ಪಾರ್ಸಲ್ ಬಂದ ಸಲಾಡ್ ನಲ್ಲಿ ಸಿಕ್ಕಿದು ಏನು ಗೊತ್ತಾ.? ಸಿಕ್ಕಿದನು ಆ ಮಹಿಳೆ ಏನು ಮಾಡಿದಳು ಅಂತ ಇಲ್ಲಿ ನೋಡಿ..!

0
477

ಸಾಮಾನ್ಯವಾಗಿ ನಾವು ಏನಾದ್ರು ತಿನ್ನೋಕೆ ಪಾರ್ಸಲ್ ತರಿಸಿದಾಗ ಅದರಲ್ಲಿ ಜಿರಲೆ, ಹಲ್ಲಿ ಸಿಕ್ಕಿದ ಸಾಕಷ್ಟು ಉದಾಹರಣೆಗಳಿವೆ. ಅಂಥ ಸಂದರ್ಭದಲ್ಲಿ ಅಂಗಡಿಯವರನ್ನ ಬೈದುಕೊಂಡು ಆ ಊಟವನ್ನ ಬಿಸಾಡುತ್ತೇವೆ. ಆದ್ರೆ ಈ ಮಹಿಳೆಗೆ ತರಿಸಿದ್ದ ಪಾರ್ಸಲ್ ನಲ್ಲಿ ಸಿಕ್ಕಿದು ವಿಶೇಷ ಏನ್ ಅನ್ನೋದು ಇಲ್ಲಿದೆ ನೋಡಿ.

ಕ್ಯಾಲಿಫೋರ್ನಿಯಾ ಮಹಿಳೆ ಸ್ಥಳೀಯ ಮಳಿಗೆಯಲ್ಲಿ ಖರೀದಿಸಿದ ಸಲಾಡ್‍ನಲ್ಲಿ ಜೀವಂತ ಕಪ್ಪೆ ಸಿಕ್ಕಿದ್ದು, ಆಕೆ ಅದನ್ನ ಮನೆಯಲ್ಲೇ ಸಾಕಿಕೊಂಡಿದ್ದಾಳೆ.

ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿಯಾದ ಬೆಕ್ಕಿ ಗಾರ್ಫಿಂಕೆಲ್ ಸ್ಥಳೀಯ ಟಾರ್ಗೆಟ್ ಮಳಿಗೆಯಲ್ಲಿ ಸಲಾಡ್ ತೆಗೆದುಕೊಂಡಿದ್ರು. ಆಕೆ ಆಗಲೇ ಮುಕ್ಕಾಲು ಭಾಗದಷ್ಟು ಸಲಾಡ್ ತಿಂದಿದ್ರು. ಆಗ ಜೀವಂತ ಕಪ್ಪೆಯೊಂದು ಸಲಾಡ್‍ನಲ್ಲಿ ಇದ್ದಿದ್ದನ್ನು ನೋಡಿದ್ದಾರೆ.

ನನಗೆ ತುಂಬಾ ಶಾಕ್ ಆಯ್ತು, ಕಿರುಚಾಡಿದೆ. ನಂತರ ನನಗೆ ವಾಂತಿ ಕೂಡ ಆಯ್ತು. ನಾನು ವೆಜಿಟೇರಿಯನ್. ಸಲಾಡ್‍ನಲ್ಲಿ ಕಪ್ಪೆ ಇದ್ದಿದ್ದನ್ನು ನಂಬಲಾಗಲಿಲ್ಲ ಅಂತ ಗಾರ್ಫಿಂಕೆಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ನಂತರ ಗಾರ್ಫಿಂಕೆಲ್ ಆ ಕಪ್ಪೆ ಮರಿಯನ್ನು ಸೂಕ್ಷ್ಮವಾಗಿ ನೋಡಿದಾಗ ಅದು ಅರೆಜೀವವಾಗಿದ್ದುದು ಗೊತ್ತಾಗಿದೆ. ಬಳಿಕ ಆಕೆಯ ಗಂಡ ಚೆಸ್ಟ್ ಕಂಪ್ರೆಷನ್ ಮಾಡಿ ಕಪ್ಪೆ ಮರಿಯನ್ನ ಬದುಕಿಸಿ ಅದನ್ನ ಸಾಕಿಕೊಂಡಿದ್ದಾರೆ. ಹಳೇ ಅಕ್ವೇರಿಯಂವೊಂದನ್ನ ಕಪ್ಪೆಯ ಮನೆಯನ್ನಾಗಿ ಮಾಡಿದ್ದು, ಅದಕ್ಕೆ ಲಕ್ಕಿ ಅಂತ ಹೆಸರಿಟ್ಟಿದ್ದಾರೆ. ನೋಡಿ ಏನು ವಿಚಿತ್ರ.

LEAVE A REPLY

Please enter your comment!
Please enter your name here