ಇಂತಹ ಪ್ರೀತಿ ನಿಮಗೆ ಬೇಕಾ ಪ್ರೀತಿ ಮಾಡುವ ಮುನ್ನ ಒಮ್ಮೆ ಯೋಚಿಸಿ..? ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ..!

0
1395

ಪ್ರೀತಿ ಅನ್ನೋದು ಮನುಷ್ಯನ ಜೀವನದ ಒಂದು ಭಾಗ ಯಾಕೆ ಅಂದ್ರೆ ಪ್ರೀತಿ ಮಾಡದ ಮನುಷ್ಯ ಈ ಭೂಮಿ ಮೇಲೆ ಯಾರು ಇಲ್ಲ ಅನ್ಸುತ್ತೆ.

ಪ್ರೀತಿ ಎಂದರೆ ಪ್ರತಿಯೊಬ್ಬ ಮನುಷ್ಯನು ತನ್ನವರನ್ನು ಆತ್ಮೀಯತೆಯಿಂದ ಕಾಣುವುದಾಗಿದೆ. ಅಣ್ಣ ತಂಗಿಯನ್ನು, ತಂದೆ ತಾಯಿಗಳು ಮಕ್ಕಳನ್ನು, ಮಕ್ಕಳು ತಂದೆ ತಾಯಿಯನ್ನು, ಜೊತೆಗೆ ಹುಡುಗ ಹುಡುಗಿಯನ್ನು ಪ್ರೀತಿಸುವಂತಹ ಭಾವನತ್ಮಕ ಸಂಬಂಧಗಳಿಗೆ ಪ್ರೀತಿ ಎನ್ನಲಾಗುತ್ತದೆ.

ಮುಖ್ಯವಾಗಿ ಹುಡುಗ ಹುಡುಗಿಯರ ಪ್ರೀತಿಯನ್ನು ನೋಡುವುದಾದರೆ ಪ್ರೀತಿ ಮಾಡುವುದು ತಪ್ಪಲ್ಲ. ಆದರೆ ವಿಧ್ಯಾರ್ಥಿ ಜೀವನದಲ್ಲಿ ಪ್ರೀತಿ ಮಾಡುವುದರಿಂದ ಅವರ ಮುಂದಿನ ಭವಿಷ್ಯಕ್ಕೆ ತೊಂದರೆ ಆಗಬಾರದು ಅಷ್ಟೆ. ಆದರೆ ಇವತ್ತಿನ ದಿನಗಳಲ್ಲಿ ತನ್ನ ಪ್ರೀತಿಗೆ ತಾನೇ ಬಲಿಯಾಗುತ್ತನೆ. ಅಂದರೆ ಇವತ್ತಿನ ಆದುನಿಕ ಸಮಾಜದಲ್ಲಿ ಮತ್ತು ಪ್ರಂಪಚದಲ್ಲಿ ಪ್ರೀತಿಯ ಆಕರ್ಷಣೆಗೆ, ಪ್ರೀತಿಯ ಹುಡುಗಿಯ ಮೊಹದ ಬಲೆಗೆ ಹದಿ ಹರೆಯದ ವಯಸ್ಸಿನಲ್ಲಿ ಹುಡುಗಾಟದ ಹುರುಪಿನಲ್ಲಿ ಪ್ರೀತಿಯೆಂಬ ಮಹ ಜಾಲದಲ್ಲಿ ಬೀಳುತ್ತಾನೆ.

ದಿನ ಕಳೆದಂತೆ ಪ್ರೀತಿಯೆಂಬ ಸಾಗರದಲ್ಲಿ ಮುಳುಗತ್ತಾನೆ ಆದರೆ ಮುಳುಗುವ ಮುನ್ನ ತನ್ನನ್ನು ಬೆಳೆಸಿದಂತಹ ತಂದೆ ತಾಯಿಯ ಪರಿಶ್ರಮ ಅವರು ಮಗನಿಗೊಸ್ಕರ ಕಟ್ಟಿದಂತಹ ಕನಸಿನ ಆರಮನೆಯನ್ನು ಆ ಪ್ರೀತಿಯ ಸಾಗರದಲ್ಲಿ ಅವನ ಜೊತೆಗೆ ಮುಳುಗಿಸುತ್ತಾನೆ. ತನ್ನ ಮಗ ಜೀವನದಲ್ಲಿ ಮತ್ತು ಸಮಾಜದಲ್ಲಿ ಸಮಾಜಕ್ಕೆ ಮಾರಕವಾಗದೆ ಪೊರಕವಾಗಿರಬೇಕು. ಮತ್ತು ಸಮಾಜದಲ್ಲಿ ಒಬ್ಬ ಒಳ್ಳೆಯ ಉತ್ತಮ ಪ್ರಜೆ ಆಗಬೇಕು ಎಂಬ ಹಲವು ಕನಸುಗಳನ್ನು ಹೊತ್ತು ಸಾಕಷ್ಟು ಕಷ್ಟಪಟ್ಟು ದುಡಿದು ತನ್ನ ಮಗನನ್ನು ಬೆಳೆಸುತ್ತಾರೆ.

ಆದರೆ ಪ್ರೀತಿಯ ಆಕರ್ಷಣೆಯಿಂದ ತನ್ನ ತಂದೆ ತಾಯಿಯ ಆಸೆ ಆಕಾಂಕ್ಷೆಗಳನ್ನು ಕ್ಷಣ ಮಾತ್ರದಲ್ಲಿ ಗಾಳಿಗೆ ತುರಿ ಪ್ರೀತಿಯ ಬಲೆಗೆ ಬಿಳುತ್ತಾನೆ. ಆದರೆ ತನ್ನ ಪ್ರೀತಿಯಲ್ಲಿ ಹಲವು ರೀತಿಯ ಸಾಕಷ್ಟು ಕಷ್ಟ ಸುಖಗಳ ಮಧ್ಯೆ ಬಹಳ ತೊಂದರೆ ಸಿಲುಕಿ. ಆ ಪ್ರೀತಿಯ ಸಾಗರದಲ್ಲಿ ಈಜಲಾರದೆ ಮೇಲೆ ಬರಲು ಆಗದೆ ಪ್ರೀತಿಯಲ್ಲಿ ಯಶಸ್ಸು ಕಾಣದೆ ನಾನ ಕಾರಣಗಳಿಂದ ಪ್ರೀತಿಯನ್ನು ಮರೆಯಾಲಾರದೆ. ವಿಷವೆಂಬ ಪ್ರೀತಿಯನ್ನು ಸಹಿಸಿಕೊಳ್ಳದೆ .ಇನ್ನು ತನ್ನ ಪ್ರೀತಿಯ ವೇದನೆ ಅನುಬವಿಸಲಾರದೆ ಆಕ್ಷಣದಲ್ಲಿ ತನ್ನ ತಂದೆ ತಾಯಿನ್ನು ಮರೆತು ಸಮಾಜವನ್ನು ನಿರ್ಲಕ್ಷಸಿ ತನ್ನ ಜೀವನದ ಗುರಿ ಮುಟ್ಟಲಾರದೆ ತನ್ನ ಆತ್ಮಶಕ್ತಿಯನ್ನು ಕಳೆದುಕೊಂಡು. ಎನು ಮಾಡಲಾರದೆ ತರಗತಿಯ ಕೊಠಡಿಯಲ್ಲಿ ವಿಧ್ಯಾಭ್ಯಾಸ ಮಾಡುವ ವಿಧ್ಯಾರ್ಥಿ, ಇಂತಹ ಸಂದರ್ಭದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಂಡು ಪ್ರೀತಿಯನ್ನು ಮರೆಯಲು.ಮುಂದೆ ಮಧ್ಯಪಾನದ ಅಂಗಡಿಯಲ್ಲಿ ತನ್ನ ಜೀವನವನ್ನು ಕಳೆಯುತ್ತಾನೆ.

Image result for parentes and adult

ತನ್ನ ಆಸೆ ಆಕಾಂಕ್ಷಗಳನ್ನು ಮರೆತು ಪ್ರಜ್ಞಾಹಿನ ಸ್ಥಿತಿಯಲ್ಲಿ ದಿನಗಳನ್ನು ಕಳೆಯುತ್ತಾನೆ. ಇತಂಹ ಪರಿಸ್ಥಿತಿಯನ್ನು ತಂದೆ ತಾಯಿಗಳು ನೊಡಿದರೆ ಆಗುವ ಸಂಕಟ ಅವರು ಪಡುವ ವೇದನೆ ಮನಕಲಕುವಂತೆ ಇರುತ್ತದೆ. ತಂದೆ ತಾಯಿಗಳು ತಮ್ಮ ಮಕ್ಕಳಿಗೆ ವಾತ್ಸಲ್ಯಭರಿತ ನಿಶ್ಕಲ್ಮಶ ಪ್ರೀತಿಯನ್ನು ನೀಡಿ ಅವರಿಗೆ ನೆರಳಗಿರುತ್ತಾರೆ. ಆದೆ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಗಳನ್ನೇ ಕಡೆಗಣಿಸುತ್ತಾರೆ.

ಇನ್ನು ನಿಮ್ಮ ಜೀವನದ ದಿಕ್ಕನೇ ಬದಲಿಸುವ ಸಮಾಜಕ್ಕೆ ಮಾರಕವಾಗುವ ತಂದೆ ತಾಯಿಯನ್ನು ದ್ವೇಷಿಸುವಂತ ಇಂತಹ ಪ್ರೀತಿ ನಿಮಗೆ ಬೇಕಾ.? ಪ್ರೀತಿ ಮಾಡುವ ಮುನ್ನ ಒಮ್ಮೆ ಯೋಚಿಸಿ..

LEAVE A REPLY

Please enter your comment!
Please enter your name here