ಹಲ್ಲಿ ಬಿದ್ದುದಕ್ಕೆ ಶುಭಾಶುಭ ಫಲಗಳು

0
1073

ತಲೆಯ ಮೇಲೆ ಬಿದ್ದರೆ ಕಲಹ,

ಮುಖದ ಮೇಲೆ ಧನಾಗಮವು,

ಕಣ್ಣುಗಳು ಮೇಲೆ ತೇಜಸ್ಸು,

ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹವು,

ಮೂಗಿನ ಮೇಲೆ ಸುಗಂಧವಸ್ತು ಪ್ರಾಪ್ತಿ,

ಮೇಲಿನ ತುಟಿಯ ಮೇಲೆ ಧನವ್ಯಯ,

ಕೆಳಗಿನ ತುಟಿಯ ಮೇಲೆ ಧನಲಾಭ,

ಮೂಗಿನ  ಕೊನೆಯಲ್ಲಿ ವ್ಯಾಧಿ ಸಂಭವ,

ಎಡ ಕಿವಿಯ ಮೇಲೆ ವ್ಯಾಪಾರಲಾಭ,

ದವಡೆಯ ಮೇಲೆ ಸ್ತ್ರೀಸೌಖ್ಯ,

ಎಡ ಭುಜದ ಮೇಲೆ ವ್ಯಥೆ,

ಬಲ ತೋಳಿನ ಮೇಲೆ ಚೋರಭಯ,

ಎಡತೋಳಿನ ಮೇಲೆ ಸುಖಪ್ರದ,

ಬಲಗೈ ಮೇಲೆ ದ್ರವ್ಯಲಾಭ,

ಬೆರಳುಗಳ ಮೇಲೆ ಶುಭ,

ಎದೆಯ ಮೇಲೆ ಯಶಸ್ಸು,

ಹೊಟ್ಟೆಯ ಮೇಲೆ ಧಾನ್ಯಲಾಭ,

ಹೊಕ್ಕಳಿನ ಮೇಲೆ ಸೌಋ್ಯ,

ಬಲ ಮೊಳಕಾಲಿನ ಮೇಲೆ ತೀರ್ಥಯಾತ್ರೆ,

ಎಡಮೊಳಕಾಲಿನ ಮೇಲೆ ಕೆಲಸ ಸಿದ್ದಿ,

ಕಾಲುಗಳ ಮೇಲೆ ಪ್ರಯಾಣವು.

Image result for kanchi lizard
ಕಂಚಿಯಲ್ಲಿರುವ ಹಲ್ಲಿ!!

ಹಲ್ಲಿಯ ಶಕುನ ಹಲ್ಲಿ ನುಡಿದ ಫಲವು

ಯಾವ ವಿಷಯವನ್ನಾದರೂ ಆಲೋಚಿಸುತ್ತ ಕುಳಿತ ಸಮಯದಲ್ಲಿ ಹಲ್ಲಿಯ 1 ಸಾರಿ ನುಡಿದರೆ ಮೃತ್ಯುವಾರ್ತೆಯ ಶ್ರವಣವು, 2 ಸಾರಿ ನುಡಿದರೆ ಸುಖವು, 3 ಸಾರಿ ನುಡಿದರೆ ಗಮನವು, 4 ಸಾರಿ ನುಡಿದರೆ ಲಾಭವು, 5 ಸಾರಿ ನುಡಿದರೆ ಒಳ್ಳೆಯದು, 6 ಸಾರಿ ನುಡಿದರೆ ಕಲಹವು,7 ಸಾರಿ ನುಡಿದರೆ ಬಂಧುಗಳು ಬರುವರು, 8 ಸಾರಿ ನುಡಿದರೆ ಮರಣಕ್ಕೆ ಸಮಾನವಾದ ಕಷ್ಟವು, 9 ಸಾರಿ ನುಡಿದರೆ ಫಲವನ್ನು ನೋಡಕೂಡದು.

ಎನ್.ಶರತ್ ಶಾಸ್ತ್ರಿ
ಶೈವಾಗಮ ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ
ಮೈಸೂರು

LEAVE A REPLY

Please enter your comment!
Please enter your name here