ಅಬ್ಬಾ !! 20 ಕ್ಕೂ ಹೆಚ್ಚು ಜನ ಉಪಯೋಗಿ ಸಾಧನಗಳನ್ನು ಕಂಡು ಹಿಡಿದ ಈ ಪ್ರತಿಭೆಗೆ ಜನ ಕೊಟ್ಟ ಬಿರುದು: ‘ಹಳ್ಳಿ ವಿಜ್ಞಾನಿ’

0
505

ಕೆಲವೊಮ್ಮೆ ಪ್ರತಿಭೆ ಎಲ್ಲಿ ಹೇಗೆ ಅರಳುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ, ಎಷ್ಟೇ ಅಡೆ ತಡೆಗಳಿದ್ದರೂ ಅದು ಒಂದಲ್ಲಾ ಒಂದು ಸಾರಿ ಅನಾವರಣಗೊಳ್ಳಲೇ ಬೇಕು ಎಂಬುದು ನಿಯಮವಾಗಿದೆ. ಅದಕ್ಕೆ ಪುಷ್ಟಿ ನೀಡುವ ಸಂಗಾತಿಯೊಂದರ ಬಗ್ಗೆ ಹೇಳ ಹೊರಟಿದ್ದೇನೆ, ಮುಂದೆ ಓದಿ…

ಜಾರ್ಖಂಡ್ ರಾಜ್ಯದ ಧನ್ಬಾದ್ ಜಿಲ್ಲೆಯ ಒಂದು ಕುಗ್ರಾಮ ಸಿಂದೂರ್ಪುರ್ ನಲ್ಲಿ ಹುಟ್ಟಿದ ರುದ್ರ ನಾರಾಯಣ್ ಮುಖರ್ಜಿ 35 ವರ್ಷದ ಯುವಕ. ಸಾಮಾಜಿಕ ಸಮಸ್ಯೆಗಳ ಕೇಂದ್ರವಾಗಿಟ್ಟುಕೊಂಡು ಇಲ್ಲಿಯವರೆಗೂ ಈತ 22 ಕ್ಕೂ ಹೆಚ್ಚು ಜನ ಉಪಯೋಗಿ ಸಾಧನಗಳನ್ನು ಕಂಡು ಹಿಡಿದು ಜನಪರ ಕಾಳಜಿಯನ್ನು ಈ ಮೂಲಕ ತೋರಿಸಿದ್ದಾರೆ. ಈ ಪ್ರತಿಭೆಗೆ ಜನ ಕೊಟ್ಟ ಬಿರುದು ‘ಹಳ್ಳಿ ವಿಜ್ಞಾನಿ’ ಎಂದು. ರುದ್ರ ಅವರದು ಪುಟ್ಟ ಸಂಸಾರ, ತಂದೆ, ತಾಯಿ, ಹೆಂಡತಿ, ಮಗುವಿನೊಂದಿಗೆ ಸುಖ ಸಂಸಾರ. ನಿವೃತ ಇಂಜಿನಿಯರ್ ಆಗಿರುವ ಅವರ ತಂದೆಯ ಮಾರ್ಗದರ್ಶನದಲ್ಲಿ ಚಿಕ್ಕಂದಿನಿಂದಲೂ ಗ್ಯಾಜೆಟ್ ಗಳ ಬಗ್ಗೆ ಅನ್ವೇಷಣೆ ನೆಡೆಸುತ್ತ ಬಂದಿದ್ದಾರೆ.

21dhanbike1

“ನಾನು ಇಲ್ಲಿಯವರೆಗೂ ಅತಿ ಕಡಿಮೆ ವೆಚ್ಚದಲ್ಲಿ 20 ರಿಂದ 22 ವಿವಿಧ ರೀತಿಯ ನಿತ್ಯ ಬಳಕೆಯ ಜನಸ್ನೇಹಿ ಸಾಧನಗಳನ್ನು ಕಂಡು ಹಿಡಿದಿದ್ದೇನೆ, ಪ್ರಪಂಚಕ್ಕೆ ಗೊತ್ತಿರದ 40 ಕ್ಕೂ ಹೆಚ್ಚು ವಿಷಯಗಳ ಮೇಲೆ ಈಗಾಗಲೇ ಪ್ರಯೋಗ ನೆಡೆಸುತ್ತಿದ್ದೇನೆ ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

????????????????????????????????????

ಹೆಣ್ಣುಮಕ್ಕಳ ಸುರಕ್ಷತೆ, ಚಿಕ್ಕ ಮಕ್ಕಳ ಆರೋಗ್ಯ ಕಾಳಜಿ, ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವಿಕೆಯ ಬಗ್ಗೆ, ಅಪಘಾತವಾದ ಸಂದರ್ಭದಲ್ಲಿ ಹೆಲ್ಮೆಟ್ ಮುಖಾಂತರ ಸಂಬಂಧಿಕರಿಗೆ ಎಚ್ಚರಿಕೆಯ ಕರೆ ಕಳಿಸುವ ಸಾಧನ, ಹೀಗೆ ಹಲವಾರು ಜನ ಸ್ನೇಹಿ ಸಾಧನಗಳನ್ನು ಕಂಡು ಹಿಡಿದು ಎಲ್ಲರ ಉಬ್ಬೇರಿಸುವಂತೆ ಮಾಡಿದ್ದಾರೆ.

????????????????????????????????????

ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಈಗಾಗಲೇ ‘Make in India’ ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿರುವ ರುದ್ರ ಅವರಿಗೆ ದುಡ್ಡಿನ ಅಭಾವವಿದೆ. ” ಒಂದೇ ಒಂದು ಅನ್ವೇಷಣೆಯ ಪೇಟೆಂಟ್ಗೆ 86000 ಕ್ಕೂ ವೆಚ್ಚವಾಗಲಿದ್ದು, ಅದನ್ನು ಬರಿಸುವ ಶಕ್ತಿ ನನ್ನಲ್ಲಿ ಇಲ್ಲ” ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here