಏರ್ಟೆಲ್ ಆಯ್ತು ಈಗ BSNL ಸರದಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್..!

0
530

ಜಿಯೋ ಡೇಟಾ ಸಮರ ಆರಂಭಗೊಂಡ ಬಳಿಕ ಉಳಿದ ಕಂಪನಿಗಳು ಏರ್ಟೆಲ್ ಕೂಡ ಸಹ ಹಲವು ಆಕರ್ಷಕ ಡೇಟಾ ಪ್ಯಾಕ್ ನೀಡಲು ಆರಂಭಿಸಿದ್ದು, ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಹೊಸ ಡೇಟಾ ಆಫರ್ ನೀಡಿದೆ.

90 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ 429 ರೂ. ಹೊಸ ರಿಚಾರ್ಜ್ ಆಫರ್ ಅನ್ನು ಬಿಎಸ್‍ಎನ್‍ಎಲ್ ಪ್ರಕಟಿಸಿದೆ.

ಈ ಆಫರ್ ಪ್ರಕಾರ 90 ದಿನಗಳ ಕಾಲ ಪಾನ್ ಇಂಡಿಯಾ(ಕೇರಳ ವಲಯ ಹೊರತು ಪಡಿಸಿ)ದಲ್ಲಿ ಪ್ರತಿದಿನ ಗರಿಷ್ಟ 1 ಜಿಬಿ ಡೇಟಾವನ್ನು ಬಳಸಬಹುದು. ಅಷ್ಟೇ ಅಲ್ಲದೇ ಈ ಅವಧಿಯಲ್ಲಿ ಹೊರ ಹೋಗುವ ಎಲ್ಲ ಎಸ್‍ಟಿಡಿ ಮತ್ತು ಸ್ಥಳೀಯ ಕರೆಗಳು ಉಚಿತವಾಗಿರಲಿದೆ ಎಂದು ಬಿಎಸ್‍ಎನ್‍ಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬಿಎಸ್‍ಎನ್‍ಎಲ್ ಬೋರ್ಡ್ ನಿರ್ದೇಶಕ ಆರ್‍ಕೆ ಮಿತ್ತಲ್ ಈ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. , ಡೇಟಾ ಮತ್ತು ಕರೆಗೆ 429 ರೂ. ಅಂದರೆ ತಿಂಗಳಿಗೆ 143 ರೂ ಇದರಲ್ಲಿ ಸಿಗುತ್ತದೆ. ಪ್ರಸ್ತುತ ಈ ಆಫರ್ ಹೆಚ್ಚು ಸ್ಪರ್ಧಾತ್ಮಕವಾಗಿದೆ.

LEAVE A REPLY

Please enter your comment!
Please enter your name here