ಒಂದು ನಿಮಿಷದ ವಿಡಿಯೋ ಚಾಟ್ ಗೆ ಎಷ್ಟು MB ಬೇಕಾಗುತ್ತದೆ…? ತಿಳಿದುಕೊಳ್ಳಿ

0
682

ವೀಡಿಯೋ ಚಾಟಿಂಗ್ ಮೂಲಕ ಮುಖಾಮುಖಿ ಮಾತುಕತೆ ನಡೆಸುವ ಸೌಲಭ್ಯವನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ಇತ್ತೀಚೆಗಷ್ಟೇ ನೀಡಿದೆ. ಸಾಮಾಜಿಕ ಜಾಲತಾಣದಲ್ಲೇ ಮುಂಚೂಣಿಯಲ್ಲಿರುವ ವಾಟ್ಸಾಪ್ ತನ್ನ ಬಳಕೆದಾರರಿಗೆ ವೀಡಿಯೋ ಚಾಟಿಂಗ್ ಸೌಲಭ್ಯವನ್ನು ನೀಡಿರುವುದು ಖುಷಿಯ ವಿಚಾರ.

ಸ್ಕೈಪ್ ಪ್ರಪ್ರಥಮ ಬಾರಿಗೆ ತನ್ನ ಬಳಕೆದಾರರಿಗೆ ಈ ಸೌಲಭ್ಯ ಒದಗಿಸಿತ್ತು. ಆಪಲ್ ಫೋನ್ ಕೂಡ ಫೇಸ್‍ಟೈಮ್ ಎಂಬ ವೀಡಿಯೋ ಕರೆಯ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ನೀಡಿತ್ತು. ನೀವೇನಾದರೂ ವೈಫೈ ಇಲ್ಲದೆ ಮೊಬೈಲ್ ಡಾಟಾ ಉಪಯೋಗಿಸಿಕೊಂಡು ವಿಡಿಯೋ ಚಾಟ್ ನೆಡೆಸಲು ಉದ್ದೇಶಿಸಿದ್ದಾರೆ ಅದಕ್ಕೆ ಫುಲ್ ಸ್ಟಾಪ್ ಇಡುವುದು ಒಳ್ಳೆಯದು.

ವೆಬ್‍ಸೈಟೊಂದು ಈ ಮೂರು ಸೌಲಭ್ಯಗಳನ್ನು ಬಳಸಿ, ಇವುಗಳಲ್ಲಿ ಯಾವುದು ಜನತೆಗೆ ಅಗ್ಗವಾಗಲಿದೆ ಅಥವಾ ದುಬಾರಿಯಾಗಲಿದೆ ಎನ್ನುವುದನ್ನು ಕಂಡುಕೊಂಡಿದೆ. ನಿಮಿಷಗಳ ವೀಡಿಯೋ ಚಾಟ್ ನಡೆಸಿದ್ದು, ಈ ಅವಧಿಯಲ್ಲಿ ಅತಿ ಹೆಚ್ಚು ಅಥವಾ ಕಡಿಮೆ ಮೊಬೈಲ್ ಡಾಟಾ ಬಳಸುವ App ಯಾವುದು ಎನ್ನುವ ವಿವರ ಇಲ್ಲಿದೆ. ವೊಡಾಫೋನ್ 3ಜಿ ನೆಟ್‍ವರ್ಕ್ ಬಳಸಿ ಈ ಪ್ರಯೋಗ ನಡೆಸಲಾಗಿದೆ.

watsapp :

4 ನಿಮಿಷಗಳ ವಾಟ್ಸಾಪ್ ವಿಡಿಯೋ ಚಾಟ್ ಬಳಕೆಗೆ 12.74 ಎಂಬಿ ವ್ಯಯವಾಗುತ್ತದೆ. ಅಂದರೆ 3.1 ರೂ. ಅಥವಾ ಪ್ರತಿ ನಿಮಿಷಕ್ಕೆ 80 ಪೈಸೆ ತಗಲುತ್ತದೆ.

skype :

4 ನಿಮಿಷಗಳ ವಾಟ್ಸಾಪ್ ವಿಡಿಯೋ ಚಾಟ್ ಬಳಕೆಗೆ 12.3 ಎಂಬಿ ವ್ಯಯವಾಗುತ್ತದೆ. ಅಂದರೆ 3 ರೂ. ಅಥವಾ ಪ್ರತಿ ನಿಮಿಷಕ್ಕೆ 77 ಪೈಸೆ ತಗಲುತ್ತದೆ.

Apple Face time :

4 ನಿಮಿಷಗಳಲ್ಲಿ 8.8 ಎಂಬಿ ಬಳಸುವ ಆಪಲ್ ಫೋನ್‍ಗಳಲ್ಲಿರುವ ಫೇಸ್ ಟೈಮ್ ಬಳಕೆಗೆ ಅತಿ ಕಡಿಮೆ ಮೊಬೈಲ್ ಡಾಟಾ ವ್ಯಯವಾಗುತ್ತದೆ ಮತ್ತು ಫೇಸ್ ಟೈಮ್‍ನಲ್ಲಿ 4 ನಿಮಿಷಗಳ ವೀಡಿಯೋಗೆ 2.2 ರೂ. ಅಥವಾ ಪ್ರತಿ ನಿಮಿಷಕ್ಕೆ 55 ಪೈಸೆ ತಗಲುತ್ತದೆ.

ಒಟ್ಟಿನಲ್ಲಿ ಈ ಮೂರು ವೀಡಿಯೋ ಚಾಟ್ ಸೌಲಭ್ಯಗಳ ಪೈಕಿ ವಾಟ್ಸಾಪ್ ಮತ್ತು ಸ್ಕೈಪ್ ತುಸುಹೆಚ್ಚು ಮೊಬೈಲ್ ಡಾಟಾವನ್ನು ಬಳಸುತ್ತದೆ ಮತ್ತು ಫೇಸ್‍ಟೈಮ್ ಅತಿ ಕಡಿಮೆ ಮೊಬೈಲ್ ಡಾಟಾ ಬಳಸುತ್ತದೆ. ಮತ್ತೊಂದು ವಿಚಾರ ಸ್ಕೈಪ್ ಹಾಗೂ ವಾಟ್ಸಾಪ್ ವೀಡಿಯೋ ಚಾಟಿಂಗ್‍ನ ಗುಣಮಟ್ಟ ಅಷ್ಟೇನೂ ಉತ್ತಮವಾಗಿಲ್ಲ. ಆದರೆ ಫೇಸ್‍ಟೈಮ್‍ನ ಗುಣಮಟ್ಟ ಇವೆರಡಕ್ಕೂ ಹೋಲಿಸಿದರೆ ಉತ್ತಮವಾಗಿದೆ. ಆದರೆ ಫೇಸ್‍ಟೈಮ್ ಆಪಲ್ ಮೊಬೈಲ್‍ಗಳಲ್ಲಿ ಲಭ್ಯವಿರುವುದರಿಂದ ಹೆಚ್ಚು ಜನರು ವಾಟ್ಸಾಪ್-ಸ್ಕೈಪ್ ಬಳಸುವುದಂತೂ ಸುಳ್ಳಲ್ಲ!

LEAVE A REPLY

Please enter your comment!
Please enter your name here