ತುಮಕೂರಿನ ವೀರಶೈವ ಸಹಕಾರ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ

0
1479

ತುಮಕೂರಿನ ವೀರಶೈವ ಸಹಕಾರ ಬ್ಯಾಂಕ್ ನಲ್ಲಿ ವಿವಿಧ ಖಾಯಂ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾ ಅರ್ಹತೆ:
ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಇರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 28, 2017.

ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು (ಟೆಕ್ನಿಕಲ್)-02 ಹುದ್ದೆಗಳು
ವೇತನ ಶ್ರೇಣಿ: ರೂ.22800-43200/-
ವಿದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್/ಎಂಸಿಎ

ಹಿರಿಯ ಸಹಾಯಕರು-05 ಹುದ್ದೆಗಳು
ವೇತನ ಶ್ರೇಣಿ: ರೂ.21600-40050/-
ವಿದ್ಯಾರ್ಹತೆ: ಬಿ.ಕಾಂ/ಬಿಬಿಎಂ/ಬಿಸಿಎ

ಕಿರಿಯ ಸಹಾಯಕರು-12 ಹುದ್ದೆಗಳು
ವೇತನ ಶ್ರೇಣಿ: ರೂ.20000-36300/-
ವಿದ್ಯಾರ್ಹತೆ: ಬಿ.ಕಾಂ/ಬಿಬಿಎಂ/ಬಿಸಿಎ

ಸಹಾಯಕರು-08 ಹುದ್ದೆಗಳು
ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ

ವಯೋಮಿತಿ
ದಿನಾಂಕ 30-07-2017 ರಲ್ಲಿದ್ದಂತೆ ಸಾಮಾನ್ಯ ವರ್ಗಕ್ಕೆ 35 ವರ್ಷ, ಹಿಂದುಳಿದ ವರ್ಗ/ಬಿಸಿಎಂ ವರ್ಗಕ್ಕೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇಂತಹ ಹಿಂದುಳಿದ ಪಂಗಡದ ಪ್ರವರ್ಗ(1) ಗುಂಪಿಗೆ 40 ವರ್ಷ

ಅಗತ್ಯ ಅರ್ಹತೆ
ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಪ್ರಥಮ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು ಹಾಗೂ ಹಿರಿಯ ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗೆ ಗಣಕಯಂತ್ರ ಜ್ಞಾನ ಅತ್ಯಗತ್ಯ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಎರಡು ವರ್ಷ ಮತ್ತ ಮೇಲ್ಪಟ್ಟು ಅನುಭವ ಹೊಂದಿರುವವರಿಗೆ ಆಧ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ
ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಭರ್ತಿಮಾಡಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂಬಂಧಿಸಿದ ಎಲ್ಲಾ ವರ್ಷಗಳ ಪದವಿ ಪರೀಕ್ಷೆಯ ಅಂಕಪಟ್ಟಿ, ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಹಿಂದುಳಿದ ವರ್ಗ) ಹುಟ್ಟಿದ ತಾರೀಖಿನ ದೃಢೀಕರಣ ನಕಲು ಮತ್ತು ಅನುಭವ ಪತ್ರಗಳನ್ನು ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡಿರುವ ರಶೀದಿಯೊಂದಿಗೆ ಲಗತ್ತಿಸಿ ಲಕೋಟೆ ಮೇಲೆ ಇಂತಹ ಹುದ್ದೆಗಾಗಿ ಅರ್ಜಿ ಎಂದು ನಮೂದಿಸಿ ಬ್ಯಾಂಕಿನ ಆಡಳಿತ ಕಚೇರಿ ವಿಳಾಸಕ್ಕೆ ಕಳುಹಿಸಬೇಕು.

ಆಡಳಿತ ಕಛೇರಿ ವಿಳಾಸ
ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನಿ.,
ಡಾ.ರಾಧಕೃಷ್ಣನ್ ರಸ್ತೆ, ಎಸ್ ಎಸ್, ಪುರಂ,
ತುಮಕೂರು-572102

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ : 0816-2279414/2254027

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here